Asianet Suvarna News Asianet Suvarna News

ಕಮಲಾ, ಬೈಡೆನ್ ಹತ್ಯೆ ಯತ್ನ ಏಕೆ ನಡೆದಿಲ್ಲ?: ಎಲಾನ್ ಮಸ್ಕ್‌ ವಿವಾದ

ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಬೆಂಬಲಿಗನಾದ ವಿಶ್ವದ ನಂ.1 ಶ್ರೀಮಂತ ಹಾಗೂ ಖ್ಯಾತ ಉದ್ಯಮಿ ಎಲಾನ್ ಮಸ್, ಟ್ರಂಪ್ ಹತ್ಯೆ ಯತ್ನ ಘಟನೆ ಖಂಡಿಸಲು ಹೋಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Why didnt assassination attempt on Kamala, Biden take place Elon Musk controversy akb
Author
First Published Sep 17, 2024, 10:26 AM IST | Last Updated Sep 17, 2024, 4:10 PM IST

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಬೆಂಬಲಿಗನಾದ ವಿಶ್ವದ ನಂ.1 ಶ್ರೀಮಂತ ಹಾಗೂ ಖ್ಯಾತ ಉದ್ಯಮಿ ಎಲಾನ್ ಮಸ್, ಟ್ರಂಪ್ ಹತ್ಯೆ ಯತ್ನ ಘಟನೆ ಖಂಡಿಸಲು ಹೋಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 'ಟ್ರಂಪ್ ಹತ್ಯೆಗೆ 2 ಯತ್ನಗಳು ನಡೆದಿವೆ. ಆದರೆ ಇನ್ನೂ ಏಕೆ ಹಾಲಿ ಅಧ್ಯಕ್ಷ ಜೋ ಬೈಡೆನ್ ಹಾಗೂ ಟ್ರಂಪ್ ಅವರ ಎದುರಾಳಿ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಹತ್ಯೆಗೆ ಯಾರೂ ಯತ್ನಿಸುತ್ತಿಲ್ಲ' ಎಂದು ಅವರು ಟ್ವಿಟ್ ಮಾಡಿದ್ದಾರೆ. ಅವರ ಟ್ವಿಟ್ ಈಗ ವಿವಾದ ಸೃಷ್ಟಿಸಿದೆ.

ಮತ್ತೆ ಸಾವು ಗೆದ್ದ ಟ್ರಂಪ್

ಪಿಟಿಐ ವಾಷಿಂಗ್ಟನ್:  ಅಮೆರಿಕ ಅಧ್ಯಕ್ಷ ಚುನಾವಣೆಗೆ ಕೇವಲ ಒಂದೂವರೆ ತಿಂಗಳಿರುವಾಗ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ (78) ಅವರ ಹತ್ಯೆಗೆ ಮತ್ತೊಂದು ಯತ್ನ ನಡೆದಿದೆ. ತಮ್ಮದೇ ಮಾಲೀಕತ್ವದ ಗಾಲ್ಫ್ ಕ್ಲಬ್‌ನಲ್ಲಿ ಭಾನುವಾರ ಟ್ರಂಪ್ ಅವರು ಗಾಲ್ಫ್ ಆಡುತ್ತಿದ್ದಾಗ 500 ಮೀಟರ್ ಅಂತರದಿಂದ ಅವರನ್ನು ಕೊಲ್ಲುವ ಪ್ರಯತ್ನ ನಡೆದಿದೆ. ಆದರೆ ಭದ್ರತಾ ಸಿಬ್ಬಂದಿ ಸಮಯಪ್ರಜ್ಞೆಯಿಂದ ಘೋರ ದುರಂತ ತಪ್ಪಿದೆ.

ಅಮೆರಿಕಾ ಚುನಾವಣೆಗೂ ಮೊದಲು ಭಾರತೀಯ ಮೂಲದ ಅಜ್ಜ ಅಜ್ಜಿಯ ನೆನೆದ ಕಮಲಾ ಹ್ಯಾರಿಸ್

ಭಾನುವಾರ ಆಗಿದ್ದೇನು?

ಭಾನುವಾರ ಮಧ್ಯಾಹ್ನ 1.30 (ಅಮೆರಿಕ ಕಾಲಮಾನ)ಕ್ಕೆ ಫ್ಲೋರಿಡಾದಲ್ಲಿರುವ ವೆಸ್ಟ್ ಪಾಮ್‌ನ ಟ್ರಂಪ್‌ ಇಂಟರ್‌ನ್ಯಾಷನಲ್‌ ಗಾಲ್ಫ್ ಕ್ಲಬ್ ನಲ್ಲಿ ಟ್ರಂಪ್ ಅವರು ಗಾಲ್ಫ್ ಆಡುತ್ತಿದ್ದರು. ಆ ವೇಳೆ ಅವರ ಗಾಲ್ಫ್ ಕ್ಲಬ್‌ನ ಪೊದೆಯೊಂದರಲ್ಲಿ ಎಕೆ-47 ಬಂದೂಕು ಹಿಡಿದ ವ್ಯಕ್ತಿಯೊಬ್ಬ ಟ್ರಂಪ್ ಅವರತ್ತ ಗುರಿ ಇಡುತ್ತಿದ್ದ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಆತನ ಮೇಲೆ ಗುಂಡಿನ ದಾಳಿ ನಡೆಸಿದರು. ಸ್ಥಳದಲ್ಲೇ ಬಂದೂಕು ಬಿಟ್ಟು ಆತ ಪರಾರಿಯಾದ. ಟ್ರಂಪ್ ಅವರನ್ನು ಸುತ್ತುವರೆದ ಭದ್ರತಾ ಸಿಬ್ಬಂದಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. 

