ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆ: 7 ಬಲಿ| ಪೂರ್ವ ಚೀನಾದಲ್ಲಿ 60 ಮಂದಿಗೆ ಸೋಂಕು| ಕೊರೋನಾ ರೀತಿ ವ್ಯಾಪಕವಾಗಿ ಹರಡುವ ಭೀತಿ
ಬೀಜಿಂಗ್(ಆ.06): ಮಹಾಮಾರಿ ಕೊರೋನಾ ವೈರಸ್‌ನಿಂದ ಚೇತರಿಸಿಕೊಳ್ಳುವ ಮುನ್ನವೇ ಚೀನಾದ ಮೇಲೆ ಮತ್ತೊಂದು ವೈರಸ್ ದಾಳಿಯಿಟ್ಟಿದ್ದು, 7 ಜನರನ್ನು ಬಲಿ ಪಡೆದಿದೆ. ಈ ವೈರಸ್ ಅಪಾಯಕಾರಿ ಮಟ್ಟದಲ್ಲಿ ಹರಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಕೊರೋನಾ ವೈರಸ್ ವೀಕ್ನೆಸ್ ಪತ್ತೆ ಹಚ್ಚಿದ ರಷ್ಯಾ; ಶೇ.99.9 ವೈರಸ್ ನಾಶಕ್ಕಿದೆ ಸುಲಭ ದಾರಿ!
undefined
ಕೀಟಗಳ ಕಡಿತದ ಮೂಲಕ ಈ ವೈರಸ್ ಮನುಷ್ಯರಿಗೆ ಹರಡಿರುವ ಸಾಧ್ಯತೆ ಎನ್ನಲಾಗುತ್ತಿದೆ. ಪೂರ್ವ ಚೀನಾದ ಜಿಯಾಂಗ್ಸು ಮತ್ತು ಅನ್ಹುಯಿ ಪ್ರಾಂತ್ಯಗಳಲ್ಲಿ ಈಗಾಗಲೇ 60 ಮಂದಿ ಸೋಂಕಿತರಾಗಿದ್ದಾರೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಈ ವೈರಸ್ ಅನ್ನು ತೀವ್ರ ಜ್ವರ ಹೊಂದಿರುವ ಥ್ರಂಬೋಸೈಟೋಫೆನಿಯಾ ಸಿಂಡ್ರೋಮ್ ಬುನ್ಯವೈರಸ್ (ಎಸ್‌ಎಫ್‌ಟಿಎಸ್‌ವಿ) ಎಂದು ಗುರುತಿಸಲಾಗಿದೆ. ಅಧ್ಯಯನದ ಪ್ರಕಾರ ಜ್ವರ ಹಾಗೂ ಕೆಮ್ಮು ಸೋಂಕಿನ ಲಕ್ಷಣಗಳಾಗಿವೆ. ಅಲ್ಲದೆ ರಕ್ತದಲ್ಲಿ ಲ್ಯುಕ್ಟೋಸೈಟ್ ಹಾಗೂ ಪ್ಲೇಟ್‌ಲೆಟ್‌ಗಳ ಪ್ರಮಾಣ ಕಡಿಮೆ ಆಗಲಿದೆ. ತಿಗಣೆ ರೀತಿಯ ಕೀಟಗಳಿಂದ ಮನುಷ್ಯರಿಗೆ ಹಬ್ಬುವ ಈ ವೈರಸ್ ಒಬ್ಬರಿಂದ ಒಬ್ಬರಿಗೆ ಪಸರಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಿಲಿಟರಿ ಲ್ಯಾಬ್‌ನಲ್ಲಿ ಕೊರೋನಾ ತಯಾರಿಸಿದ್ದ ಡ್ರ್ಯಾಗನ್: ಚೀನಾ ಬಂಡವಾಳ ಬಯಲು!
ಆದರೆ, ಇದು ಹೊಸ ವೈರಸ್ ಅಲ್ಲ. 2011ರಲ್ಲೇ ಈ ವೈರಸ್ ಪತ್ತೆ ಆಗಿತ್ತು. ಈ ವೈರಸ್ ಬಗ್ಗೆ ಗಾಬರಿ ಆಗುವ ಅಗತ್ಯವೇನೂ ಇಲ್ಲ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ ಈ ವೈರಸ್ ಕಾಣಿಸಿಕೊಂಡರೆ, ಅಂಥವರು ಸಾವನ್ನಪ್ಪುರ ಪ್ರಮಾಣ ಶೇ.30ಕ್ಕಿಂತಲೂ ಹೆಚ್ಚು ಎನ್ನಲಾಗಿದೆ.