ಫೈಜರ್ನಿಂ‌ದ ಕೋವಿಡ್ ಮಾತ್ರೆ ಅಭಿವೃದ್ಧಿ : ಶೇ.89ರಷ್ಟು ಪರಿಣಾಮಕಾರಿ

By Suvarna News  |  First Published Nov 6, 2021, 7:24 AM IST
  •  ಕೊರೋನಾಗೆ ಲಸಿಕೆಯನ್ನು ಬಿಡುಗಡೆ ಮಾಡಿದ್ದ ಅಂತಾರಾಷ್ಟ್ರೀಯ  ಲಸಿಕಾ ಸಂಸ್ಥೆ ಫೈಜರ್ ಇದೀಗ ಕೋವಿಡ್ 19 ವೈರಾಣು ನಿರೋಧ ಮಾತ್ರೆಯನ್ನು ಕಂಡು ಹಿಡಿದಿದೆ
  • ಕೋವಿಡ್ 19 ವೈರಾಣು ನಿರೋಧ ಮಾತ್ರೆ ಶೇ. 89 ರಷ್ಟು ಪ್ರಯೋಜನಕಾರಿ  

 ವಾಷಿಂಗ್ಟನ್ (ನ.06):  ಕೊರೋನಾಗೆ (Corona) ಲಸಿಕೆಯನ್ನು ಬಿಡುಗಡೆ ಮಾಡಿದ್ದ ಅಂತಾರಾಷ್ಟ್ರೀಯ  ಲಸಿಕಾ ಸಂಸ್ಥೆ ಫೈಜರ್ (Pfizer) ಇದೀಗ ಕೋವಿಡ್ 19 ವೈರಾಣು ನಿರೋಧ ಮಾತ್ರೆಯನ್ನು ಕಂಡು ಹಿಡಿದಿದ್ದು,  ಅದು ಶೇ. 89 ರಷ್ಟು ಪ್ರಯೋಜನಕಾರಿ ಎಂದು ಹೇಳಿದೆ. 

ಫೈಜರ್ ಮಾತ್ರೆ (Pill) ಲಸಿಕೆಯಂತೆ ಅತ್ಯಂತ ಪ್ರಯೋಜನವನ್ನು ಹೊಂದಿದ್ದು, ಕೊರೋನಾ ವಿರುದ್ಧ ಶೇ. 89ರಷ್ಟು ಪರಿಣಾಮಕಾರಿಯಾಗಿ  ಹೋರಾಡಿ ರೋಗ ನಿರೋಧಕ (Immunity Power) ಶಕ್ತಿ ಹೆಚ್ಚಳ ಮಾಡುತ್ತದೆ.  ಆಸ್ಪತ್ರೆಗೆ ಸೇರುವ ಪ್ರಮಾಣವನ್ನು  ತಡೆಯುತ್ತದೆ.  ಇದರಿಂದ ಸಾವಿನ ದುರಮತ ಗಣನೀಯ ಪ್ರಮಾಣದಲ್ಲಿ ತಡೆಯಬಹುದಾಗಿದೆ ಎಂದು ಹೇಳಿದೆ.  

Tap to resize

Latest Videos

undefined

ಮಾತ್ರೆಯಿಂದ ಕೊರೋನಾ (Corona) ರೋಗಿಗಳ ಚಿಕಿತ್ಸೆಯೂ ಸಹ ಸುಲಭವಾಗಿದ್ದು,  ವೈದ್ಯಕೀಯ ಪರೀಕ್ಷೆಯಲ್ಲಿಯೂ (MedicalTest) ಪಾಸ್‌ ಆಗಿದೆ ಎಂದು ಸಂಸ್ಥೆ ಹೇಳಿದೆ. 

ತುರ್ತು ಬಳಕೆಗೆ ಅನುಮತಿ ಕೋರಿ  ಡಾಟಾ ಸಲ್ಲಿಕೆಗೆ ಫೈಜರ್ ಸಂಸ್ಥೆ ನಿರ್ಧಾರ ಮಾಡಿದ್ದು, ಮಾತ್ರೆಯ ಡಾಟಾ ಅಮೆರಿಕದ ಡ್ರಗ್ಸ್ ರೆಕ್ಯೂಲೇಟರ್‌ಗೆ ಸಲ್ಲಿಸಲಾಗಿದೆ.  ಎಂದು ಹೇಳಿದೆ. 

