
ಲಾಹೋರ್(ಮೇ.07) ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ತೀವ್ರಗೊಂಡಿದೆ. ಪಾಕಿಸ್ತಾನ ಮಿಸೈಲ್ ದಾಳಿಯನ್ನು ಭಾರತ ವಿಫಲಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಭಾರತ ನೀಡಿದ ತಿರುಗೇಟಿಗೆ ಪಾಕಿಸ್ತಾನ ವಿಲವಿಲ ಒದ್ದಾಡಿದೆ. ಪಾಕಿಸ್ತಾನದ ಯಾವ ದಿಕ್ಕಿನಲ್ಲಿ ದಾಳಿಯಾಗುತ್ತಿದೆ, ಭಾರತದ ಮಿಸೈಲ್, ಡ್ರೋನ್ ದಾಳಿಯಾಗುತ್ತಿದೆ ಅನ್ನೋದು ಪಾಕಿಸ್ತಾನಕ್ಕೆ ಅರಿವಾಗುತ್ತಿಲ್ಲ. ಇದರ ನಡುವೆ ಭಾರಿ ಭದ್ರತೆಯೊಂದಿಗೆ ಬೆಚ್ಚಗೆ ನಿವಾಸದೊಳಗೆ ಕುಳಿತು ಪಾಕಿಸ್ತಾನ ಸೇನೆ ಸೇರಿದಂತೆ ಇತರ ಎಜೆನ್ಸಿಗಳಿಗೆ ಸೂಚನೆ ನೀಡುತ್ತಿದ್ದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ನಿವಾಸದ ಬಳಿಯೇ ಸ್ಫೋಟವಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ.
ಲಾಹೋರ್‌ನ ವಾಲ್ಟನ್ ವಿಮಾನ ನಿಲ್ದಾಣದ ಸಮೀಪದಲ್ಲಿ ಭಾರಿ ಸ್ಫೋಟ ನಡೆದಿದೆ ಅನ್ನೋ ಮಾಹಿತಿಗಳು ಕೇಳಿಬರುತ್ತಿದೆ. ಇತ್ತ ರಾವಲ್‌ಪಿಂಡಿಯ ಜನರಲ್ ಹೆಡ್‌ಕ್ವಾಟರ್ಸ್ ಬಳಿ ಸ್ಫೋಟ ನಡೆದಿದೆ. ಇದರ ಸಮೀಪ ಪ್ರಧಾನಿ ಶೆಹಬಾಜ್ ಷರೀಫ್ ನಿವಾಸವಿದೆ. ಎರಡು ಕಡೆ ಸ್ಫೋಟ ನಡೆದಿದೆ ಅನ್ನೋ ಮಾಹಿತಿಗಳು ಲಭ್ಯವಾಗುತ್ತಿದೆ. ಆದರೆ ಈ ಸ್ಫೋಟ ಭಾರತದ ಡ್ರೋನ್ ಅಥವಾ ಮಿಸೈಲ್ ನಡೆಸಿರುವ ಕುರಿತು ಯಾವುದೇ ಮಾಹಿತಿ ಸ್ಪಷ್ಟವಾಗಿಲ್ಲ.
Breaking ಪಾಕಿಸ್ತಾನ ಫೈಟರ್ ಜೆಟ್ ಹೊಡೆದುರುಳಿಸಿ ಪೈಲೆಟ್ ವಶಕ್ಕೆ ಪಡೆದ ಭಾರತ
ಈ ಸ್ಫೋಟದ ಕುರಿತು ಕೆಲ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ನೀಡಲಾಗಿದೆ. ಇದರ ಸತ್ಯಾಸತ್ಯತೆಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಸ್ಪಷ್ಟಪಡಿಸುತ್ತಿಲ್ಲ.
ಲಾಹೋರ್, ಕರಾಚಿ ಮೇಲೂ ಭಾರತದ ದಾಳಿ
ಪಾಕಿಸ್ತಾನ ಪ್ರತಿದಾಳಿಯನ್ನು ಹಿಮ್ಮೆಟ್ಟಿಸುತ್ತಿದೆ. ಪಾಕಿಸ್ತಾನ ಡ್ರೋನ್, ಮಿಸೈಲ್ ಮೂಲಕ ದಾಳಿ ಮಾಡುತ್ತಿದೆ. ಗಡಿಯುದ್ದಕ್ಕೂ ಪಾಕಿಸ್ತಾನ ದಾಳಿ ಮಾಡುತ್ತಿದೆ. ಜಮ್ಮು ಮತ್ತು ಕಾಶ್ಮೀರ ಮಾತ್ರವಲ್ಲ, ರಾಜಸ್ಥಾನ, ಪಂಜಾಬ್ ಗಡಿ ಭಾಗದಲ್ಲೂ ಪಾಕಿಸ್ತಾನ ದಾಳಿ ಮಾಡುತ್ತಿದೆ. ಪಾಕಿಸ್ತಾನ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಇತ್ತ ಇದಕ್ಕೆ ಪ್ರತಿಯಾಗಿ ಭಾತದ ಡ್ರೋನ್ ಪಾಕಿಸ್ತಾನದ ನಗರ ಲಾಹೋರ್ ಮೇಲೆ ದಾಳಿ ಮಾಡಿದೆ. ಇತ್ತ ಕರಾಚಿ ಬಂದರಿನ ಮೇಲೂ ಸ್ಫೋಟ ನಡೆದಿದೆ.
ಆಪರೇಶನ್ ಸಿಂದೂರ್
ಪೆಹಲ್ಗಾಂನಲ್ಲಿ ನಡೆದ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಮೂಲಕ ಪಾಕಿಸ್ತಾನದ ಉಗ್ರ ತಾಣಗಳ ಮೇಲೆ ದಾಳಿ ಮಾಡಿದೆ. 9 ಉಗ್ರ ತಾಣಗಳನ್ನು ಧ್ವಂಸಗೊಳಿಸಿದೆ. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನ ಗಡಿಯಲ್ಲಿ ದಾಳಿ ಮಾಡಿತ್ತು. ಸತತ ದಾಳಿ ಮಾಡುತ್ತಲೇ ಬಂದಿದೆ. ಇದೀಗ ಭಾರತ ಸೇನೆ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತಿದೆ.
ಆಪರೇಶನ್ ಸಿಂದೂರ್‌ನಿಂದ ದೇಶವನ್ನು ಕಾಪಾಡು ಅಲ್ಲಾ, ಸಂಸತ್ತಿನಲ್ಲಿ ಕಣ್ಣೀರಿಟ್ಟ ಪಾಕ್ ಸಂಸದ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