ಈ ಮಹಿಳೆಯೊಳಗೆ ಸೇರಿದ್ಯಾ ಕುದುರೆಯ ಆತ್ಮ? ಕಣ್ಣನ್ನೇ ನಂಬಲಾಗದ ನೈಜ ವಿಡಿಯೋ ವೈರಲ್!

By Suchethana D  |  First Published Jan 9, 2025, 4:48 PM IST

ನಾರ್ವೆಯ ಈ ಮಹಿಳೆಯೊಳಗೆ  ಕುದುರೆಯ ಆತ್ಮ ಸೇರಿರಬೇಕು ಎನ್ನುವಂಥ  ವಿಡಿಯೋ ವೈರಲ್​  ಆಗಿದೆ. ವಿಡಿಯೋ ನೋಡಿದರೆ  ನಿಮ್ಮ ಕಣ್ಣನ್ನೇ ನೀವು ನಂಬಲಾರಿರಿ!
 


ಈ ಫೋಟೋದಲ್ಲಿ ಇರುವ ಮಹಿಳೆಯ ಹೆಸರು ಐಲಾ ಕ್ರಿಸ್ಟಿನ್, ನಾರ್ವೆ ದೇಶದವಳು. ಈ ಪ್ರಪಂಚದಲ್ಲಿ ಯಾರ್ಯಾರ ಬಳಿ ಏನೇನು ಟ್ಯಾಲೆಂಟ್​ ಇರುತ್ತದೆ ಎಂದು ಹೇಳುವುದೇ ಕಷ್ಟ. ಕೆಲವೊಮ್ಮೆ ನಂಬಲು ಅಸಾಧ್ಯವಾಗಿರುವಂಥ ಟ್ಯಾಲೆಂಟ್​ಗಳೂ ಇರುತ್ತಾರೆ. ಅಂಥವರದಲ್ಲಿ ಒಬ್ಬಾಕೆ ಈ ಐಲಾ. ಈಕೆ  ಕುದುರೆಗಳ ಬಗ್ಗೆ ಸಿಕ್ಕಾಪಟ್ಟೆ ಮೋಹ ಬೆಳೆಸಿಕೊಂಡಿದ್ದಾಳೆ. ಪ್ರಾಣಿಗಳ ಮೇಲೆ ಪ್ರೀತಿ ಇರುವವರು ಕೋಟ್ಯಂತರ ಮಂದ ಇರ್ತಾರೆ ಬಿಡಿ. ಆದರೆ ವಿಷಯ ಇಲ್ಲಿ ಅದಲ್ಲ. ಐಲಾಳ ಪ್ರೀತಿ ಕುದುರೆಯ ಮೇಲೆ ಎಷ್ಟಿದೆ ಎಂದರೆ, ಕುದುರೆಯ ಆತ್ಮವೇ ಈಕೆಯ ಮೈಯೊಳಗೆ ಹೊಕ್ಕಿದ್ಯೋ ಎನ್ನುವಂತೆ ಭಾಸವಾಗುವುದು ಉಂಟು. ಇದಕ್ಕೆ ಕಾರಣ, ಐಲಾ ಕುದುರೆಯಂತೆ ಓಡುತ್ತಾಳೆ, ಚಲಿಸುತ್ತಾಳೆ, ಜಿಗಿಯುತ್ತಾಳೆ, ಓಡುವಾಗ ಕೈಗಳನ್ನು ಬಳಸುತ್ತಾಳೆ... ಅಬ್ಬಬ್ಬಾ ಎನ್ನುವಂಥ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.
 
