ಅಮೆರಿಕದಲ್ಲಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ?

By Suvarna NewsFirst Published Nov 6, 2021, 7:52 AM IST
Highlights

* ಮಕ್ಕಳಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ ಕೋರಿದ ಅಮೆರಿಕ

* ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಲಸಿಕೆಗೆ ಸಿಗುತ್ತಾ ಅನುಮೋದನೆ?

ವಾಷಿಂಗ್ಟನ್(ನ.06): 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ ನಿರ್ಮಿತ ಕೋವಿಡ್-19 ಲಸಿಕೆ ಕೋವಾಕ್ಸಿನ್ (COVAXIN) ತುರ್ತು ಬಳಕೆಗಾಗಿ ಅಮೆರಿಕದ ಅಧಿಕಾರಿಗಳಿಂದ ಅನುಮತಿ ಕೋರಿರುವುದಾಗಿ ಅಮೆರಿಕದ ಫಾರ್ಮಾ ಕಂಪನಿ ಒಕುಜೆನ್ (Ocugen) ಶುಕ್ರವಾರ ಪ್ರಕಟಿಸಿದೆ. ಈ ಲಸಿಕೆಯನ್ನು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ ಎಂಬುವುದು ಉಲ್ಲೇಖನೀಯ. 

ಇನ್ನು ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಇಲಾಖೆಯು ಈ ಮನವಿ ಸ್ವೀಕರಿಸಲು ಬೇಕಾಗುವಷ್ಟು ಮಕ್ಕಳ ಗುಂಪಿನ ಮೇಲೆ ಅಮೆರಿಕದಿಂದ ಹೊರಗೆ ನಡೆಸಿದ ಕ್ಲಿನಿಕಲ್ ಪ್ರಯೋಗದಿಂದ ಸಂಗ್ರಹಿಸಲಾದ ಡೇಟಾವನ್ನು Ocugen ಪರಿಗಣಿಸದಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Ocugenನ ಪಾಲುದಾರನಾದ ಭಾರತ್ ಬಯೋಟೆಕ್ ಮೂಲಕ ಭಾರತದಲ್ಲಿ ಕೊರೋನಾ ಲಸಿಕೆ Covaxin ಅಭಿವೃದ್ಧಿಪಡಿಸಲಾಗಿದೆ. ಈ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ (WHO)ನಿಂದ ಬುಧವಾರದಂದು ತುರ್ತು ಅನುಮೋದನೆ ದೊರೆತಿದೆ. ಇದನ್ನು ಈಗಾಗಲೇ ವಿಶ್ವದ 17 ದೇಶಗಳಲ್ಲಿ ಬಳಸಲು ಅನುಮೋದಿಸಲಾಗಿದೆ. ಈ ಲಸಿಕೆಯ ಲಕ್ಷಾಂತರ ಡೋಸ್‌ಗಳನ್ನು ಯುನೈಟೆಡ್ ಸ್ಟೇಟ್ಸ್‌ನ ಹೊರಗಿನ ವಯಸ್ಕರಿಗೆ, ವಿಶೇಷವಾಗಿ ಭಾರತದಲ್ಲಿ ನೀಡಲಾಗಿದೆ.

ಈ ವ್ಯಾಕ್ಸಿನೇಷನ್ ನಿಷ್ಕ್ರಿಯಗೊಂಡ ವೈರಸ್ ತಂತ್ರಜ್ಞಾನವನ್ನು ಬಳಸುತ್ತದೆ, ಇದು ಪೋಲಿಯೋ ಶಾಟ್ಸ್ ಒಳಗೊಂಡಂತೆ ಬಾಲ್ಯದಲ್ಲಿ ನೀಡಲಾಗುವ ಇತರ ಲಸಿಕೆಗಳಲ್ಲಿ ಸಾಮಾನ್ಯವಾಗಿದೆ. US ಕಂಪನಿಯ ಅನುಮೋದನೆಯ ಮನವಿ 2 ಮತ್ತು 18 ವರ್ಷ ವಯಸ್ಸಿನ 526 ಮಕ್ಕಳ ಅಧ್ಯಯನದ ಫಲಿತಾಂಶಗಳನ್ನು ಆಧರಿಸಿದೆ, ಅವರು 28 ದಿನಗಳ ಅಂತರದಲ್ಲಿ ಎರಡು ಡೋಸ್ ಕೋವಾಕ್ಸಿನ್ ಪಡೆದಿದ್ದಾರೆ.

ಸಂಶೋಧನೆಯ ನ್ನು ಭಾರತದಲ್ಲಿನ 25,800 ವಯಸ್ಕರ ಗುಂಪಿಗೆ ಹೋಲಿಸಲಾಗಿದೆ ಎಂದು ಕಂಪನಿ ಹೇಳಿದೆ, ಇದು 2-18 ವರ್ಷ ವಯಸ್ಸಿನ ಮಕ್ಕಳು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಒಂದೇ ರೀತಿಯ ಸುರಕ್ಷತೆಯನ್ನು ಪ್ರದರ್ಶಿಸುತ್ತಾರೆ ಎಂದು ಸೂಚಿಸಿದೆ.

