* ಅಫ್ಘಾನಿಸ್ತಾನದಲ್ಲಿ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳುತ್ತಿರುವ ತಾಲಿಬಾನಿಗಳು
* ಸಲಿಂಗಕಾಮಿಯೊಬ್ಬನ ಮೇಲೆ ಅತ್ಯಾಚಾರ ಎಸಗಿ ಮಾರಣಾಂತಿಕ ಹಲ್ಲೆ
ಕಾಬೂಲ್(ಸೆ.01): ಅಫ್ಘಾನಿಸ್ತಾನದಲ್ಲಿ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳುತ್ತಿರುವ ತಾಲಿಬಾನಿಗಳು ಇದೀಗ, ಸಲಿಂಗಕಾಮಿಯೊಬ್ಬನ ಮೇಲೆ ಅತ್ಯಾಚಾರ ಎಸಗಿ, ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಬಂದ ಬಳಿಕ ಇಸ್ಲಾಮಿಕ್ ಕಾನೂನು ಹೇಗಿರಲಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹಲ್ಲೆಗೆ ಒಳಗಾದ ವ್ಯಕ್ತಿಯ ವಿವರಗಳು ಬಹಿರಂಗಗೊಂಡಿಲ್ಲ.
ಕಾಬೂಲ್ ತಾಲಿಬಾನಿಗಳ ವಶವಾದ ಬಳಿಕ ಆ ವ್ಯಕ್ತಿ ಮನೆಯೊಂದರಲ್ಲಿ ಅವಿತುಕೊಂಡಿದ್ದ. ಸ್ನೇಹಿತನ ಸೋಗಿನಲ್ಲಿ ಇಬ್ಬರು ತಾಲಿಬಾನ್ ಉಗ್ರರು ಸಲಿಂಗ ಕಾಮಿಯನ್ನು ಸಂಪರ್ಕಿಸಿ ದೇಶದಿಂದ ಸುರಕ್ಷಿತವಾಗಿ ಹೊರಗೆ ಹೋಗಲು ಸಹಾಯ ಮಾಡುವುದಾಗಿ ತಿಳಿಸಿದ್ದರು. ಅವರ ಮಾತನ್ನು ನಂಬಿ ಸಲಿಂಗಕಾಮಿ ತಾಲಿಬಾನ್ ಉಗ್ರರನ್ನು ಭೇಟಿ ಆಗಿದ್ದ.
ಬಳಿಕ ಆತನ ಮೇಲೆ ಇಬ್ಬರು ಉಗ್ರರು ಅತ್ಯಚಾರ ಎಸಗಿದ್ದು, ಮನಬಂದಂತೆ ಥಳಿಸಿದ್ದಾರೆ. ಅಲ್ಲದೇ ಆತನ ತಂದೆಗೆ ಫೋನ್ ಮಾಡಿ ನಿಮ್ಮ ಮಗ ಸಲಿಂಗಕಾಮಿ ಎಂಬ ಸಂಗತಿಯನ್ನೂ ತಿಳಿಸಿದ್ದಾರೆ.