
ಚಿರಾಪಂಜಿ(ಜು.27) ಪಾಸ್‌ಪೋರ್ಟ್ ಇಲ್ಲ, ವೀಸಾ ಇಲ್ಲ. ಯಾರ ಭಯವೂ ಇಲ್ಲ, ಅಕ್ರಮವಾಗಿ ಮಾತ್ರವಲ್ಲ ಅಷ್ಟೇ ಸುಲಭವಾಗಿ ಬಾಂಗ್ಲಾದೇಶದಿಂದ ಭಾರತ ಪ್ರವೇಶಿಸುವುದು ಹೇಗೆ? ಪ್ರತಿ ದಿನ ಈ ರೀತಿ ಸಾವಿರಾರು ಮಂದಿ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರವಾಗಿ ಪ್ರವೇಶಿಸುತ್ತಿದ್ದಾರೆ. ರೋಹಿಂಗ್ಯ ಸೇರಿದಂತೆ ಅಕ್ರಮ ನುಸುಳು ಕೋರರು ಭಾರತಕ್ಕೆ ಎಂಟ್ರಿಕೊಡುತ್ತಿರುವುದು ಹೇಗೆ ಎಂದು ಬಾಂಗ್ಲಾದೇಶಿ ಯೂಟ್ಯೂಬರ್ ವಿಡಿಯೋ ಮೂಲಕ ವಿವರಿಸಿದ್ದಾನೆ. ಸೇನೆ, ಪೊಲೀಸ್, ಸ್ಥಳೀಯರ ಯಾರ ಭಯವೂ, ಆತಂಕ ಇಲ್ಲದೆ ಸುಲಭವಾಗಿ ಭಾರತ ಪ್ರವೇಶಿಸುವ ಈ ವಿಡಿಯೋ ಇದೀಗ ಭಾರತದ ಗಡಿ ರಕ್ಷಣೆ ಕುರಿತು ಹಲವು ಸವಾಲು ಎತ್ತಿದೆ.
ಪಶ್ಚಿಮ ಬಂಗಾಳ, ಮೇಘಾಲಯ ಸೇರಿದಂತೆ ಬಾಂಗ್ಲಾದೇಶದ ಜೊತೆ ಗಡಿ ಹಂಚಿಕೊಂಡಿರುವ ಭಾರತದ ರಾಜ್ಯಗಳ ಮೂಲಕ ಅಕ್ರಮ ನುಸುಳುಕೋರರು ಭಾರತವನ್ನು ಸುಲಭವಾಗಿ ಪ್ರವೇಶಿಸುತ್ತಿದ್ದಾರೆ. ಲಕ್ಷ ಲಕ್ಷ ರೋಹಿಂಗ್ಯ ಸಮುದಾಯ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ಇಲ್ಲಿನ ಸವಲತ್ತು ಪಡೆಯಲು ಎಲ್ಲಾ ದಾಖಲೆ ಮಾಡಿಕೊಂಡಿದ್ದಾರೆ. ಇದೆಲ್ಲಾ ಹೇಗೆ ಸಾಧ್ಯ ಅನ್ನೋದು DUDI_PARMARAM ಯೂಟ್ಯೂಬರ್ ತೋರಿಸಿದ್ದಾನೆ.
ರೋಹಿಂಗ್ಯಾಗಳಿಗೆ ಭಾರತದಲ್ಲಿ ನೆಲೆಸಲು ಯಾವುದೇ ಮೂಲಭೂತ ಹಕ್ಕಿಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ
ಈತ 21 ನಿಮಿಷದ ವಿಡಿಯೋ ಮೂಲಕ ಬಾಂಗ್ಲಾದೇಶದಿಂದ ಭಾರತ ಅಕ್ರಮ ಪ್ರವೇಶ ಹೇಗೆ ಅನ್ನೋದು ತೋರಿಸಿದ್ದಾನೆ. ಈತನ ಜೊತೆ ಮತ್ತಿಬ್ಬರು ಭಾರತ ಪ್ರವೇಶಿಸಿದ್ದಾರೆ. ಈ ವೇಳೆ ಯಾವುದೇ ಅಡ್ಡಿ ಆತಂಕ ಎದುರಿಸಿಲ್ಲ. ಬಾಂಗ್ಲಾದೇಶದ ಗಡಿ ಗ್ರಾಮ ಜಮ್‌ಗಾವ್ ಗರೋದಿಂದ ಸುಲಭವಾಗಿ ಪ್ರವೇಶಿಸಲು ಸಾಧ್ಯವಿದೆ ಎಂದು ಈ ಯೂಟ್ಯೂಬರ್ ವಿಡಿಯೋ ಆರಂಭಿಸುತ್ತಾನೆ.
