ಬೆಂಗಳೂರಿನ ಯುವಕ ಯಂಗ್‌ ಚಾಂಪಿಯನ್‌ ಆಫ್‌ ಅರ್ತ್

By Kannadaprabha NewsFirst Published Dec 18, 2020, 9:48 AM IST
Highlights

ವಿಶ್ವಸಂಸ್ಥೆಯ ಪರಿಸರ ಸಂಸ್ಥೆ ನೀಡುವ ಪ್ರತಿಷ್ಠಿತ ‘ಯಂಗ್‌ ಚಾಂಪಿಯನ್‌ ಆಫ್‌ ದ ಅರ್ತ್-2020’ ಪ್ರಶಸ್ತಿಗೆ ಬೆಂಗಳೂರಿನ ಮೋಹನ್ ಆಯ್ಕೆಯಾಗಿದ್ದಾರೆ.

ವಿಶ್ವಸಂಸ್ಥೆ (ಡಿ.18): ವಿಶ್ವಸಂಸ್ಥೆಯ ಪರಿಸರ ಸಂಸ್ಥೆ ನೀಡುವ ಪ್ರತಿಷ್ಠಿತ ‘ಯಂಗ್‌ ಚಾಂಪಿಯನ್‌ ಆಫ್‌ ದ ಅರ್ತ್-2020’ ಪ್ರಶಸ್ತಿಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿರುವ 29 ವರ್ಷದ ಭಾರತೀಯ ಉದ್ಯಮಿ ವಿದ್ಯುತ್‌ ಮೋಹನ್‌ ಸೇರಿ 7 ಜನರು ಭಾಜನರಾಗಿದ್ದಾರೆ.

ಮೋಹನ್‌ ಬೆಂಗಳೂರಿನ ಆರ್‌.ವಿ. ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಪೂರೈಸಿದ್ದಾರೆ. ಪ್ರಶಸ್ತಿಯು ತಲಾ 7.35 ಲಕ್ಷ ರು. ನಗದು ಬಹುಮಾನ ಹೊಂದಿದೆ.

ನಾವೀನ್ಯ ವಿಚಾರಗಳ ಮೂಲಕ ಸುಸ್ಥಿರ ಅಭಿವೃದ್ಧಿಗೆ ಮತ್ತು ಜಗತ್ತು ಎದುರಿಸುತ್ತಿರುವ ಪರಿಸರ ಸವಾಲುಗಳಿಗೆ ಸಹಾಯಕವಾಗುವ ಮಹತ್ವಾಕಾಂಕ್ಷಿ ಕೆಲಸ ಮಾಡುವ ಯುವಜನರಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ. ‘ತಕಾಚಾರ್‌’ ಎಂಬ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಮೋಹನ್‌, ಕೃಷಿ ತ್ಯಾಜ್ಯಗಳನ್ನು ಸುಡುವ ಬದಲಾಗಿ ಅವುಗಳನ್ನು ಸ್ಥಳದಲ್ಲೇ ಮೌಲ್ಯವರ್ಧಿತ ರಾಸಾಯನಿಕವಾಗಿ ಪರಿವರ್ತಿಸಲು ಅನುವು ಮಾಡುಕೊಡುವ ಉದ್ಯಮವನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಪರಿಸರದ ಉಳಿವಿಗೆ ಶ್ರಮಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಲಸಿಕೆ ಅಂದರೆ ಶೂನ್ಯ ಕೊರೋನಾ ಅಲ್ಲ: ಡಬ್ಲ್ಯುಎಚ್‌ಒ!

ಮೋಹನ್‌ ಅವರ ತಕಾಚಾರ್‌ ಕಂಪನಿಯು ಭತ್ತದ ಹೊಟ್ಟು, ಕೂಳೆ ಮತ್ತು ತೆಂಗಿನ ಕಾಯಿ ಸಿಪ್ಪೆಯನ್ನು ರೈತರಿಂದ ಖರೀದಿಸಿ ಅವುಗಳನ್ನು ಚಾರ್ಕೋಲ್‌ ಆಗಿ ಪರಿವರ್ತಿಸುತ್ತಿದೆ. 2018ರಿಂದ ಈವರೆಗೆ ಕಂಪನಿಯು ಸುಮಾರು 4500 ಕೃಷಿಕರೊಂದಿಗೆ ಕೆಲಸ ಮಾಡುತ್ತಿದ್ದು, 3000 ಟನ್‌ ಕೃಷಿ ತ್ಯಾಜ್ಯಗಳು ಬೆಂಕಿಗೆ ಆಹುತಿಯಾಗಿ ಪರಿಸರಕ್ಕೆ ಮಾರಕವಾಗುವುದನ್ನು ತಪ್ಪಿಸಿದೆ ವಿಶ್ವಸಂಸ್ಥೆಯ ಪರಿಸರ ಏಜೆನ್ಸಿ ತಿಳಿಸಿದೆ.

‘ಇಂಧನಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಬಡ ಸಮುದಾಯಗಳಿಗೆ ಆದಾಯ ಗಳಿಸುವ ಅವಕಾಶವನ್ನು ಸೃಷ್ಟಿಸುವುದು ನನಗೆ ಇಷ್ಟವಾದ ಕೆಲಸ’ ಎಂದು ಮೋಹನ್‌ ತಿಳಿಸಿದ್ದಾರೆ.

ಯಂಗ್‌ ಚಾಂಪಿಯನ್‌ ಆಫ್‌ ದ ಅಥ್‌ರ್‍ ಪ್ರಶಸ್ತಿಯನ್ನು ಸುಸ್ಥಿರ ಅಭಿವೃದ್ಧಿಗೆ ಶ್ರಮಿಸುವ 30 ವರ್ಷದೊಳಗಿನ 7 ಜನರಿಗೆ ಪ್ರತಿ ವರ್ಷ ನೀಡಲಾಗುತ್ತಿದ್ದು, ಪ್ರಶಸ್ತಿಯು ತಲಾ 10,000 ಅಮೆರಿಕ ಡಾಲರ್‌ ರು. ಒಳಗೊಂಡಿರಲಿದೆ.

click me!