ಶಾಂತಗೊಂಡ ಫ್ರಾನ್ಸ್‌ನಲ್ಲಿ ಮತ್ತೆ ಆತಂಕ; ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರೋನ್‌ಗೆ ಕೊರೋನಾ!

By Suvarna News  |  First Published Dec 17, 2020, 3:55 PM IST

ಭಯೋತ್ಪಾದಕ ದಾಳಿ ಹಾಗೂ ಫ್ರಾನ್ಸ್ ಅಧ್ಯಕ್ಷರ ಹೇಳಿಕೆಯಿಂದ ಫ್ರಾನ್ಸ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಸದ್ಯ ಪರಿಸ್ಥಿತಿ ತಿಳಿಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಕೊರೋನಾ ಅಲೆ ಹೆಚ್ಚಾಗಿದೆ. ಇದೀಗ ಫ್ರಾನ್ಸ್ ಅಧ್ಯಕ್ಷರಿಗೆ ಕೊರೋನಾ ದೃಢಪಟ್ಟಿದೆ.


ಫ್ರಾನ್ಸ್(ಡಿ.17): ಕೊರೋನಾ ವೈರಸ್ ಎರಡನೇ ಅಲೆ ಕೆಲ ರಾಷ್ಟ್ರಗಳಲ್ಲಿ ಆರಂಭಗೊಂಡಿದೆ. ಶಾಂತಗೊಂಡಿರುವ ಫ್ರಾನ್ಸ್‌ನಲ್ಲೀಗ ಮತ್ತೆ ಕೊರೋನಾ ಆರ್ಭಟ ಶುರುವಾಗಿದೆ. ಇದೀಗ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರೋನ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇಸ್ಲಾಂ ಉಗ್ರವಾದ ವಿರುದ್ಧ ನಮ್ಮ ಹೋರಾಟ, ಇಸ್ಲಾಂ ವಿರುದ್ಧ ಅಲ್ಲ: ಫ್ರಾನ್ಸ್ ಅಧ್ಯಕ್ಷ!...

Latest Videos

undefined

ಕೊರೋನಾ ದೃಢವಾಗುತ್ತಿದ್ದಂತೆ ಮಾರ್ಕೋನ್ ಸ್ವಯಂ ಐಸೋಲೇಶನ್‌ಗೆ ಒಳಗಾಗಿದ್ದಾರೆ. ಮುಂದಿನ 2 ವಾರಗಳ ಕಾಲ ಮಾರ್ಕೋನ್ ಐಸೋಲೇಶನ್‌ನಲ್ಲಿರಲಿದ್ದಾರೆ. ಫ್ರಾನ್ಸ್ ಮಾರ್ಗಸೂಚಿ ಪ್ರಕಾರ ಕನಿಷ್ಠ 7 ದಿನ ಐಸೋಲೇಶನ್‌ಗೆ ಒಳಗಾಗಬೇಕು. ಆದರೆ ಮ್ಯಾಕ್ರೋನ್‌ 2 ವಾರ  ಇರಲಿದ್ದಾರೆ. ಐಸೋಲೇಶನ್‌ನಲ್ಲಿ ಕೆಲಸ ನಿರ್ವಹಿಸುವುದಾಗಿ ಹೇಳಿದ್ದಾರೆ.

ಕೊರೋನಾ ರೋಗದ ಲಕ್ಷಣಗಳು ಕಂಡು ಬಂದ ಕಾರಣ ಮ್ಯಾಕ್ರೋನ್‌ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಕೊರೋನಾ ಸೋಂಕು ತಗುಲಿರುವುದು ದಢಪಟ್ಟಿದೆ.  ಫ್ರಾನ್ಸ್‌ನಲ್ಲಿ ಕೊರೋನಾ 2 ಅಲೆ ಕಾಣಿಸಿಕೊಂಡಿರುವುದರಿಂದ ಮಾರ್ಗಸೂಚಿಗಳನ್ನು ಬಿಗಿಗೊಳಿಸಲಾಗಿದೆ.

ಕೊರೋನಾ ಶಾಕ್ ಬೆನ್ನಲ್ಲೇ ಇದೀಗ ಫ್ರಾನ್ಸ್‌ನಲ್ಲಿ ಹರಡುತ್ತಿದೆ ಬಾತುಕೋಳಿ ಜ್ವರ!.

ಕಳೆದವಾರದಿಂದ ಫ್ರಾನ್ಸ್‌ನಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 8 ಗಂಟೆಯಿಂದ ಕರ್ಫ್ಯೂ ಜಾರಿಯಲ್ಲಿದೆ. ಇನ್ನು ಹೊಟೆಲ್ , ರೆಸ್ಟೋರೆಂಟ್, ಕೆಫೆ, ಸಿನಿಮಾ ಥಿಯೇಟರ್‌ಗಳನ್ನು ಮತ್ತೆ ಕಾರ್ಯರಂಭಿಸಲು ಅನುಮತಿ ನೀಡಿಲ್ಲ. ಕಟ್ಟು ನಿಟ್ಟಿನ ಮುಂಜಾಗ್ರತ ಕ್ರಮ ಕೈಗೊಳ್ಳಾಗಿದೆ. ಇಷ್ಟಾದರೂ ಇದೀಗ ಫ್ರಾನ್ಸ್ ಅಧ್ಯಕ್ಷರಿಗೆ ಕೊರೋನಾ ಅಂಟಿಕೊಂಡಿದೆ.

ಕೊರೋನಾ ತಗುಲಿದ ವಿಶ್ವದ ನಾಯಕರಲ್ಲಿ ಬ್ರಿಟೀಷ್ ಪ್ರಧಾನಿ ಬೊರಿಸ್ ಜಾನ್ಸನ್, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸೇರಿದ್ದಾರೆ. ಇದೀಗ ಫ್ರಾನ್ಸ್ ಅಧ್ಯಕ್ಷರು ಈ ಪಟ್ಟಿಗೆ ಸೇರಿದ್ದಾರೆ. ವಿಶ್ವದ ಹಲವು ನಾಯಕರು ಮಾರ್ಕೋನ್ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಆಶಿಸಿದ್ದಾರೆ.
 

click me!