ಬಾಂಗ್ಲಾದೇಶದ ಸೈಲ್‌ಹೆಟ್ ಬಳಿಯ ಜಮ್‌ಗಾವ್ ಗರೋ ಗ್ರಾಮದಿಂದ ಭಾರತದ ಮೆಘಾಲಯದ ಚಿರಾಪುಂಜಿಗೆ ಸುಲಭವಾಗಿ ಪ್ರವೇಶ ಮಾಡಿದ್ದಾನೆ. ಬಾಂಗ್ಲಾದೇಶದ ಅಂತಿಮ ಗ್ರಾಮದ ಮೂಲಕ ನಡೆದುಕೊಂಡು ಸಾಗಿದ ಯೂಟ್ಯೂಬರ್ ಬಳಿಕ ಕೊನೆಯದಾಗಿ ಗಡಿ ಪ್ರತ್ಯೇಕಿಸುವ ಬೋರ್ಡ್ ಹಾಕಲಾಗಿದೆ. ಕಾಲುದಾರಿ ಹಾಗೂ ಕಾಡಿನ ರಸ್ತೆ ಮೂಲಕ ಸಾಗಿದ ಯೂಟ್ಯೂಬರ್ , ಸಾಗುತ್ತಾ ಭಾರತೀಯ ಸೇನೆ ಹಾಕಿರುವ ಫೆನ್ಸಿಂಗ್ ತೋರಿಸಿದ್ದಾನೆ.
ಫೆನ್ಸಿಂಗ್ ಇದ್ದರೂ ಇಲ್ಲಿ ಯಾವುದೇ ಆತಂಕ ಇಲ್ಲ, ಪಾಸ್‌ಪೋರ್ಟ್ ಬೇಕಿಲ್ಲ, ವೀಸಾ ಇಲ್ಲ, ಸುಲಭಾಗಿ ಭಾರತ ಪ್ರವೇಶ ಮಾಡಲು ಸಾಧ್ಯ ಎಂದು ವಿಡಿಯೋ ಮುಂದುವರಿಸಿದ್ದಾನೆ. ಭಾರಿ ಮಳೆ, ಪ್ರವಾಹ ವೇಳೆ ಭಾರತಕ್ಕೆ ಅಕ್ರಮ ಪ್ರವೇಶ ಈ ದಾರಿ ಮೂಲಕ ಸಾಧ್ಯವಿಲ್ಲ ಎಂದಿದ್ದಾನೆ. ಕಾರಣ ನದಿ, ಹಾಗೂ ಮೋರಿ ಒಳಗಿಂದ ಸಾಗಬೇಕು. ಹೀಗಾಗಿ ಬೇಸಿಗೆ ಹಾಗೂ ಮಳೆ ಇಲ್ಲದ ವೇಳೆ ಯಾವುದೇ ಆತಂಕವಿಲ್ಲ ಎಂದಿದ್ದಾನೆ.
ಫೆನ್ಸಿಂಗ್ ಬದಿಯಿಂದ ಸಾಗದ ಯೂಟ್ಯೂಬರ್ ಹಾಗೂ ಮತ್ತಿಬ್ಬರಿಗೆ ಭಾರತದ ಸೇನೆ, ಗಡಿ ರಕ್ಷಣಾ ಪಡೆಗಳ ಯಾವುದೇ ಆತಂಕ ಇರಲಿಲ್ಲ. ಕಾರಣ ಫೆನ್ಸಿಂಗ್ ಬಳಿ ಯಾವುದೇ ಚೆಕ್ ಪೋಸ್ಟ್, ಬಂಕರ್ ಇರಲಿಲ್ಲ. ಫೆನ್ಸಿಂಗ್ ಪಕ್ಕದ ಕಾಲು ದಾರಿಯಿಂದ ಸಾಗಿದ ಇವರು ಫೆನ್ಸಿಂಗ್ ಅಡಿಯಲ್ಲಿ ನೀರು ಹರಿಯಲು ಹಾಕಿದ ಮೋರಿ ಬಳಿ ಬಂದಿದ್ದಾರೆ. ಇದು ವೀಸಾ, ಪಾಸ್‌ಪೋರ್ಟ್ ಇಲ್ಲದೆ ಭಾರತಕ್ಕೆ ತೆರಳುವ ದಾರಿ. ಇಲ್ಲಿಂದ ಸಾಗಿದರೆ ಚಿರಾಪುಂಜಿ ಎಂದು ಇದೇ ಮೋರಿ ಮೂಲಕ ಸಾಗಿ ಭಾರತ ಪ್ರವೇಶಿಸಿದ್ದಾರೆ.
Bengaluru: ರೋಹಿಂಗ್ಯಗಳ ಕಳ್ಳ ಸಾಗಣೆಯ ಸೂತ್ರಧಾರ ಬೆಂಗ್ಳೂರಲ್ಲಿ ಅರೆಸ್ಟ್
ಬಾಂಗ್ಲಾದೇಶದಿಂದ ಸುಲಭವಾಗಿ ಭಾರತಕ್ಕೆ ಅಕ್ರಮ ಪ್ರವೇಶಿಸಲು 10,000 ರೂಪಾಯಿ, 20,000 ರೂಪಾಯಿ ಪಡೆದು ಈ ಮೂಲಕ ಸಾಗಿಸಲಾಗುತ್ತದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೆಘಾಲಯ ಸೇರಿದಂತೆ ಗಡಿ ರಾಜ್ಯದ ಡಿಜಿಪಿಗೆ ಅಲರ್ಟ್ ಮಾಡಲಾಗಿದೆ. ಇದು ಒಂದು ದಾರಿ, ಈ ರೀತಿ ಹಲವು ದಾರಿಗಳ ಮೂಲಕ ಅಕ್ರಮವಾಗಿ ಭಾರತ ಪ್ರವೇಶ ಪ್ರತಿ ದಿನ ನಡೆಯುತ್ತಿದೆ ಎಂದು ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