
ನ್ಯೂಯಾರ್ಕ್ (ಡಿ.18): ಫೈಝರ್ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ನೀಡಲು ಅಮೆರಿಕ ಆರಂಭಿಸಿದ ಬೆನ್ನಲ್ಲೇ ಲಸಿಕೆಯು ಸೋಂಕಿತರೊಬ್ಬರ ಮೇಲೆ ಅಡ್ಡಪರಿಣಾಮ ಬೀರಿದೆ ಎಂದು ವರದಿಯಾಗಿದೆ.
ಅಲಾಸ್ಕಾದ ಮಧ್ಯವಯಸ್ಕ ಮಹಿಳಾ ಆರೋಗ್ಯ ಸಿಬ್ಬಂದಿಯೊಬ್ಬರಿಗೆ ಲಸಿಕೆ ನೀಡಿದಾಗ ಅವರಿಗೆ ಗಂಭೀರ ರೀತಿಯಲ್ಲಿ ಅಲರ್ಜಿ ಕಾಣಿಸಿಕೊಂಡಿದೆ.
ರಾಜ್ಯದಲ್ಲಿ ಕೊರೋನಾಗೆ 6 ಬಲಿ, 1240 ಹೊಸ ಕೇಸ್ ಪತ್ತೆ ..
ಅವರನ್ನು ರಾತ್ರೋರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಸಿಕೆ ಪಡೆದ ಮಹಿಳೆಯಲ್ಲಿ ಈ ಹಿಂದೆ ಅಲರ್ಜಿ ಇರಲಿಲ್ಲ ಎಂದೂ ಹೇಳಿದ್ದಾರೆ.
ಫೈಝರ್ ಕಂಪನಿಯ ಲಸಿಕೆ ವಿತರಣೆಯನ್ನು ಬ್ರಿಟನ್‌ನಲ್ಲಿ ವಿಶ್ವದಲ್ಲೇ ಮೊದಲ ಬಾರಿ ಆರಂಭಿಸಿದಾಗ ಅಲ್ಲೂ ಕೆಲವರಲ್ಲೂ ಅಲರ್ಜಿ ಕಾಣಿಸಿಕೊಂಡಿತ್ತು. ಅಲರ್ಜಿ ಇರುವವರು ಲಸಿಕೆ ಪಡೆಯಬಾರದು ಎಂದು ಬ್ರಿಟನ್ ಸರ್ಕಾರ ಸೂಚನೆ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