ಬಾಲ್ಟಿಮೋರ್ ಸೇತುವೆಗೆ ಡಿಕ್ಕಿ ಹೊಡೆದ ಹಡಗಿನಲ್ಲಿದ್ದರು 22 ಭಾರತೀಯ ಸಿಬ್ಬಂದಿ!

By Suvarna NewsFirst Published Mar 26, 2024, 8:59 PM IST
Highlights

ಬೃಹತ್ ಕಂಟೇನರ್ ಹಡಗು ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಸೇತುವ ಕುಸಿದು ಬಿದ್ದ ದುರಂತ ಘಟನೆ ಸಂಭವಿಸಿದೆ. ಈ ಹಡಗಿನಲ್ಲಿ 22 ಭಾರತೀಯ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರು ಅನ್ನೋ ಮಾಹಿತಿ ಹೊರಬಿದ್ದಿದೆ.
 

ಬಾಲ್ಟಿಮೋರ್(ಮಾ.26) ಸರಕು ಹಡಗು ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಸೇತುವೆ ಹಡಗಿನ ಮೇಲೆ ಕುಸಿದು ಬಿದ್ದ ಘಟನೆ ನಡೆದಿದೆ. ಸಿಂಗಾಪೂರ ಮೂಲದ ಈ ಹಡಗನ್ನು ಸಂಪೂರ್ಣ ಭಾರತೀಯ ಸಿಬ್ಬಂದಿಗಳೇ ನಿರ್ವಹಿಸುತ್ತಿದ್ದರು. ಕಬ್ಬಿಣದ ಸೇತುವೆ ಹಡಗಿನ ಮೇಲೆ ಬಿದ್ದ ಪರಿಣಾಮ ಹಡಗು ಮತ್ತಷ್ಟು ನೀರಿನ ಆಳಕ್ಕೆ ಇಳಿದಿದೆ. ಅದೃಷ್ಟವಶಾತ್ ಹಡಗಿನ ಎಲ್ಲಾ 21 ಭಾರತೀಯ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಆದರೆ ಸೇತುವೆ ಮೇಲೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳ ಪೈಕಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. 6 ಮಂದಿ ನಾಪತ್ತೆಯಾಗಿದ್ದಾರೆ.

ದಾಲಿ ಅನ್ನೋ ಹಡಗು ಸರಕು ತುಂಬಿ ಅಮೆರಿಕದ ಬಾಲ್ಟಿಮೋರ್ ಮೂಲಕ ಸಾಗಿತ್ತು. ಈ ವೇಳೆ ಹಡಗಿನಲ್ಲಿ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಬಾಲ್ಟಿಮೋರ್ ಬಳಿ ಇರುವ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಸಮೀಪಕ್ಕೆ ಬರುತ್ತಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಏಕಾಏಕಿ ಹಡಗಿನ ವಿದ್ಯತ್ ಸಂಪರ್ಕ ಕಡಿತಗೊಂಡಿದೆ. ಇದರ ಪರಿಣಾಮ ಹಡಗು ನಿಯಂತ್ರಣ ತಪ್ಪಿ ನೇರವಾಗಿ ಸೇತುಗೆ ಡಿಕ್ಕಿ ಹೊಡೆದಿದೆ.

Viral Video: ಬೃಹತ್‌ ಹಡಗು ಡಿಕ್ಕಿ ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ಫ್ರಾನ್ಸಿಸ್‌ ಸ್ಕಾಟ್‌ ಕೀ ಬ್ರಿಜ್‌!

ಸೇತುವೆಗೆ ಡಿಕ್ಕಿ ಹೊಡೆದ ಬೆನ್ನಲ್ಲೇ ಸಂಪೂರ್ಣ ಸೇತುವೆ ಕುಸಿದು ಬಿದ್ದಿದೆ. ಸೇತುವೆಯ ಒಂದು ಭಾಗ ಹಡಗಿನ ಮೇಲೆ ಬಿದ್ದಿದೆ. ಇದು ಆತಂಕ ಹಚ್ಚಿಸಿತ್ತು. ಆದರೆ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೇರಿಲ್ಯಾಂಡ್ ಗವರ್ನರ್ ವೆಸ್ ಮೂರೆ, ಹಡಗಿನಲ್ಲಿ ವಿದ್ಯುತ್ ಸಮಸ್ಸೆ ಕಾಣಿಸಿಕೊಂಡಿರುವುದ ಪತ್ತೆಯಾಗಿದೆ. ಈ ಕುರಿತು ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. 

 


6 People are missing after pic.twitter.com/iocNoQbQOo

— Rajikul (@Rajikul2441)

 

ಅಪಘಾತ ಸಂಭವಿಸುತ್ತಿದ್ದಂತೆ ರಕ್ಷಣಾ ತಂಡಗಳು ನೆರವಿಗೆ ಧಾವಿಸಿದೆ. ಸಣ್ಣ ಬೋಟುಗಳ ಮೂಲಕ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಇದೇ ವೇಳೆ ಹೆಲಿಕಾಪ್ಟರ್‌ನ್ನೂ ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ.  ಸೇತುವೆ ದುರಸ್ತಿ ಕಾರ್ಯ ಮಾಡುತ್ತಿದ್ದ ಸಿಬ್ಬಂದಿಗಳ ಪೈಕಿ 6 ಮಂದಿ ನಾಪತ್ತೆಯಾಗಿದ್ದಾರೆ. ಹುಡುಕಾಟ ಮುಂದುವರಿದಿದೆ. 

ಮಂಗಳೂರಿನ ಸರಕು ನೌಕೆ ಲಕ್ಷದ್ವೀಪದಲ್ಲಿ ಮುಳುಗಡೆ: 8 ಮಂದಿ ರಕ್ಷಣೆ
 

click me!