
ಕಾಬೂಲ್(ಸೆ.01): ಅಮೆರಿಕ ಸೇನೆ ತೆರವಾದ ಬೆನ್ನಲ್ಲೇ ಅಷ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಚುರುಕುಗೊಂಡಿದ್ದು, ಇರಾನ್ ಮಾದರಿ ಸರ್ಕಾರ ರಚನೆಯ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಂದರೆ ಇಲ್ಲಿ ಅಧ್ಯಕ್ಷರಿಗಿಂತಲೂ ಧಾರ್ಮಿಕ ನಾಯಕರೇ ಅತ್ಯುನ್ನತ ಸ್ಥಾನ ಹೊಂದಿರಲಿದ್ದಾರೆ.
ಹೀಗಾಗಿ ತಾಲಿಬಾನ್ ಸಂಘಟನೆಯ ಪ್ರಮುಖ ಧಾರ್ಮಿಕ ನಾಯಕ ಎಂದೇ ಗುರುತಿಸಿಕೊಂಡಿರುವ ಹೈಬತುಲ್ಲಾಹ್ ಅಖುಂಜಾದಾ ದೇಶದ ಹೊಸ ಸರ್ವೋಚ್ಛ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಆತ ಕಾಬೂಲ್ ಬದಲು ಕಂದಹಾರ್‌ನಿಂದಲೇ ಆಡಳಿತ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಖುಂಜಾದಾನ ಸಹಾಯಕ ಮುಲ್ಲಾ ಅಬ್ದುಲ್ ಘನಿ ಬರಾದರ್ ಅಥವಾ ಧಾರ್ಮಿಕ ವ್ಯವಹಾರ ಮತ್ತು ಸಿದ್ಧಾಂತಗಳ ನಿರ್ವಹಣೆ ಮಾಡುವ ಮುಲ್ಲಾ ಒಮರ್ ಪುತ್ರ ಮುಲ್ಲಾ ಯಾಕೂಬ್ ಅವರ ಪೈಕಿ ಒಬ್ಬರು ಪ್ರಧಾನಿಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಇನ್ನು ಅಬ್ದುಲ್ ಹಕೀಮ್ ಹಖ್ಖಾನಿ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