ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ISS ನಿಂದ ವಾಪಸ್ಸಾಗುವಲ್ಲಿನ ವಿಳಂಬದ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ.
ವಾಷಿಂಗ್ಟನ್: ಸತತ 286 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್ಎಸ್)ನಲ್ಲಿ ವಾಸವಿದ್ದು, ಮಾ.18 ರಂದು ಭೂಮಿಗೆ ಮರಳಿದ ಭಾರತ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಕ್ಟೋರ್ ಮೊದಲ ಬಾರಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ತಮ್ಮ ವಿಳಂಬದ ಆಗಮನಕ್ಕೆ ಯಾರು ಹೊಣೆ, ತಮ್ಮನ್ನು ಸುರಕ್ಷಿತವಾಗಿ ಕರೆತರುವಲ್ಲಿ ಎಲಾನ್ ಮಸ್ಕ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಾತ್ರ ತಮ್ಮ ಹಿಂತಿರುಗುವಿಕೆ ತಡವಾಗಿದೆ ಎಂಬ ಮಾಹಿತಿ ಕೇಳಿದೊಡನೆ ತಮ್ಮ ಅಲೋಚನೆಗಳ ಕುರಿತು ಅಮೆರಿಕದ ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಭೂಮಿಗೆ ಹಿಂತಿರುಗುವಿಕೆ ತಡವಾದ ಕುರಿತು ಮಾಹಿತಿ ನೀಡಿದ ಸುನಿತಾ, ಈ ರೀತಿಯ ಸನ್ನಿವೇಶಗಳಿಗೆ ಮೊದಲೇ ತಯಾರಾಗಿದ್ದೆವು. ಸುದ್ದಿ ತಿಳಿದಾಗ, 'ಸರಿ, ಈ ಸಮಯದಲ್ಲಿ ನಮ್ಮನ್ನು ನಾವು ಇನ್ನಷ್ಟು ತೊಡಗಿಸಿಕೊಳ್ಳುವ ಎಂಬ ಮನೋಭಾವ ನಮ್ಮಲ್ಲಿತ್ತು' ಎಂದರು. ಇದೇ ವೇಳೆ ಬುಚ್ ವಿಲ್ಲೋರ್ ಉತ್ತರಿಸಿ 'ನಮಗೆ ಅಲ್ಲಿ ನಮ್ಮ ದೇಶದ ಗುರಿ ಮುಖ್ಯವಾಗಿತ್ತು. ಹೌದು ಈ ಅವಧಿಯಲ್ಲಿ ನನ್ನ ಮಗಳ ಶಾಲೆಯ ಆರಂಭವನ್ನು ಕಳೆದುಕೊಂಡಿದ್ದೆ. ಆದರೆ ಅದಕ್ಕಿಂತ ಹೆಚ್ಚಾಗಿ ನಮ್ಮ ದೇಶ ಮುಖ್ಯವಾಗಿತ್ತು ಎಂದು ಹೇಳಿದರು.
ತಡವಾಗಿದ್ದಕ್ಕೆ ಯಾರು ಹೊಣೆ?: ಭೂಮಿಯಿಂದ ಕಳೆದ ವರ್ಷ ತೆರಳಿದ ಬೋಯಿಂಗ್ ಸ್ಟಾರ್‌ಲೈನರ್ ಕೆಟ್ಟು ನಿಂತಿದ್ದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿಲ್ಮೋರ್, ಇದಕ್ಕೆ ಎಲ್ಲರೂ ಹೊಣೆ, ಇದರ ಕಮಾಂಡರ್ ಆಗಿದ್ದ ನಾನು, ಅಲ್ಲಿ ಯಾವುದೇ ಪ್ರಶ್ನೆಯೂ ಮಾಡಲಿಲ್ಲ. ಹಾಗಾಗಿ ನಾನು ದೋಷಿಯಾಗುತ್ತೇನೆ. ಅದೇ ರೀತಿ ಪರೀಕ್ಷೆಯಲ್ಲಿ ಹಲವು ವೈಫಲ್ಯಗಳಿತ್ತು. ಬೋಯಿಂಗ್ ಅದನ್ನು ಪರಿಗಣಿಸಿಯೇ ಇರಲಿಲ್ಲ. ಇದರಲ್ಲಿ ನಾಸಾ. ಬೋಯಿಂಗ್. ನಾವು ಎಲ್ಲರೂ ಹೊಣೆಯೇ ಎಂದರು.
ಮಸ್ಕ್, ಟ್ರಂಪ್‌ಗೆ ಆಭಾರಿ
ನಮ್ಮನ್ನು ಸುರಕ್ಷಿತವಾಗಿ ಕರೆತಂದಿದ್ದಕ್ಕೆ ಸ್ಪೇಸೆಕ್ಸ್ ಮಾಲೀಕ ಎಲಾನ್ ಮಸ್ಕ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಾವು ಆಭಾರಿ. ಮಸ್ಕ್ ಮತ್ತು ಟ್ರಂಪ್ ವಿಶ್ವಾಸವನ್ನು ಗಳಿಸಿದ್ದಾರೆ. ಇದಕ್ಕಾಗಿ ನಮ್ಮ ರಾಷ್ಟ್ರೀಯ ನಾಯಕರಿಗೆ ನಾವು ಆಭಾರಿ. ನಮ್ಮ ನಾಯಕರು ಬಾಹ್ಯಾಕಾಶ ಕ್ಷೇತ್ರದಲ್ಲಿ ಗಮನವಿಟ್ಟಿರುವುದು ನಿಜಕ್ಕೂ ಮೆಚ್ಚುಗೆಯ ಸಂಗತಿ ಎಂದು ಕೊಂಡಾಡಿದರು.