ಅಂತಾರಾಷ್ಟ್ರೀಯ ಬೂಕರ್ ರೇಸಲ್ಲಿ ಕನ್ನಡ ಲೇಖಕಿ ಬಾನು ಕೃತಿ: ಆಯ್ಕೆ ಪ್ರಕ್ರಿಯೆ ಹೇಗೆ?

Published : Feb 26, 2025, 10:58 AM ISTUpdated : Feb 26, 2025, 10:59 AM IST
ಅಂತಾರಾಷ್ಟ್ರೀಯ ಬೂಕರ್ ರೇಸಲ್ಲಿ ಕನ್ನಡ ಲೇಖಕಿ ಬಾನು ಕೃತಿ: ಆಯ್ಕೆ ಪ್ರಕ್ರಿಯೆ ಹೇಗೆ?

ಸಾರಾಂಶ

ಕನ್ನಡದ ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಮತ್ತು ವಕೀಲೆ ಬಾನು ಮುಸ್ತಾಕ್ ಅವರ ಸಣ್ಣ ಕಥಾ ಸಂಕಲನ 'ಹಾರ್ಟ್ ಲ್ಯಾಂಪ್' ಲಂಡನ್‌ನಲ್ಲಿ ನಡೆಯಲಿರುವ 2025ರ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಲಾಂಗ್ ಲಿಸ್ಟ್‌ನಲ್ಲಿ ಸೇರ್ಪಡೆಯಾಗಿದೆ.

ಲಂಡನ್ (ಫೆ.26): ಕನ್ನಡದ ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಮತ್ತು ವಕೀಲೆ ಬಾನು ಮುಸ್ತಾಕ್ ಅವರ ಸಣ್ಣ ಕಥಾ ಸಂಕಲನ 'ಹಾರ್ಟ್ ಲ್ಯಾಂಪ್' ಲಂಡನ್‌ನಲ್ಲಿ ನಡೆಯಲಿರುವ 2025ರ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಲಾಂಗ್ ಲಿಸ್ಟ್‌ನಲ್ಲಿ ಸೇರ್ಪಡೆಯಾಗಿದೆ. ಇದನ್ನು ಪತ್ರಕರ್ತೆ ದೀಪಾ ಭಕ್ತಿಯವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ವಿಶ್ವಾದ್ಯಂತ ಆಯ್ಕೆಯಾದ 13 ಕೃತಿಗಳಲ್ಲಿ ಒಂದಾಗಿರುವ ಮುಸ್ತಾಕ್ ಅವರ ಕೃತಿಯು ಕುಟುಂಬ ಮತ್ತು ದಕ್ಷಿಣ ಭಾರತದ ಮುಸ್ಲಿಂ ಸಮುದಾಯದ ಉದ್ವಿಗ್ನತೆಗಳ ಚಿತ್ರಣ ಗಳನ್ನು ಸೆರೆಹಿಡಿದಿದೆ. 

ರೋಮಾಂಚಕ ಕೃತಿಯ ಚಮತ್ಕಾರಿ, ಹೃದಯಸ್ಪರ್ಶಿ ಮತ್ತು ಶೈಲಿ ನಿರ್ಣಾಯಕರನು ಆಕರ್ಷಿಸಿದೆ ಎನ್ನಲಾಗಿದೆ. ಕನ್ನಡದ ಅನುವಾದಿತ ಕೃತಿಯೊಂದು ಈ ಪ್ರಶಸ್ತಿಯ ರೇಸ್‌ನಲ್ಲಿರುವುದು ಇದೇ ಮೊದಲು. ಹಾರ್ಟ್ ಲ್ಯಾಂಪ್ ಕೃತಿಯಲ್ಲಿ 12 ಸಣ್ಣ ಕಥೆಗಳಿವೆ. ದಕ್ಷಿಣ ಭಾರತದ ಮುಸ್ಲಿಂ ಸಮುದಾ ಯದ ಅಂತರಂಗವನ್ನು ಲೇಖಕಿ ಅಪರೂಪದ ಕಥೆಗಳ ಮೂಲಕ ತೆರೆದಿಟ್ಟಿದ್ದಾರೆ. ಕೃತಿಯ ಕುರಿತು ಮಾತನಾಡಿರುವ 2025ರ ಬೂಕರ್‌ ಪ್ರಶಸ್ತಿಯ ತೀರ್ಪುಗಾರರ ಸಮಿತಿಯ ಅಧ್ಯಕ್ಷರಾದ ಮ್ಯಾಕ್ಸ್ ಪೋರ್ಟರ್, 'ಈ ಕೃತಿಯು ನಮ್ಮ ನಮ್ಮ ನಡುವೆ ನಿರ್ಮಾಣವಾಗಿರುವ ಗಡಿಗಳನ್ನು ಧಿಕ್ಕರಿಸಲು ಒಂದು ಅದ್ಭುತ ಮಾರ್ಗವಾಗಿದೆ' ಎಂದಿದ್ದಾರೆ.

ಗೃಹಜ್ಯೋತಿ ಹಣ ಜನರಿಂದ ವಸೂಲಿ ಮಾಡಲ್ಲ: ಸಚಿವ ಕೆ.ಜೆ.ಜಾರ್ಜ್‌

ಆಯ್ಕೆ ಪ್ರಕ್ರಿಯೆ ಹೇಗೆ?: ಲಾಂಗ್‌ಲಿಸ್ಟ್‌ನಲ್ಲಿರುವ 13 ಕೃತಿಗಳ ಪೈಕಿ 6 ಕೃತಿಗಳನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಿ ಏ.8ರಂದು ಘೋಷಿಸಲಾಗುತ್ತದೆ. ಈ ಸುತ್ತಿಗೆ ಆಯ್ಕೆಯಾದ ಪ್ರತಿ ಕೃತಿಗೆ 5,51,387 ರು. ಬಹುಮಾನ ಮೊತ್ತ ಸಿಗಲಿದೆ. ಇದು ಲೇಖಕ ಮತ್ತು ಅನುವಾದಕ ಇಬ್ಬರಿಗೂ ಹಂಚಿಕೆಯಾಗುತ್ತದೆ. ಎರಡನೇ ಸುತ್ತಿಗೆ ಆಯ್ಕೆಯಾದ 6 ಕೃತಿಗಳಲ್ಲಿ ಅಂತಿಮವಾಗಿ ಒಂದು ಕೃತಿಗೆ 2025ನೇ ಸಾಲಿನ ಬೂಕರ್‌ಪ್ರಶಸ್ತಿ ಘೋಷಿಸಲಾಗುತ್ತದೆ. ಮೇ 20ರಂದು ಲಂಡನ್‌ನ ಟೇಟ್ ಮಾಡರ್ನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯ ಘೋಷಣೆ ನಡೆಯಲಿದೆ. ವಿಜೇತ ಲೇಖಕರಿಗೆ ಮತ್ತು ಅನುವಾದಕರಿಗೆ ತಲಾ 27,58,110 ರು. ಬಹುಮಾನ ಸಿಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