ಪ್ರಾಣಿಗಳಂತೆ ಓಡುವುದು, ಜಿಗಿಯುವುದು ಸಾಮಾನ್ಯವೇ. ಹಲವಾರು ಕ್ರೀಡಾಪಟುಗಳು ಹೀಗೆ ಮಾಡುವುದು ಉಂಟು. ಆದರೆ ಐಲಾಳ ವಿಡಿಯೋ ನೋಡಿದರೆ ಅದು ಸಾಮಾನ್ಯ ಮನುಷ್ಯರು ಮಾಡುವಂತೆ ಕಾಣುವುದಿಲ್ಲ. ಈಕೆ ಓಡುತ್ತಿದ್ದರೆ, ಮಾನವ ರೂಪದ ಕುದುರೆ ಎಂದೇ ಅಂದುಕೊಳ್ಳಬೇಕು, ಹಾಗಿರುತ್ತದೆ. ಐಲಾಗೆ ನಾಲ್ಕನೇ ವರ್ಷ ವಯಸ್ಸಿನಿಂದಲೂ ಕುದುರೆಗಳ ಮೇಲೆ ಅಪಾರ ಪ್ರೀತಿ. ಕುದುರೆಗಳ ಜೊತೆಯೇ ಸದಾ ಇರುತ್ತಿದ್ದ ಈಕೆ, ಬಾಲ್ಯದಲ್ಲಿಯೇ  ಕುದುರೆಯಂತೆ ಓಡಲು ಮತ್ತು ಚಲಿಸಲು ಪ್ರಾರಂಭಿಸಿದಳು. ಅವುಗಳ ವಿಶಿಷ್ಟ ಚಲನೆಯನ್ನು ಅನುಕರಿಸಲು ತನ್ನ ಕೈಗಳನ್ನು ಬಳಸಿದಳು. ಈ ಕುರಿತು ಐಲಾ ಹೇಳುವುದು ಏನೆಂದರೆ,  'ನಾನು ಚಿಕ್ಕವಳಿದ್ದಾಗ,  ನಾಯಿಗಳನ್ನು ಪ್ರೀತಿಸುತ್ತಿದ್ದೆ ಮತ್ತು ಯಾವಾಗಲೂ ನಾಯಿಯಾಗಲು ಬಯಸಿದ್ದೆ, ನಾನು ಬೆಳೆದಂತೆ, ನಾನು ಕುದುರೆ ಸವಾರಿ ಮಾಡಲು ಪ್ರಾರಂಭಿಸಿದೆ ಮತ್ತು ಕುದುರೆಗಳಲ್ಲಿ ಆಸಕ್ತಿ ಹೊಂದಿದ್ದೆ. ಆದ್ದರಿಂದ ನಾಯಿಯಂತೆಯೂ ಚಲಿಸಬಲ್ಲೆ, ಆದರೆ ವಿಶೇಷವಾಗಿ ಕುದುರೆಯನ್ನು ಅನುಸರಿಸುತ್ತಿದ್ದೇನೆ'  ಎನ್ನುತ್ತಾಳೆ. 

ದುಬಾರಿ ಬಟ್ಟೆ ಧರಿಸಿದ್ರೂ ಆನೆ ಲದ್ದಿ ಹಾಕ್ತಿದ್ರೆ ಕ್ಯಾಚ್‌ ಹಿಡಿದೇ ಬಿಡ್ತಾಳೆ ಈ ಸುಂದ್ರಿ... ವಿಡಿಯೋ ವೈರಲ್  

 ಕುದುರೆಯಂತೆ ನಡೆಯುವಾಗ, ಜಿಗಿಯುವಾಗ ಮೈಕೈಗೆ ನೋವಾಗುವುದಿಲ್ಲವೆ, ಇದು ಅಷ್ಟು ಸುಲಭದ ಮಾತಲ್ಲ. ಎಲ್ಲೆಂದರಲ್ಲಿ ಜಿಗಿಯುತ್ತೀರಿ, ಓಡಾಡುತ್ತೀರಿ, ಏನೂ ಸಮಸ್ಯೆ ಆಗುವುದಿಲ್ಲವೆ ಎನ್ನುವ ಪ್ರಶ್ನೆಯನ್ನು ಈಕೆಗೆ ಕೇಳಿದಾಗ ಆಕೆ ಹೇಳಿದ್ದೇನು ಗೊತ್ತಾ? ನನಗೂ ಅದೇನೂ ಗೊತ್ತಿಲ್ಲ. ಏನೂ ಸಮಸ್ಯೆ ಇದುವರೆಗೆ ಆಗಿಲ್ಲ. ಯಾಕೆ ಸಮಸ್ಯೆ ಆಗುತ್ತಿಲ್ಲ ಎನ್ನುವುದು ನನಗೂ ಅಚ್ಚರಿ ತರುತ್ತಿದೆ. ಆದರೆ ಕುದುರೆಗೆ ಹೇಗೆ ಅವುಗಳ ಚಲನೆಯಿಂದ ಸಮಸ್ಯೆ ಆಗುತ್ತಿಲ್ಲವೋ, ಹಾಗೆ ನನಗೂ ಸಮಸ್ಯೆ ಆಗುತ್ತಿಲ್ಲ ಎನ್ನುತ್ತಾರೆ! 
 
ಕುದುರೆಯಂತೆ ಚಲನೆ ಎಲ್ಲಾ ನೋಡಿ, ಎಲ್ಲರೂ ಖುಷಿಪಟ್ಟುಕೊಂಡಾಗ ಒಂದು ವಿಡಿಯೋ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಳಂತೆ ಐಲಾ. ಅದು ಕ್ಷಣಮಾತ್ರದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ, ಈಕೆಯನ್ನು ಹುಡುಕಿಕೊಂಡು ಜನಸಾಗರವೇ ಹರಿದುಬಂತಂತೆ. ಇದರಿಂದ ಐಲಾಗೆ ಆಘಾತವಾಗಿ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕೆಲವು ದಿನ ಡಿಲೀಟ್ ಮಾಡಿಬಿಟ್ಟಿದ್ದರಂತೆ! 

Tap to resize

Latest Videos

ಸ್ನೇಹಿತರನ್ನು ಮನೆಗೆ ಕಳುಹಿಸಿ ಸೌದಿಯಿಂದ ವಿಡಿಯೋ ನೋಡ್ತಿದ್ದ ಗಂಡ: 4 ಮಕ್ಕಳ ಅಮ್ಮನ ಭಯಾನಕ ಕಥೆ ಕೇಳಿ!

click me!