ಕಾರಿನೊಳಗೆ ಸೇರಿಕೊಂಡ ಕರಡಿ, ಸೀಟು, ಡ್ಯಾಶ್‌ಬೋರ್ಡ್ ಎಲ್ಲಾ ಪುಡಿ ಪುಡಿ!

Published : Jun 06, 2021, 06:30 PM ISTUpdated : Jun 06, 2021, 06:43 PM IST
ಕಾರಿನೊಳಗೆ ಸೇರಿಕೊಂಡ ಕರಡಿ, ಸೀಟು, ಡ್ಯಾಶ್‌ಬೋರ್ಡ್ ಎಲ್ಲಾ ಪುಡಿ ಪುಡಿ!

ಸಾರಾಂಶ

ಪಾರ್ಕ್ ಮಾಡಿದ ಕಾರಿನೊಳಗೆ ಅಚಾನಕ್ಕಾಗಿ ಸಿಕ್ಕಿ ಹಾಕಿಕೊಂಡ ಕರಡಿ ಕಾರಿನೊಳಗೆ ಸೀಟು, ಡ್ಯಾಶ್‌ಬೋರ್ಡ್ ಕಚ್ಚಿ ಪುಡಿ ಪುಡಿ ಹಾರ್ನ್ ಶಬ್ದಕ್ಕೆ ಕಾರಿನತ್ತ ಧಾವಿಸಿದ ಮಾಲಕಿ  

ಹೌಸ್ಟನ್(ಜೂ.06);  ಕಾಡುಪ್ರಾಣಿಗಳು ವಾಹನಕ್ಕೆ ಅಡ್ಡ ಬಂದು ಹಾನಿಮಾಡಿರುವ, ಜನರನ್ನು ಭಯಗೊಳಿಸಿರುವ ಘಟನೆಗಳು ಸಾಕಷ್ಟುು ನಡೆದಿದೆ. ಇದೀಗ ಅಪರೂಪದ ಘಟನೆಯೊಂದು ನಡೆದಿದೆ. ಟೆಕ್ಸಾಸ್‌ನ ಹೌಸ್ಟನ್ ನಗರದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಕರಡಿ ಸೇರಿಕೊಂಡಿದೆ. ಇಷ್ಟೇ ಆಗಿದ್ದರೆ ಪರ್ವಾಗಿಲ್ಲ, ಆದರೆ ಕರಡಿ ಹೊರಬರಲು ಸಾಧ್ಯವಾಗದೆ ಕಾರಿನೊಳಗೆ ಸೀಟು, ಡ್ಯಾಶ್ ಬೋರ್ಡ್ ಸೇರಿದಂತೆ ಎಲ್ಲವನ್ನು ಕಚ್ಚಿ ಕಚ್ಚಿ ಪುಡಿ ಮಾಡಿದೆ.

ಮರಿ ಜೊತೆ ರಸ್ತೆ ದಾಟಲು ಹರಸಾಹಸ ಪಟ್ಟ ತಾಯಿ ಕರಡಿ: ವಿಡೀಯೋ ವೈರಲ್!

ಹೌಸ್ಟನ್‌ನ ರಾಬಿನ್ ಹೈಸ್ಕೂಲ್ ಶಿಕ್ಷಕಿಯಾಗಿರುವ ಮೇರ್ ಜೇನ್ ಎಂದಿನಂತ ತರಗತಿ ಮುಗಿಸಿ ಮನಗೆ ಮರಳಿದ್ದಾರೆ. ತಮ್ಮ ರೆಸಿಡೆನ್ಶಿಯಲ್ ಮನೆ ಮುಂದಿರುವ ರಸ್ತೆಯಲ್ಲಿ ಕಾರು ಪಾರ್ಕ್ ಮಾಡಿದ್ದಾರೆ. ಬೆಳಗಿನ ಜಾವ ಕಾರಿನ ಹಾರ್ನ್ ಶಬ್ದಕ್ಕೆ ಶಿಕ್ಷಕಿ ಮನಯಿಂದ ಹೊರಬಂದಿದ್ದಾರೆ.

ಕಾರು ಅಲುಗಾಡುತ್ತಿದೆ. ಪದೆ ಪದೇ ಹಾರ್ನ್ ಶಬ್ದ ಕೇಳಿಸುತ್ತಿದೆ. ಶಿಕ್ಷಕಿಯ ನಾಯಿ ಕೂಡ ಬೊಗಳಲು ಆರಂಭಿಸಿದ ಕಾರಣ ಮನೆಯಿಂದ ಹೊರಬಂದು ಏನಾಗುತ್ತಿದೆ ಎಂದು ಪರಿಶೀಲಿಸಿದ್ದಾರೆ. ಕಾರು ಅಲುಗಾಡುತ್ತಿರುವ ಕಾರಣ ಯಾರೋ ಕಾರಿನಲ್ಲಿ ಸಿಲುಕಿದ್ದಾರೆ ಅನ್ನೋದು ಅರ್ಥವಾಗಿದೆ.

ಗಂಗಾವತಿ ನಗರದೊಳಗೆ ನುಗ್ಗಿದ ಕರಡಿ: ಮೂವರ ಮೇಲೆ ದಾಳಿ, ಬೆಚ್ಚಿಬಿದ್ದ ಜನತೆ.

ನಾಯಿ ಜೊತೆ ಕಾರಿನತ್ತ ಆಗಮಿಸಿದ ಶಿಕ್ಷಕಿಗೆ ಆಘಾತ ಎದುರಾಗಿದೆ. ಕಾರಣ ಕರಡಿಯೊಂದು ಕಾರಿನೊಳಗೆ ಅವಾಂತರ ಸೃಷ್ಟಿಸಿದೆ. ಈ ಕರಡಿ ಕಾರಿನೊಳಗೆ ಹೇಗೆ ಬಂತು ಎಂಬುದೇ ಅರ್ಥವಾಗದೇ ಹೋಗಿದೆ. ಇತ್ತ ಭಯಗೊಂಡ ಶಿಕ್ಷಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರಿನ ಡೋರ್ ತೆಗೆದು ಕರಡಿಯನ್ನು ಹೊರ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊರಬಂದ ಕರಡಿ ಕಾಡಿನತ್ತ ಓಡಿ ಹೋಗಿದೆ. ಆದರೆ ಕಾರಿನೊಳಗೆ ಸಿಕ್ಕಿ ಹಾಕಿಕೊಂಡ ಕರಡಿ ಶಿಕ್ಷಕಿ ಕಾರನ್ನು ಸಂಪೂರ್ಣ ಹಾಳು ಮಾಡಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್