
ವಾಷಿಂಗ್ಟನ್(ಸೆ.01): 200 ಅಮೆರಿಕ ಪ್ರಜೆಗಳು ಹಾಗೂ ಅಷ್ಘಾನಿಸ್ತಾನ ತೊರೆಯಲು ಬಯಸಿದ್ದ ಸಾವಿರಾರು ಆಫ್ಘನ್ನರನ್ನು ಬಿಟ್ಟು ಅಮೆರಿಕದ ವಾಯುಪಡೆಯ ಕೊನೆಯ ವಿಮಾನ ಕಾಬೂಲ್ ವಿಮಾನ ನಿಲ್ದಾಣದಿಂದ ಹೊರಟಿತು. ಉಳಿದವರು ಈಗ ದೇಶ ತೊರೆಯಲು ತಾಲಿಬಾನಿಗಳನ್ನು ನೆಚ್ಚಿಕೊಳ್ಳುವಂತಾಗಿದೆ.
ಶರಣಾಗಿ, ಇಲ್ಲ ಸಾಯಲು ಸಿದ್ಧರಾಗಿ: ಅಮೆರಿಕ ಬೆಂಬಲಿಸಿದವರ ಮನೆಗೆ ಬೆದರಿಕೆ ಪತ್ರ!
‘ಅಫ್ಘಾನಿಸ್ತಾನದಲ್ಲಿ ಉಳಿದಿರುವ ಅಮೆರಿಕನ್ನರು ಮತ್ತು ದೇಶ ತೊರೆಯಲು ಬಯಸಿರುವ ಆಫ್ಘನ್ನರನ್ನು ಕರೆತರಲು ಅಮೆರಿಕ ಪ್ರಯತ್ನ ಮಾಡುತ್ತಿದೆ. ಅಫ್ಘಾನಿಸ್ತಾನದ ನೆರೆಯ ದೇಶಗಳೊಂದಿಗೆ ಸತತ ಸಂಪರ್ಕದಲ್ಲಿದ್ದು ಉಳಿದವರನ್ನು ಸುರಕ್ಷಿತವಾಗಿ ರಸ್ತೆಯ ಮೂಲ ಅಥವಾ ಒಮ್ಮೆ ವಿಮಾನ ನಿಲ್ದಾಣ ತೆರೆದರೆ ಹೆಲಿಕಾಪ್ಟರ್‌ಗಳ ಮೂಲಕ ಕರೆತರಲಾಗುತ್ತದೆ. ಅಮೆರಿಕನ್ನರ ಭವಿಷ್ಯದ ದೃಷ್ಟಿಯಿಂದ ತಾಲಿಬಾನಿಗಳ ಜೊತೆ ಸಂಪರ್ಕವನ್ನು ಸಾಧಿಸಲು ಅಮೆರಿಕ ಅಷ್ಘಾನಿಸ್ತಾನದ ತನ್ನ ರಾಯಭಾರ ಕಚೇರಿಯನ್ನು ಕತಾರ್‌ನ ದೋಹಾದಲ್ಲಿ ನೆಲೆಗೊಳಿಸಿದೆ’ ಎಂದು ಅಮೆರಿಕದ ರಕ್ಷಣಾ ಸಚಿವ ಆಂಟನಿ ಬ್ಲಿಂಕನ್ ಹೇಳಿದ್ದಾರೆ.
ಸೇವಾ ಶ್ವಾನಗಳ ಬಿಟ್ಟುಹೋದ ಅಮೆರಿಕ
ಸೋಮವಾರ ರಾತ್ರಿ ಕಾಬೂಲ್‌ನಿಂದ ತೆರಳಿದ ಅಮೆರಿಕ ಯೋಧರು, ಈ ವೇಳೆ ತಮ್ಮ ಅಫ್ಘನ್ ಕಾರ್ಯಾಚರಣೆ ವೇಳೆ ಸೇವೆಗಾಗಿ ಬಳಸಿಕೊಂಡಿದ್ದ ಹಲವು ಶ್ವಾನಗಳನ್ನು ಏರ್‌ಪೋರ್ಟ್‌ನಲ್ಲೇ ಬಿಟ್ಟುಹೋಗಿದ್ದಾರೆ. ಅಮೆರಿಕ ಸರ್ಕಾರದ ಈ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.
73 ವಿಮಾನ, 97 ಮಿಲಿಟರಿ ವಾಹನ ನಾಶ ಮಾಡಿ ಅಪ್ಘಾನ್ ಬಿಟ್ಟ ಅಮೆರಿಕ: ಉಳಿದಿದ್ದೆಷ್ಟು?
ಕಾರ್ಯಾಚರಣೆ ವೇಳೆ ಬಾಂಬ್ ಪತ್ತೆ ಸೇರಿದಂತೆ ನಾನಾ ಕೆಲಸಗಳಿಗಾಗಿ ಇವುಗಳನ್ನು ತರಬೇತಿ ನೀಡಿ ಬಳಸಿಕೊಳ್ಳಲಾಗಿತ್ತು. ಆದರೆ ತಮ್ಮ ಕೆಲಸ ಮುಗಿಯುತ್ತಲೇ ಅವುಗಳನ್ನು ಅನಾಥರಾಗಿ ಬಿಟ್ಟುಹೋಗಿದ್ದಕ್ಕೆ ಪ್ರಾಣಿಪ್ರಿಯ ಸಂಘಟನೆಗಳು ಕಿಡಿಕಾರಿವೆ. ಈ ನಡುವೆ ಅಮೆರಿಕದ ಸಂಘಟನೆಯೊಂದು ಸ್ಥಳೀಯ ಸಂಸ್ಥೆಗಳ ಜೊತೆಗೂಡಿ ನಾಯಿಗಳನ್ನು ಸುರಕ್ಷಿತವಾಗಿ ತೆರವು ಮಾಡುವ ಕೆಲಸಕ್ಕೆ ಕೈಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