17 ಪತ್ನಿಯರ ಮುದ್ದಿನ ಗಂಡ, 84 ಮಕ್ಕಳ ಪ್ರೀತಿಯ ಅಬ್ಬಾ ಜಾನ್; ನಾನು ಗ್ಲೋಬಲ್ ಫಾದರ್ ಎಂದ ಸೂಪರ್ ಡ್ಯಾಡಿ

Published : Jan 09, 2025, 02:28 PM ISTUpdated : Jan 20, 2025, 04:58 PM IST
17 ಪತ್ನಿಯರ ಮುದ್ದಿನ ಗಂಡ, 84 ಮಕ್ಕಳ ಪ್ರೀತಿಯ ಅಬ್ಬಾ ಜಾನ್; ನಾನು ಗ್ಲೋಬಲ್ ಫಾದರ್ ಎಂದ ಸೂಪರ್ ಡ್ಯಾಡಿ

ಸಾರಾಂಶ

Father of 84 Kids: 17 ಮಡದಿಯರು ಮತ್ತು 84 ಮಕ್ಕಳ ತಂದೆಯಾಗಿರುವ ವ್ಯಕ್ತಿಯೊಬ್ಬರ ಕುಟುಂಬದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ ಬಲುಶಿ ಎಂಬ ಹೆಸರಿನ ಈ ವ್ಯಕ್ತಿ ತನ್ನನ್ನು, 'ಗ್ಲೋಬಲ್ ಫಾದರ್' ಎಂದು ಕರೆದುಕೊಳ್ಳುತ್ತಾರೆ.

Arab man with 17 wives: ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿ ಮತ್ತು ಆತನ ಕುಟುಂಬದ ವಿಡಿಯೋವೊಂದು ಸೋಶಿಯಲ್  ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎದ್ದು ನಿಲ್ಲಲು ಕೋಲುಗಳ ಮೇಲೆ ಅವಲಂಬಿತರಾಗಿರುವ ಈ ವ್ಯಕ್ತಿ 17 ಮಡದಿಯರ ಮುದ್ದಿನ ಗಂಡ ಮತ್ತು 84 ಮಕ್ಕಳ ಪ್ರೀತಿಯ ಅಬ್ಬಾ ಜಾನ್ ಆಗಿದ್ದಾರೆ. ಈ ವ್ಯಕ್ತಿ ತನ್ನನ್ನು ಗ್ಲೋಬಲ್ ಫಾದರ್ ಎಂದು ಕರೆದುಕೊಳ್ಳುತ್ತಾನೆ. ಈ ವ್ಯಕ್ತಿ ವಾಸಿಸುವ ಭಾಗದಲ್ಲಿ ಸೂಪರ್ ದಾದಾ, ಸೂಪರ್ ಡ್ಯಾಡಿ ಅಂತಾನೇ ಫೇಮಸ್ ಆಗಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. 

ವರದಿಗಳ ಪ್ರಕಾರ, ಈ ಸೂಪರ್ ಡ್ಯಾಡಿಯ ಹೆಸರು ಅಲ್ ಬಲುಶಿ ಆಗಿದ್ದು, ಅರಬ್ ಸಂಯುಕ್ತ ರಾಷ್ಟ್ರದ ನಿವಾಸಿಯಾಗಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಸೂಪರ್ ಡ್ಯಾಡಿ ಅಂತಾ ಕರೆಸಿಕೊಳ್ಳುವ ಅಲ್ ಬಲುಶಿ ಜೊತೆ ಅಮೆರಿಕದ ವ್ಯಕ್ತಿ ಮಾತನಾಡುತ್ತಿರೋದನ್ನು ಕಾಣಬಹುದಾಗಿದೆ. ಅಲ್ ಬಲುಶಿಗೆ ಅಮೆರಿಕದ ವ್ಯಕ್ತಿ ನಿಮಗೆ ಎಷ್ಟು ಪತ್ನಿಯರು ಮತ್ತು ಮಕ್ಕಳು ಎಂದು ಕೇಳುತ್ತಾರೆ. 

