ಅಮೆರಿಕದ ಆರೋಗ್ಯ ಸೇವೆಗೆ ಮಂಡ್ಯದ ಮೂರ್ತಿ ಮುಖ್ಯಸ್ಥ!

Published : Dec 08, 2020, 10:30 AM ISTUpdated : Dec 08, 2020, 01:53 PM IST
ಅಮೆರಿಕದ ಆರೋಗ್ಯ ಸೇವೆಗೆ ಮಂಡ್ಯದ ಮೂರ್ತಿ ಮುಖ್ಯಸ್ಥ!

ಸಾರಾಂಶ

ಅಮೆರಿಕದ ಆರೋಗ್ಯ ಸೇವೆಗೆ ಮಂಡ್ಯದ ಮೂರ್ತಿ ಮುಖ್ಯಸ್ಥ!| ಅಧಿಕೃತ ನೇಮಕಾತಿ ಘೋಷಿಸಿದ ಮೂರ್ತಿ| ಕ್ಸೇವಿಯರ್ ಬೆಕೆರಾ ಅಮೆರಿಕ ಆರೋಗ್ಯ ಸಚಿವ| ಬೆಕೆರಾ ಕ್ಯಾಲಿಫೋರ್ನಿಯಾ ಅಟರ್ನಿ ಜನರಲ್| ಉನ್ನತ ಹೊಣೆ ಹೊರುತ್ತಿರುವ ಮೊದಲ ಲ್ಯಾಟಿನ್| ಮಂಡ್ಯ ಮೂಲದ ಡಾ.ಮೂರ್ತಿ ಜನರಲ್ ಸರ್ಜನ್

ಮಂಡ್ಯ(ಡಿ.08): ಮಂಡ್ಯ ಮೂಲದ ಡಾ.ವಿವೇಕ್ ಮೂರ್ತಿ ಅಮೆರಿಕದ ಆರೋಗ್ಯ ಇಲಾಖೆಯ ಹೊಣೆ ಹೊರುತ್ತಾರೆಂಬ ಸುದ್ದಿಗೆ ಇದೀಗ ಫುಲ್ ಬ್ರೇಕ್ ಬಿದ್ದಿದೆ. ಡಾ.ಮೂರ್ತಿ ಜನರಲ್ ಸರ್ಜನ್ ಆಗುತ್ತಿದ್ದಾರೆ. ಕ್ಯಾಲಿಫೋರ್ನಿಯಾ ಆಟರ್ನಿ ಜನರಲ್ ಕ್ಸೇವಿಯರ್ ಬೆಕೆರಾ ಅವರಿಗೆ ಆರೋಗ್ಯ ಇಲಾಖೆಯ ಹೊಣೆ ನೀಡಲಾಗುತ್ತಿದೆ. 

ಕುಂದಾ​ಪುರದ ಮಾಲಾ ಅಡಿಗಗೆ ಅಮೆರಿಕ ಉನ್ನತ ಹುದ್ದೆ!

ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ತಮ್ಮ ಆರೋಗ್ಯ ತಂಡವನ್ನು ಘೋಷಣೆ ಮಾಡಿದ್ದು, ಮಂಡ್ಯದ ವಿವೇಕ್ ಮೂರ್ತಿಯನ್ನು ಅಮೆರಿಕದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಅತ್ಯುನ್ನತ ಹುದ್ದೆಯಾದ ಸರ್ಜನ್ ಜನರಲ್ ಆಗಿ ನೇಮಕ ಮಾಡಲಾಗಿದೆ.

ಈ ವಿಶ್ವಾಸಾರ್ಹ ಹಾಗೂ ನಿಪುಣರ ತಂಡ ಅಮೆರಿಕ ಈವರೆಗೆ ಎದುರಿಸಿದ ಕಠಿಣ ಸವಾಲುಗಳಲ್ಲಿ ಒಂದಾದ ಕೋವಿಡ್ ನಿಯಂತ್ರಿಸುವಲ್ಲಿ ಯಶಸ್ವಿಯಾಗಲಿದೆ ಎಣದು ಜೋ ಬೈಡೆನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಬೈಡೆನ್ ಸಂಪುಟದಲ್ಲಿ ಮಂಡ್ಯದ ವಿವೇಕ್ ಮೂರ್ತಿ , ಅರುಣ್ ಮಜುಂದಾರ್‌ಗೆ ಪ್ರಮುಖ ಹುದ್ದೆ?

62 ವರ್ಷದ ಬೆಕೆರಾ 12 ಬಾರಿ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅಮೆರಿಕ ಸರಕಾರದಲ್ಲಿ ಆರೋಗ್ಯದಂಥ ಮಹತ್ವದ ಇಲಾಖೆಯನ್ನು ನಿಭಾಯಿಸುವ ಮೊದಲ ಲ್ಯಾಟಿನ್ ಅಮೆರಿಕನ್ ಬೆಕೆನ್ ಆಗಲಿದ್ದಾರೆ.

ವಿಭಿನ್ನ ಹಿನ್ನೆಲೆಯುಳ್ಳ ಪ್ರತಿಭೆಗಳನ್ನು ಬೈಡನ್ ತಮ್ಮ ಸರಕಾರಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ವಿತ್ತ ಇಲಾಖೆಯಲ್ಲಿ ಹಲವು ಹೆಣ್ಣು ಮಕ್ಕಳಿಗೆ ಮಣೆ ಹಾಕಿರುವುದು ಹೊಸ ಅಧ್ಯಕ್ಷರ ಸರಕಾರದ ವಿಶೇಷ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!