ತುರ್ತು ಬಳಕೆಗೆ ಅನುಮತಿ ಕೇಳಿದ ನೋವಾವ್ಯಾಕ್ಸ್.. ಪರಿಣಾಮಕಾರಿ ಲಸಿಕೆ!

ಕೋವಿಡ್-19 ಲಕ್ಷಣಗಳ (Coronavirus) ವಿರುದ್ಧ ಕೋವಾಕ್ಸಿನ್ ಶೇ.77.8 ರಷ್ಟು ಪರಿಣಾಮಕಾರಿಯಾಗಿದೆ ಮತ್ತು ವೈರಸ್‌ನ ಹೊಸ ಡೆಲ್ಟಾ ರೂಪದ ವಿರುದ್ಧ ಶೇ.65.2 ರಷ್ಟು ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಜೂನ್‌ನಲ್ಲಿ ತಿಳಿಸಿತ್ತು. ಇದೇ ಕಾರಣಕ್ಕೆ ಮೊನ್ನೆ ಮೊನ್ನೆಯಷ್ಟೆ Covaxin  ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (WHO)  ಒಪ್ಪಿಗೆ ನೀಡಿತ್ತು.

Novavax ಎಲ್ಲ ದಾಖಲಾತಿ ಕ್ರಮಗಳನ್ನು ಪೂರೈಸಿದ್ದು World Health Organization ಗೆ ಸಲ್ಲಿಕೆ ಮಾಡಿದೆ. Novavax  ಜತೆ ಭಾರತದ ಸೇರಂ ಸಂಸ್ಥೆ 
(Serum Institute of India) ಲಸಿಕೆ ತಯಾರಿಕೆಯಲ್ಲಿ ಕೈಜೋಡಿಸಿತ್ತು. ಇಂಡೋಷಿಯಾದಲ್ಲಿ ಮೊದಲ ಬಳಕೆಗೆ ಅನುಮತಿ ಸಿಗುವ ಸಾಧ್ಯತೆ ಇದೆ.

NVX-CoV2373 ಅಥವಾ ನೋವಾವಾಕ್ಸ್ ನ್ಯಾನೊ ಪಾರ್ಟಿಕಲ್ ಪ್ರೋಟೀನ್ ಆಧಾರಿತ ಕೊರೋನಾ ಲಸಿಕೆ ಇದಾಗಿದೆ.  3ನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ರೂಪಾಂತರಿ ಹಾಗೂ ಕೊರೋನಾದಿಂದ ತೀವ್ರವಾಗಿ ಅಸ್ವಸ್ಥಗೊಂಡವರಿಗೆ ಶೇ. 100 ರಷ್ಟು ರಕ್ಷಣೆ ಒದಗಿಸಿದೆ. 3ನೇ ಹಂತದ ಕ್ಲಿನಿಕಲ್ ಪ್ರಯೋಗದ ಸರಾಸರಿ ಫಲಿತಾಂಶದಲ್ಲಿ ಕೋವಿಡ್ ವಿರುದ್ಧ ನೋವಾವಾಕ್ಸ್ ಶೇಕಡಾ 90.4 ರಷ್ಟು ಪರಿಣಾಮಕಾರಿ ಅನ್ನೋದು ದಾಖಲಾಗಿತ್ತು.

Novavax  ಎಲ್ಲ ರಾಷ್ಟ್ರಗಳ ಆರೋಗ್ಯ  ಸಚಿವಾಲಯದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಅತಿ ಹೆಚ್ಚು ಪರಿಣಾಮಕಾರಿ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಳ್ಳುವತ್ತ ಹೆಜ್ಜೆ ಇಡುತ್ತಿದೆ.

ಕೋವ್ಯಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದ ಬೆನ್ನಲ್ಲೇ, ಮಕ್ಕಳಿಗೆ ನೀಡಲು ಅಭಿವೃದ್ಧಿಪಡಿಸಲಾಗಿರುವ ಕೋವ್ಯಾಕ್ಸಿನ್‌ (Covaxin) ಲಸಿಕೆಗೂ ತ್ವರಿತ ಅನುಮೋದನೆ ಸಾಧ್ಯತೆ ದಟ್ಟವಾಗಿದೆ ಎಂದು ಡಬ್ಲ್ಯೂಎಚ್‌ಒ (WHO) ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್‌  (Soumya Swaminathan) ತಿಳಿಸಿದ್ದರು. ಮಕ್ಕಳಿಗೆ ಕೋವ್ಯಾಕ್ಸಿನ್‌ ನೀಡಲು ಅನುಮತಿಗಾಗಿ ಈಗ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಸರಿಯಾದ ದತ್ತಾಂಶವನ್ನು ಒದಗಿಸಿದರೆ ಶೀಘ್ರವೇ ಮಕ್ಕಳಿಗೆ ನೀಡಲು ಮಾನ್ಯತೆ ದೊರೆಯಲಿದೆ ಎಂದಿದ್ದರು.

click me!