ಕೊರೋನಾ ಶಾಕ್ ಬೆನ್ನಲ್ಲೇ ಇದೀಗ ಫ್ರಾನ್ಸ್‌ನಲ್ಲಿ ಹರಡುತ್ತಿದೆ ಬಾತುಕೋಳಿ ಜ್ವರ!

By Suvarna News  |  First Published Dec 7, 2020, 5:56 PM IST

ಚೀನಾ ನೀಡಿದ ಕೊರೋನಾ ಶಾಕ್‌ನಿಂದ ಇನ್ನೂ ಚೇತರಿಸಿಕೊಂಡಿಲ್ಲ. ವೈರಸ್ ಭಾರತ ಸೇರಿದಂತೆ ವಿಶ್ವದಲ್ಲೇ ಆರ್ಭಟಿಸುತ್ತಿದೆ. ಈ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಇನ್ನೂ ಬಿಡುಗಡೆಯಾಗಿಲ್ಲ. ಇದರ ಬೆನ್ನಲ್ಲೇ ಇದೀಗ ಫ್ರಾನ್ಸ್‌ನಿಂದ ಮತ್ತೊಂದು ಸಾಂಕ್ರಮಿಕ ಜ್ವರದ ಅಪಾಯ ಎದುರಾಗಿದೆ.


ಫ್ರಾನ್ಸ್(ಡಿ.07):  ಚೀನಾದ ವುಹಾನ್‌ನಿಂದ ಹರಡಲು ಆರಂಭಿಸಿದ ಕೊರೋನಾ ವೈರಸ್, ಮಿಂಚಿನ ವೇಗದಲ್ಲಿ ಭಾರತ ಸೇರಿದಂತೆ ವಿಶ್ವವ್ಯಾಪಿ ಹರಡಿತು. ಇಡೀ ವಿಶ್ವವೇ ಲಾಕ್‌ಡೌನ್ ಮೂಲಕ ಸ್ಥಬ್ಧವಾಗಿತ್ತು. ಇನ್ನೂ ಕೂಡ ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ. ಈ ಆತಂಕದ ನಡುವೆ ಫ್ರಾನ್ಸ್‌ನಲ್ಲಿ ಇದೀಗ ಬಾತುಕೋಳಿ ಫಾರ್ಮ್‌ನಿಂದ ಸಾಂಕ್ರಮಿಕ ಜ್ವರ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.

ಕೊರೋನಾ ನಡುವೆ ನಿಗೂಢ ರೋಗ; ಆಂಧ್ರದಲ್ಲಿ 228 ಮಂದಿ ಆಸ್ಪತ್ರೆ ದಾಖಲು!

Latest Videos

undefined

ಫ್ರಾನ್ಸ್‌ನ ಸೌತ್‍ವೆಸ್ಟರ್ಸನ್ ವಲಯದಲ್ಲಿನ ಬಾತುಕೋಳಿ ಫಾರ್ಮ್‌ಗಳಲ್ಲಿ ಈ ಜ್ವರ ಕಾಣಿಸಿಕೊಂಡಿದೆ.  ಈ ಸಾಂಕ್ರಾಮಿಕ ಜ್ವರ ಯುರೋಪ್ ರಾಷ್ಟ್ರಗಳಲ್ಲಿ ತೀವ್ರ ವೇಗವಾಗಿ ಹರಡುತ್ತಿದೆ. ಹೀಗಾಗಿ ಬಾತುಕೋಳಿ ಜ್ವರ ಕಾಣಿಸಿಕೊಂಡ  ಯೂರೋಪ್‌ನ ಬಹುತೇಕ ಭಾಗಗಳಲ್ಲಿ ಬಾತುಕೋಳಿ ಫಾರ್ಮ್ ಮುಚ್ಚಲು ಆದೇಶಿಸಲಾಗಿದೆ. 

ಇದು ಹರಡಬಲ್ಲ ಹಕ್ಕಿ ಜ್ವರವಾಗಿದೆ. ಹೀಗಾಗಿ ಮಾನವನ ದೇಹಕ್ಕೂ ಹರಡುವ ಸಾಧ್ಯತೆ ಇದೆ. ಆದರ ಇದರ ತೀವ್ರತೆ ಕುರಿತು ಅಧ್ಯಯನ, ಪರೀಕ್ಷೆಗಳು ನಡೆಯುತ್ತಿದೆ. ಈಗಾಗಲೇ ಲಕ್ಷಾಂತರ ಬಾತುಕೋಳಿಗಳನ್ನು ಕೊಲ್ಲಲಾಗಿದೆ. ಆರಂಭಿಕ ಹಂತದ ಪರೀಕ್ಷೆಗಳಲ್ಲಿ H5 ಎವಿಯನ್ ರೋಗಕಾರರ ವೈರಸ್ ಪತ್ತೆಯಾಗಿದೆ ಎಂದು ಫ್ರಾನ್ಸ್ ಹೇಳಿದೆ.

ಸಾಂಕ್ರಾಮಿಕ ಹಕ್ಕಿ ಜ್ವರದ ತೀವ್ರತೆ ಕುರಿತು ಪರೀಕ್ಷೆ ನಡೆಯುತ್ತಿದೆ. ಇತರ ವೈರಸ್‌ಗಳಂತೆ ಈ ಬಾತುಕೊಳಿ ಜ್ವರ ಮಾನವನ ದೇಹ ಪ್ರವೇಶಿಸಿದ ವರದಿಯಾಗಿಲ್ಲ. ಆದರೆ ತೀವ್ರ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

click me!