ರೋಗಿಗಳನ್ನು ಉಪಚಾರ ಮಾಡುವಾಗ ದಿನಕ್ಕೆ ಮೂರು ಮಾತ್ರೆಗಳಂತೆ ನಿಡಲಾಗುತ್ತದೆ. ಪಾಕ್ಸ್‌ಲೊವಿಡ್ ಎಂದು  ಬ್ರ್ಯಾಂಡ್ಗೆ ಹೆಸರಿಡಲಾಗಿದೆ. ಇನ್ನು ಮಾತ್ರೆಗಳ ಅಭಿವೃದ್ಧಿ ಬಳಿಕ ಮಾರುಕಟ್ಟೆಯಲ್ಲಿ ಕಂಪನಿಯ ಶೇರುಗಳ ಬೆಲೆಯಲ್ಲಿಯೂ ಏರಿಕೆ ಕಂಡು ಬಂದಿದೆ. 

ಲಸಿಕೆ ಪಡೆದಿದ್ದರು ರೊಗ ನಿರೋಧಕ ಶಕ್ತಿ ಕುಂಠಿತ

 

ಫೈಜರ್‌ ಹಾಗೂ ಆಸ್ಟ್ರಾಜೆನೆಕಾದ 2 ಡೋಸ್‌ ಲಸಿಕೆಯನ್ನು ಪಡೆದವರಲ್ಲಿಯೂ ಕೊರೋನಾ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಆರು ತಿಂಗಳ ಒಳಗಾಗಿಯೇ ನಶಿಸಲು ಆರಂಭಿಸುತ್ತದೆ ಎಂಬುದನ್ನು ಬ್ರಿಟನ್‌ ಸಂಶೋಧಕರು ನಡೆಸಿದ ಅಧ್ಯಯನವೊಂದು ತಿಳಿಸಿದೆ. ಹೀಗಾಗಿ ಕೊರೋನಾದಿಂದ ರಕ್ಷಣೆಗೆ ಬೂಸ್ಟರ್‌ ಡೋಸ್‌ ನೀಡಬೇಕು ಎಂಬ ತಜ್ಞರ ಅಭಿಪ್ರಾಯಕ್ಕೆ ಇನ್ನಷ್ಟುಬಲ ಬಂದಿದೆ.

ಬ್ರಿಟನ್‌ನ ಎನ್‌ಜಿಒ ಝಡ್‌ಒಇ ಕೋವಿಡ್‌ ಅಧ್ಯಯನ ಕೇಂದ್ರದ ಸಂಶೋಧಕರು 12 ಲಕ್ಷ ಪರೀಕ್ಷಾ ಮಾದರಿಗಳನ್ನು ವಿಶ್ಲೇಷಿಸಿ ವರದಿಯನ್ನು ಸಿದ್ಧಪಡಿಸಿದ್ದಾರೆ. 2 ಡೋಸ್‌ ಫೈಝರ್‌ ಲಸಿಕೆ ಪಡೆದವರಲ್ಲಿ ಕೊರೋನಾ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ 5ರಿಂದ 6 ತಿಂಗಳ ಬಳಿಕ ಶೇ. 88ರಿಂದ ಶೇ.74ಕ್ಕೆ ಇಳಿಕೆ ಆಗಿರುವುದು ಕಂಡುಬಂದಿದೆ. ಅದೇ ರೀತಿ ಆಸ್ಟ್ರಾಜೆನೆಕಾದ ಪ್ರಭಾವ ಶೇ.74ರಿಂದ ಶೇ.74ಕ್ಕೆ ಇಳಿಕೆ ಕಂಡಿದೆ.