ನನಗೆ 17 ಮಡದಿಯರು ಮತ್ತು 84 ಮಕ್ಕಳಿದ್ದಾರೆ ಎಂದು ಅಲ್ ಬಲುಶಿ ಹೇಳುತ್ತಾನೆ. ಇದಕ್ಕೆ ಆಶ್ಚರ್ಯಗೊಳ್ಳುವ ಅಮೆರಿಕ ವ್ಯಕ್ತಿ, ನನಗೆ ಒಬ್ಬಳೇ ಹೆಂಡತಿ ಎಂದಾಗ ಅಲ್ ಬಲುಶಿ, ಒಬ್ಬರೇನಾ ಎಂದು ನಗುತ್ತಾನೆ. ಅಲ್ ಬಲುಶಿ ಊರುಗೋಲಿನ ಸಹಾಯದಿಂದ ನಿಂತಿರೋದನ್ನು ಸಹ ವಿಡಿಯೋದಲ್ಲಿ ಗಮನಿಸಬಹುದಾಗಿದೆ. ವೈರಲ್ ಆಗುತ್ತಿರುವ ಅಲ್ ಬಲುಶಿಯ ಈ ವಿಡಿಯೋ 2009ರಂದು ಎಂದು ತಿಳಿದು ಬಂದಿದೆ. ಅಲ್ ಬಲುಶಿ 17 ಪತ್ನಿಯರು ಮತ್ತು 90 ಮಕ್ಕಳೊಂದಿಗೆ ವಾಸವಾಗಿದ್ದಾನೆ. 90ರಲ್ಲಿ 84 ಮಕ್ಕಳಿಗೆ ಅಲ್ ಬಲುಶಿ ಬಯೋಲಾಜಿಕಲ್ ಫಾದರ್ ಆಗಿದ್ದಾನೆ. 

ಇದನ್ನೂ ಓದಿ: ಸೋದರನಿಂದ ಗರ್ಭಿಣಿಯಾದೆ, ಹಾಗಾಗಿ ಮದ್ವೆ ಆದ್ವಿ; ದೇವಸ್ಥಾನದಲ್ಲಿ ವಿಷಯ ರಿವೀಲ್ ಮಾಡಿದ ಯುವತಿ

ಅಮಿರೇಟ್ 24/7 ವರದಿ ಪ್ರಕಾರ, ಇಸ್ಲಾಮಿಕ್ ದೇಶಗಳಲ್ಲಿ ಅಲ್ ಬಲುಶಿಯನ್ನು ಸೂಪರ್ ಡ್ಯಾಡಿ ಅಂತಾನೇ ಗುರುತಿಸಲಾಗುತ್ತದೆ. ಅಲ್ ಬಲುಶಿಯೂ ಸಹ ತನ್ನನ್ನು ಗ್ಲೋಬಲ್ ಫಾದರ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಅಲ್ ಬಲುಶಿ 17 ಮಡದಿಯರಿಗೂ ಪ್ರತ್ಯೇಕ ಮನೆ ಮಾಡಿಕೊಟ್ಟಿದ್ದಾನೆ.  ನನ್ನ ಬಳಿ 17 ಮನೆ ಮತ್ತು 17  ಕುಟುಂಬಗಳಿವೆ. ಎಲ್ಲರೂ ನನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. 90ರಲ್ಲಿ 60 ಗಂಡು, 30 ಹೆಣ್ಣು ಮಕ್ಕಳಿದ್ದಾರೆ ಎಂದು ಅಲ್ ಬಲುಶಿ ಹೇಳಿದ್ದಾನೆ. 

ಅಲ್ ಬಲುಶಿಯ ವಿಡಿಯೋ ನೋಡಿದ ನೆಟ್ಟಿಗರು ತರೇಹವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ. ನಿನ್ನನ್ನು ನೋಡಿದ್ರೆ ಇದು ಸಾಧ್ಯವಿಲ್ಲ ಅನ್ನಿಸುತ್ತೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಅಸಲಿಗೆ ಇಷ್ಟು ಮಕ್ಕಳನ್ನು ನೋಡಿಕೊಳ್ಳಲು  ಎಷ್ಟು ಹಣ ಬೇಕಾಗುತ್ತದೆ. ನಿಮ್ಮ ಆದಾಯದ ಮೂಲ ಏನು ಎಂದು ನೆಟ್ಟಿಗರು  ಪ್ರಶ್ನೆ ಮಾಡಿದ್ದಾರೆ. ಒಂದಿಷ್ಟು ಮಂದಿ ಈತ ಸಂಸಾರ ನಡೆಸುತ್ತಿಲ್ಲ, ಮಕ್ಕಳನ್ನು ಹೆರುವ ಕಾರ್ಖಾನೆ ನಡೆಸುತ್ತಿದ್ದಾನೆ. ಮಕ್ಕಳ ಸಂಖ್ಯೆ ಶೀಘ್ರದಲ್ಲಿಯೇ ಸೆಂಚುರಿ ತಲುಪಲಿ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ: ಮದುವೆಯಲ್ಲಿ ನವಜೋಡಿಗೆ ಚಮಕ್ ಕೊಟ್ಟ ಅರ್ಚಕ; ಭಲೇ ಕಿಲಾಡಿ ಎಂದ ನೆಟ್ಟಿಗರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್