ಅಮೆರಿಕದ ಸೋಂಕು ನಿಯಂತ್ರಣ ತಂಡಕ್ಕೆ ವಿದುರ್‌ ಶರ್ಮಾ ಸಲಹೆಗಾರ!

Published : Jan 17, 2021, 01:58 PM IST
ಅಮೆರಿಕದ ಸೋಂಕು ನಿಯಂತ್ರಣ ತಂಡಕ್ಕೆ ವಿದುರ್‌ ಶರ್ಮಾ ಸಲಹೆಗಾರ!

ಸಾರಾಂಶ

ಕೊರೋನಾ ಅಬ್ಬರ ನಿಯಂತ್ರಿಸಲು ಅಮೆರಿಕ ನೂತನ ಅಧ್ಯಕ್ಷರ ಯತ್ನ| ಅಮೆರಿಕದ ಸೋಂಕು ನಿಯಂತ್ರಣ ತಂಡಕ್ಕೆ ವಿದುರ್‌ ಶರ್ಮಾ ಸಲಹೆಗಾರ| ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನವನ್ನು ಚುರುಕುಗೊಳಿಸುವ ಮಹತ್ವಾಕಾಂಕ್ಷೆ

ವಾಷಿಂಗ್ಟನ್‌: ಭಾರತೀಯ-ಅಮೆರಿಕದ ಆರೋಗ್ಯ ತಜ್ಞ ವಿದುರ್‌ ಶರ್ಮಾ ಅವರನ್ನು ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡನ್‌ ಅವರು ತಮ್ಮ ಕೊರೋನಾ ನಿಯಂತ್ರಣ ತಂಡದ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ. ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನವನ್ನು ಚುರುಕುಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಬೈಡನ್‌ ಅವರು ತಂಡವೊಂದನ್ನು ರಚಿಸಿದ್ದಾರೆ.

ತಂಡವು ದೇಶಾದ್ಯಂತ ಹೆಚ್ಚು ಮಂದಿಗೆ ಕೊರೋನಾ ಪರೀಕ್ಷೆ, ಸಾಧ್ಯವಿರುವಷ್ಟು ಮಂದಿಗೆ ಲಸಿಕೆ ಸೇರಿದಂತೆ ಸೋಂಕು ನಿಯಂತ್ರಣಕ್ಕೆ ಅಗತ್ಯವಿರುವ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಿದೆ.

ಒಬಾಮಾ ಆಡಳಿತದ ಅವಧಿಯಲ್ಲಿ ಶರ್ಮಾ ದೇಶಿಯ ನೀತಿ ಮಂಡಳಿಯಲ್ಲಿ ಆರೋಗ್ಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಇದರ ಜೊತೆಯಲ್ಲಿ ಪ್ರೊಟೆಕ್ಟ್​ ಅವರ್​ ಕೇರ್ ನಲ್ಲಿ ಉಪ ಸಂಶೋಧನಾ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ವಿಸ್ಕನ್ಸಿನ್ ​ನಲ್ಲಿ ಜನಿಸಿ ಮಿನ್ನೆಸೋಟಾದಲ್ಲಿ ಬೆಳೆದ ಶರ್ಮಾ ಪೋಷಕರು ಭಾರತೀಯ ಮೂಲದವರಾಗಿದ್ದಾರೆ. ವಿದುರ್​ ಶರ್ಮಾ ಹಾರ್ವಡ್​ ಟಿ.ಹೆಚ್​. ಚಾನ್​ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್ ಹಾಗೂ ಲ್ಯೂಯಿಸ್​ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ .

ಅಮೆರಿಕದಲ್ಲಿ ನಡೆಯುತ್ತಿರುವ ಕೊರೊನಾ ಲಸಿಕೆ ಕಾರ್ಯಕ್ರಮವನ್ನ ಮೇಲ್ವಿಚಾರಣೆ ಮಾಡುವ ಸಲುವಾಗಿ ಈ ರೆಸ್ಪಾನ್ಸ್ ತಂಡವನ್ನ ರಚನೆ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!