ಇದೇ ವೇಳೆ ಭಾರತದಲ್ಲಿ ಬಳಕೆ ಆಗುತ್ತಿರುವ ಕೋವಿಶೀಲ್ಡ್‌ನ ಪ್ರಭಾವ 4ರಿಂದ 5 ತಿಂಗಳಿನಲ್ಲಿ ಶೇ.77ರಿಂದ ಶೇ.67ಕ್ಕೆ ಇಳಿಕೆ ಆಗಿದೆ. ಆದಾಗ್ಯೂ ಅತ್ಯಂತ ವೇಗವಾಗಿ ಹರಡಬಲ್ಲ ಡೆಲ್ಟಾಪ್ರಭೇದದಿಂದ ಈಗಲೂ ಲಸಿಕೆ ಅತ್ಯುತ್ತಮ ರಕ್ಷಣೆಯನ್ನು ಒದಗಿಸುತ್ತಿದೆ. ಗಂಭೀರ ಪ್ರಕರಣಗಳನ್ನು ತಗ್ಗಿಸುದರಲ್ಲಿ ಲಸಿಕೆ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಆಸ್ಟ್ರಾ, ಫೈಝರ್‌ ಮಿಶ್ರಣದಿಂದ ಹೆಚ್ಚಿನ ರೋಗ ನಿರೋಧಕ ಶಕ್ತಿ! ಒಂದೇ ಕಂಪನಿಯ ಎರಡು ಡೋಸ್‌ ಪಡೆಯುವ ಬದಲು. ಎರಡು ಬೇರೆ ಬೇರೇ ಕಂಪನಿಗಳ ಡೋಸ್‌ ಅನ್ನು ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿ ಆಗಲಿದೆ. ಉದಾಹರಣೆಗೆ ಫೈಝರ್‌ನ ಮೊದಲ ಡೋಸ್‌ ಪಡೆದುಕೊಂಡಿದ್ದ ವ್ಯಕ್ತಿಗೆ ನಾಲ್ಕು ವಾರಗಳ ಅಂತರದಲ್ಲಿ ಆಸ್ಟ್ರಾಜೆನೆಕಾದ 2ನೇ ಡೋಸ್‌ ನೀಡುವುದರಿಂದ ಪ್ರತಿಕಾಯಗಳ ಸಾಂದ್ರತೆ ಹೆಚ್ಚಿನ ಪ್ರಮಾಣದಲ್ಲಿರಲಿದೆ ಎಂದು ಲಾನ್ಸೆಟ್‌ ಮೆಡಿಕಲ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿದೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಎರಡು ಡೋಸ್‌ಗಳ ಮಿಶ್ರಣದಿಂದ ಆಗುವ ದೇಹದ ಮೇಲೆ ಆಗುವ ಪರಿಣಾಮವನ್ನು ಅಧ್ಯಯನ ನಡೆಸಿದ ವೇಳೆ ಉತ್ತಮ ಫಲಿತಾಂಶ ಕಂಡುಬಂದಿದೆ. ಫೈಝರ್‌ ಬಳಿಕ ಆಸ್ಟ್ರಾ ಲಸಿಕೆ ಪಡೆಯುವುದಕ್ಕಿಂತಲೂ ಆಸ್ಟ್ರಾ ಬಳಿಕ ಫೈಝರ್‌ ಲಸಿಕೆ ಪಡೆದರೆ ಹೆಚ್ಚು ಉತ್ತಮ ಎಂದು ವಿಜ್ಸಾನಿಗಳು ತಿಳಿಸಿದ್ದಾರೆ.

ಇದರಿಂದಾಗಿ ಲಸಿಕೆಯ ಕೊರತೆ ಎದುರಿಸುತ್ತಿರುವ ಬಡ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ತುರ್ತಾಗಿ ಲಭ್ಯವಿರುವ ಲಸಿಕೆಗಳನ್ನು ಬಳಕೆಮಾಡಿಕೊಳ್ಳಲು ಅನುಕೂಲವಾಗಲಿದೆ. ಅಲ್ಲದೇ 2 ಡæೂೕಸ್‌ ಲಸಿಕೆಯ ನಡುವಿನ ಅಂತರವನ್ನು ಕೂಡ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ.

ಆಸ್ಟ್ರಾಜೆನೆಕಾದ 2 ಡೋಸ್‌ ಲಸಿಕೆಯ ಮಧ್ಯೆ 12 ವಾರಗಳ ಅಂತರವನ್ನು ನಿಗದಿ ಮಾಡಲಾಗಿದೆ. ಆದರೆ, ಇನ್ನೊಂದು ಕಂಪನಿಯ ಲಸಿಕೆ ಪಡೆಯಲು ಇದೇ ಅಂತರವನ್ನು ಪಾಲಿಸಬೇಕಾಗಿಲ್ಲ. ಲಭ್ಯವಿರುವ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

click me!