ಈ ನಡುವೆ, ಟ್ರಂಪ್ ಅವರ ಮೇಲೆ ಗುಂಡಿನ ದಾಳಿಗೆ ಸಜ್ಜಾಗಿದ್ದ ವ್ಯಕ್ತಿಯನ್ನು ಬಂದೂಕುಧಾರಿ ರಾಯಾನ್ ವೆಸ್ಥೆರೌಥ್ (58) ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಆತ ಗಾಲ್ಫ್ ಮೈದಾನದ ಬಳಿ 12 ತಾಸು ಹೊಂಚು ಹಾಕಿದ್ದ ಎನ್ನಲಾಗಿದೆ. 58 ವರ್ಷದ  ಈತನ, ಉತ್ತರ ಕೆರೋಲಿನಾ ಮೂಲದವನು. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಡೊನಾಲ್ಡ್ ಟ್ರಂಪ್ ಅವರ ಕಡು ವಿರೋಧಿ. ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿಗಳಿಗೆ ಮಾತ್ರ ಈತ ದೇಣಿಗೆ ಕೊಟ್ಟಿದ್ದಾನೆ. ಹವಾಯಿಯಲ್ಲಿ ಅಗ್ಗದ ಮನೆ ನಿರ್ಮಿಸುವ ಉದ್ಯಮ ನಡೆಸುತ್ತಿದ್ದಾನೆ. 

ಕಮಲಾ ಗೆದ್ದರೆ ಅಮೆರಿಕದ ಸಾವು, ಮೂರನೇ ವಿಶ್ವಯುದ್ಧ ಖಚಿತ: ಅಧ್ಯಕ್ಷ ಅಭ್ಯರ್ಥಿ ಸ್ಫೋಟಕ ಹೇಳಿಕೆ

ತಾಲಿಬಾನ್ ಅತಿಕ್ರಮಣದ ಬಳಿಕ ಆಫ್ಘಾನಿಸ್ತಾನ ತೊರೆದಿರುವ ಮಾಜಿ ಯೋಧರ ಪಡೆ ಕಟ್ಟಿ ಉಕ್ರೇನ್ ಪರ ಹೋರಾಡುವ ಮಾತುಗಳನ್ನು 2023ರಲ್ಲಿ ಸಂದರ್ಶನದಲ್ಲಿ ಈತ ಆಡಿದ್ದ. ಪಾಕಿಸ್ತಾನ ಭ್ರಷ್ಟ ದೇಶವಾಗಿರುವ ಕಾರಣ ಅಲ್ಲಿನ ಪಾಸ್‌ಪೋರ್ಟ್ ಖರೀದಿಸಿ ಈ ಯೋಧರನ್ನು ಪಾಕಿಸ್ತಾನ ಹಾಗೂ ಇರಾನ್ ಮೂಲಕ ಉಕ್ರೇನ್‌ಗೆ ಕಳುಹಿಸಬಹುದು ಎಂದೂ ಹೇಳಿದ್ದ. ತನ್ನ ಈ ಆಲೋಚನೆಗೆ ಡಜನ್‌ಗಟ್ಟಲೆ ಮಂದಿ ಆಸಕ್ತಿ ತೋರಿದ್ದಾರೆ ಎಂದೂ ಪ್ರತಿಷ್ಠಿತ 'ನ್ಯೂಯಾರ್ಕ್ ಟೈಮ್ಸ್'ಗೆ ಆತ ಸಂದರ್ಶನ ನೀಡಿದ್ದ.

ಇದು ಟ್ರಂಪ್ ಮೇಲಾಗುತ್ತಿರುವ 2ನೇ ದಾಳಿ

ಇದು ಡೊನಾಲ್ಡ್‌ ಟ್ರಂಪ್‌ ಅವರ ಮೇಲಾಗುತ್ತಿರುವ ಎರಡನೇ ದಾಳಿಯಾಗಿದೆ. ಜುಲೈನಲ್ಲಿ ಪೆನ್ಸಿಲ್ವೇನಿಯಾ ಪ್ರಾಂತ್ಯದಲ್ಲಿ ಚುನಾವಣೆ ಪ್ರಚಾರ ನಡೆಸುವ ವೇಳೆ ಅನಾಮಿಕ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದರು. ಅಂದು ಕೂದಲೆಳೆಯಲ್ಲಿ ಟ್ರಂಪ್‌ ಪಾರಾಗಿದ್ದರು. ಆದರೆ ಮತ್ತೊಂದು ಗುಂಡು ಅವರ ಬಲಗಿವಿಯನ್ನು ಸೀಳಿ ಘಾಸಿಗೊಳಿಸಿತ್ತು. ಭಾನುವಾರ ನಡೆದ ದಾಳಿಯಿಂದಾಗಿ ಡೊನಾಲ್ಡ್ ಟ್ರಂಪ್‌ ಅವರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮೇಲೆ ಎರಡನೇ ಬಾರಿಗೆ ದಾಳಿ ಯತ್ನ ನಡೆದಿರುವುದು ಅಲ್ಲಿನ ಎಫ್‌ಬಿಐ ತನಿಖಾ ಸಂಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಟ್ರಂಪ್‌ ಅವರ ಮೇಲೆ ನಡೆದ ಮೊದಲ ದಾಳಿಯಿಂದ ಎಫ್‌ಬಿಐ ಪಾಠ ಕಲಿತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ.

Latest Videos
Follow Us:
Download App:
  • android
  • ios