ಉಪಗ್ರಹ ಚಾಲಿತ ಗನ್ ಬಳಸಿ ಇರಾನ್ ಅಣುವಿಜ್ಞಾನಿ ಹತ್ಯೆ!| ಇಂತಹ ಅತ್ಯಾಧುನಿಕ ಮಾದರಿ ದಾಳಿ ವಿಶ್ವದಲ್ಲೇ ಇದೇ ಮೊದಲು ಕೃತಕ ಬುದ್ಧಿಮತ್ತೆ ತಂತ್ರವೂ ಬಳಕೆ| ಇಸ್ರೇಲ್ ಮೇಲೆ ಆರೋಪ
ಟೆಹ್ರಾನ್(ಡಿ.08): ಇರಾನ್‌ನ ಅತ್ಯುನ್ನತ ಅಣುವಿಜ್ಞಾನಿ ಮೊಹ್ಸೆನ್ ಹತ್ಯೆಗೆ ಉಪಗ್ರಹದಿಂದ ನಿಯಂತ್ರಿಸಲ್ಪಟ್ಟ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧರಿತ ಮಷಿನ್ ಗನ್ ಬಳಸಲಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಇದು ಭಾರೀ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಇದೇ ವೇಳೆ ವಿಜ್ಞಾನಿ ಹತ್ಯೆಗೆ ತನ್ನ ಪರಂಪರಾಗತ ಶತ್ರು ಇಸ್ರೇಲ್‌ನ್ನು ಇರಾನ್ ದೂರಿದೆ. ಸ್ಥಳದಲ್ಲಿ ಮೇಡ್ ಇನ್ ಇಸ್ರೇಲ್ ಶಸ್ತ್ರಾಸ್ತ್ರ ಪತ್ತೆಯಾಗಿದೆ ಎಂದು ಇರಾನಿ ಮಾಧ್ಯಮಗಳು ಕೆಲ ದಿನಗಳ ಹಿಂದೆ ಆರೋಪಿಸಿದ್ದವು,
ಇರಾನ್‌ನ ಟಾಪ್ ಪರಮಾಣು ವಿಜ್ಞಾನಿ ಹತ್ಯೆ: ಉಗ್ರರ ಗುಂಡಿಗೆ ಮೊಹ್ಸೆನ್ ಬಲಿ!
ನಿಂತ ವಾಹನದಿಂದ ದಾಳಿ: ನ. 27 ರಂದು ಹನ್ನೊಂದು ಭದ್ರತಾ ಸಿಬ್ಬಂದಿಯೊಂದಿಗೆ ಮೊಹ್ಸೆನ್ ಇರಾನ್ ರಾಜಧಾನಿ ಟೆಹ್ರಾನ್ ಹೊರವಲಯದ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಮೊಹ್ಸೆನ್ ಗಂಭೀರವಾಗಿ ಗಾಯಗೊಂಡಿದ್ರು. ಆಸ್ಪತ್ರೆಗೆ ಸೇರಿಸಿದ್ರೂ ಅವರನ್ನ ಉಳಿಸಲಿಕ್ಕಾಗಿಲ್ಲ, ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿತ್ತು.
ಕುಲಭೂಷಣ್ ಜಾಧವ್ ಅಪಹರಿಸಿದ್ದ ಉಗ್ರ ಪಾಕ್ ಸೇನೆ ಗುಂಡಿಗೆ ಬಲಿ!
ಮೊಹ್ಸೆನ್ ಇರಾನ್‌ನ ಪರಮಾಣು ಯೋಜನೆಯ ರೂವಾರಿಯಾಗಿದ್ದರು. ಇರಾನ್‌ನ ರಹಸ್ಯ ಅಣ್ವಸ್ತ್ರ ಗಳ ಹಿಂದಿನ ಬ್ರೈನ್ ಇವರೇ ಆಗಿದ್ರು. ಪಾಶ್ಚಿಮಾತ್ಯ ದೇಶಗಳು ಇವರನ್ನು ಫಾದರ್ ಆಫ್ ಇರಾನಿಯನ್ ಬಾಂಬ್ ಎಂದೇ ಕರೆಯುತ್ತಿದ್ದುವು.