ಅಧ್ಯಕ್ಷರಾದ ಮೇಲೆ ಚೀನಾ ಮೇಲೆ ಬೈಡೆನ್ ಯುದ್ಧ ಘೋಷಣೆ ಸಂಭವ| ಚೀನಾ ಚಿಂತಕರ ಚಾವಡಿಯಿಂದ ಸರ್ಕಾರಕ್ಕೆ ಎಚ್ಚರಿಕೆ| ಆಂತರಿಕ ಬಿಕ್ಕಟ್ಟು ಶಮನವಾಗದಿದ್ದರೆ ಚೀನಾ ವಿರುದ್ಧ ದಾಳಿ
ಬೀಜಿಂಗ್(ನ.24): ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರ ನೇತೃತ್ವದ ಸರ್ಕಾರದ ರಚನೆಯಿಂದ ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ತನ್ನಿಂದ ತಾನೇ ಸುಧಾರಣೆಯಾಗಲಿದೆ ಎಂಬ ಭ್ರಾಂತಿಯಿಂದ ಹೊರಬರಬೇಕು ಎಂದು ಚೀನಾದ ಹಿರಿಯ ಅಧಿಕಾರಿಯೊಬ್ಬರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕ್ಯಾಬಿನೆಟ್ ಸದಸ್ಯರ ಘೋಷಿಸಿದ ಅಮೆರಿಕ ಭಾವಿ ಅಧ್ಯಕ್ಷ ಬೈಡನ್: ಬ್ಲಿಂಕನ್ ವಿದೇಶಾಂಗ ಸಚಿವ!
ಅಲ್ಲದೆ, ಬೈಡನ್ ಅವಧಿಯಲ್ಲಿ ಅಮೆರಿಕದಿಂದ ಎದುರಾಗಲಿರುವ ಸವಾಲುಗಳಿಗೆ ಚೀನಾ ಸಿದ್ಧವಾಗಿರಬೇಕು ಎಂದು ಚೀನಾ ಕಮ್ಯುನಿಸ್ಟ್ ಸರ್ಕಾರದ ಸಲಹೆಗಾರ ಝೆಂಗ್ ಯೊಂಗ್ನಿಯಾನ್ ಹೇಳಿದ್ದಾರೆ.
ಬೈಡೆನ್ ಸಂಪುಟದಲ್ಲಿ ಮಂಡ್ಯದ ವಿವೇಕ್ ಮೂರ್ತಿ , ಅರುಣ್ ಮಜುಂದಾರ್‌ಗೆ ಪ್ರಮುಖ ಹುದ್ದೆ?
ಸ್ಥಳೀಯ ಚಿಂತಕರ ಚಾವಡಿಯೊಂದರ ಮುಖ್ಯಸ್ಥರಾಗಿರುವ ಝೆಂಗ್, ಬೈಡನ್ ಅಮೆರಿಕದ ಅತ್ಯಂತ ದುರ್ಬಲ ಅಧ್ಯಕ್ಷ. ದೇಶೀಯ ಸಮಸ್ಯೆ ಸರಿಪಡಿಸಲಾಗದಿದ್ದರೆ, ಸರ್ಕಾರದ ವಿರುದ್ಧದ ಜನರ ಆಕ್ರೋಶ ಮರೆಮಾಚಲು ಬೈಡನ್, ಚೀನಾ ಕುರಿತಾದ ಅಮೆರಿಕನ್ನರ ಅಸಮಾಧಾನವನ್ನು ದುರುಪಯೋಗಪಡಿಸಿಕೊಳ್ಳಬಹುದು. ಟ್ರಂಪ್ ಯುದ್ಧದಲ್ಲಿ ಆಸಕ್ತಿ ಹೊಂದಿಲ್ಲ. ಆದರೆ, ಡೆಮಾಕ್ರಟಿಕ್ ಪಕ್ಷದ ಚುನಾಯಿತ ಅಧ್ಯಕ್ಷ ಬೈಡನ್ ಚೀನಾ ವಿರುದ್ಧ ಯುದ್ಧಕ್ಕೆ ಮುಂದಾಗಬಹುದು. ಹೀಗಾಗಿ ಅಮೆರಿಕ ಜೊತೆಗಿನ ಸಂಬಂಧ ವೃದ್ಧಿಗೆ ಲಭಿಸುವ ಪ್ರತಿಯೊಂದು ಅವಕಾಶವನ್ನು ಚೀನಾ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.