ಈ ದೇಶದಲ್ಲಿ ಅಕ್ರಮವಾಗಿ ಕೆಲಸ ಮಾಡಿದ್ರು ಪ್ರಪಂಚದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್

By Mahmad RafikFirst Published Oct 27, 2024, 11:06 AM IST
Highlights

ಉದ್ಯಮಿ ಎಲಾನ್ ಮಸ್ಕ್ 1990ರಲ್ಲಿ ಅಮೆರಿಕದಲ್ಲಿ ಅಕ್ರಮವಾಗಿ ಕೆಲಸ ಮಾಡಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. 1995ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಶಿಕ್ಷಣಕ್ಕಾಗಿ ಬಂದಿದ್ದರೂ, ಅಧ್ಯಯನ ಮುಂದುವರಿಸದೆ ಕಂಪನಿ ಆರಂಭಿಸಿದ್ದರು.

ವಾಷಿಂಗ್ಟನ್:  ದಕ್ಷಿಣ ಆಫ್ರಿಕಾ ಮೂಲದ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್, 1990ರ ವೇಳೆ ಅಮೆರಿಕಾದಲ್ಲಿ ಅಕ್ರಮವಾಗಿ ಕೆಲಸ ಮಾಡಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ಇಂದು ವರದಿ ಮಾಡಿದೆ. 1990ರಲ್ಲಿ ತಮ್ಮ ಕಂಪನಿ ಆರಂಭಿಸುವ ಮೊದಲು ಅಕ್ರಮವಾಗಿ ಕೆಲಸ ಮಾಡುತ್ತಾ ಕೆಲ ಸಮಯದವರೆಗೆ ಅಮೆರಿಕದಲ್ಲಿದ್ದರು. 1995ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಶಿಕ್ಷಣ ಪಡೆಯಲು ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊಗೆ ಬಂದಿದ್ದರು. ಆದರೆ ಎಂದಿಗೂ ತರಗತಿಗೆ ಹಾಜರಾಗದ ಎಲಾನ್ ಮಸ್ಕ್ ಅಧ್ಯಯನ ಪೂರ್ಣಗೊಳಿಸಿಲ್ಲ. ಈ ಸಮಯದಲ್ಲಿ ಸಾಫ್ಟ್‌ವೇರ್ ಕಂಪನಿ Zip2 ಸ್ಥಾಪಿಸಿ ಅದನ್ನು 1999ರಲ್ಲಿ  $300 ಮಿಲಿಯನ್‌ಗೆ ಮಾರಾಟ ಮಾಡಿದರು ಎಂದು ವರದಿಯಾಗಿದೆ. 

ವಾಷಿಂಗ್ಟನ್ ಪೋಸ್ಟ್ ವರದಿ ಕುರಿತು ಪ್ರತಿಕ್ರಿಯಿಸಿರುವ ಕಾನೂನು ತಜ್ಞರು, ಶಿಕ್ಷಣಕ್ಕಾಗಿ ಬಂದಿರುವ ವಿದ್ಯಾರ್ಥಿ ಅಧ್ಯಯನದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು ಎಂದು ಹೇಳುತ್ತಾರೆ. ಈ ವರದಿ ಕುರಿತು ಎಲಾನ್ ಮಸ್ಕ್ ಆಗಲಿ ಅಥವಾ ಅವರ ವಕೀಲ ಅಲೆಕ್ಸ್ ಸ್ಪಿರೊ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್, ಟೆಸ್ಲಾ, ಸೋಶಿಯಲ್ ಮೀಡಿಯಾ ಕಂಪನಿ ಎಕ್ಸ್ ಮತ್ತು ದಿ ಬೋರಿಂಗ್ ಕಂಪನಿಗಳು ಸಹ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. 

Latest Videos

ಇದನ್ನೂ ಓದಿ: ಕಮಲಾ, ಬೈಡೆನ್ ಹತ್ಯೆ ಯತ್ನ ಏಕೆ ನಡೆದಿಲ್ಲ?: ಎಲಾನ್ ಮಸ್ಕ್‌ ವಿವಾದ

2020ರ ಪಾಡ್‌ಕಸ್ಟ್ ಕಾರ್ಯಕ್ರಮದಲ್ಲಿ ಎಲಾನ್ ಮಸ್ಕ್, ಅಮೆರಿಕಾದಲ್ಲಿ ಅಕ್ರಮವಾಗಿ ಕೆಲಸ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ್ದರು. ನಾನು ಅಲ್ಲಿ ಕಾನೂನುಬದ್ದವಾಗಿಯೇ ಇದ್ದೆ, ವಿದ್ಯಾರ್ಥಿಯಾಗಿದ್ದ ನನಗೆ ಅಲ್ಲಿ ಕೆಲಸ ಮಾಡುವ ಅವಕಾಶವನ್ನು ಸಹ ನೀಡಲಾಗಿತ್ತು ಎಂದು ಹೇಳಿದ್ದರು. ಇದೇ ವೇಳೆ 1997ರಲ್ಲಿ ಅಮೆರಿಕದಲ್ಲಿ ಕೆಲಸ ಮಾಡುವ ಅನುಮತಿಯನ್ನು ಪಡೆದುಕೊಂಡ ವಿಷಯವನ್ನು ಸಹ ಹಂಚಿಕೊಂಡಿದ್ದರು. 

ಸದ್ಯ ಅಮೆರಿಕಾದಲ್ಲಿ ಚುನಾವಣೆ ನಡೆಯುತ್ತಿದ್ದು, ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪರ ತಾವಿರೋದಾಗಿ ಎಲಾನ್ ಮಸ್ಕ್ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದಾರೆ. ನವೆಂಬರ್ 5ರಂದು ಚುನಾವಣೆ ನಡೆಯಲಿವೆ. ಡೊನಾಲ್ಡ್ ಟ್ರಂಪ್ ತಮ್ಮ ಅಧಿಕಾರಾವಧಿಯಲ್ಲಿ ಅಕ್ರಮ ವಲಸೆಗಾರರನ್ನು ಅಪರಾಧಿಗಳು ಎಂದು ಕರೆದಿದ್ದಾರೆ. 2017-2021ರ ತಮ್ಮ ಅವಧಿಯಲ್ಲಿ ಅಕ್ರಮ ವಲಸೆ ನಿಯಂತ್ರಣಕ್ಕಾಗಿ ಡೊನಾಲ್ಡ್ ಟ್ರಂಪ್ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಅಕ್ರಮ ವಲಸೆಗಾರರನ್ನು ದೇಶದಿಂದ ಹೊರ ಹಾಕುವ ಭರವಸೆಯನ್ನು ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. 

ಇದನ್ನೂ ಓದಿ: ಆ ಒಂದು ಟೆಂಡರ್ ಪಡೆಯಲು ಮುಕೇಶ್ ಅಂಬಾನಿ -ಎಲಾನ್ ಮಸ್ಕ್ ನಡುವೆ ಜಿದ್ದಾಜಿದ್ದಿ; ಇಬ್ಬರ ಮಧ್ಯೆ ಯಾಕಿಷ್ಟು ಪೈಪೋಟಿ?

click me!