100 ವರ್ಷದ ಅಜ್ಜಿಯ ಬಂಧಿಸಿದ ಪೊಲೀಸರು: ಕಚಗುಳಿ ಇಡ್ತಿದೆ ಕಾರಣ..!

By Anusha KbFirst Published Aug 25, 2022, 11:54 AM IST
Highlights

ಆಸ್ಟೇಲಿಯಾದ ಅಜ್ಜಿಯೊಬ್ಬಳ ವಿಚಿತ್ರ ಆಸೆಯನ್ನು ಪೊಲೀಸರು ಪೂರೈಸಿದ್ದಾರೆ. ಅಂದ ಹಾಗೆ ಈ ಅಜ್ಜಿ ಆಸೆ ಏನು ಗೊತ್ತಾ? ಮುಂದೆ ಓದಿ.

ಬದುಕಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಸೆಗಳಿರುತ್ತವೆ. ಕೆಲವೊಂದು ವಿಚಿತ್ರ ಆಸೆಗಳು, ಕೆಲವು ಆಸೆಗಳು ಬೆಚ್ಚಿ ಬೀಳಿಸುತ್ತವೆ. ಕೆಲ ದಿನಗಳ ಹಿಂದೆ ಮೆಕ್ಸಿಕೋದ ಅಜ್ಜಿಯೊಬ್ಬರ ವಿಚಿತ್ರ ಆಸೆಯನ್ನು ಕುಟುಂಬದವರು ಪೂರೈಸಿದ್ದರು. ತನ್ನ ಸಾವಿನ ಬಳಿಕ ತನ್ನ ಗೋರಿಯ ಮೇಲೆ ಪುರುಷ ಜನನಾಂಗವನ್ನು ಕೆತ್ತಿಸಬೇಕು ಎಂದು ಅಜ್ಜಿ ಹೇಳಿಕೊಂಡಿದ್ದಳು. ಅದೇ ರೀತಿ ಈಗ ಆಸ್ಟೇಲಿಯಾದ ಅಜ್ಜಿಯೊಬ್ಬಳ ವಿಚಿತ್ರ ಆಸೆಯನ್ನು ಪೊಲೀಸರು ಪೂರೈಸಿದ್ದಾರೆ. ಅಂದ ಹಾಗೆ ಈ ಅಜ್ಜಿ ಆಸೆ ಏನು ಗೊತ್ತಾ? ಮುಂದೆ ಓದಿ.

ಆಸ್ಟ್ರೇಲಿಯಾದ ಪ್ರಸ್ತುತ 100 ವರ್ಷದ ಅಜ್ಜಿಗೆ ಯಾವತ್ತಾದರು ಒಮ್ಮೆ ಪೊಲೀಸರಿಂದ ಆರೆಸ್ಟ್ ಆಗಬೇಕು ಎಂಬ ಆಸೆ ಬಹುಕಾಲದಿಂದ ಇತ್ತು. ಅದರಂತೆ ವಿಕ್ಟೋರಿಯಾದ ಪೊಲೀಸರು ಈಗ ಅಜ್ಜಿಯನ್ನು ಆಕೆಯ 100ನೇ ವರ್ಷದ ಹುಟ್ಟುಹಬ್ಬದ ಪಾರ್ಟಿಯಲ್ಲೇ ಬಂಧಿಸುವ ಮೂಲಕ ಅಜ್ಜಿಯ ಆಸೆಯನ್ನು ಪೂರೈಸಿದ್ದಾರೆ. ಅಜ್ಜಿಯ ಎರಡು ಕೈಗಳಿಗೆ ಕೋಳ ಅಳವಡಿಸಿದ ಪೊಲೀಸರು, ನಾರ್ರಕನ್ ಗಾರ್ಡನ್ಸ್ ರೆಸಿಡೆನ್ಶಿಯಲ್ ವೃದ್ಧಾಶ್ರಮದಿಂದ ಆಕೆಯನ್ನು ಹೆಡೆಮುರಿ ಕಟ್ಟಿದ್ದಾರೆ.!

 

ಹುಟ್ಟುಹಬ್ಬದ ಪಾರ್ಟಿ ಸ್ಥಳಕ್ಕೆ ಪ್ರವೇಶಿಸಿದ ಪೊಲೀಸರು ಆಕೆಯನ್ನು ಕೈ ತೋಳ ತೊಡಿಸಿ ಬಂಧಿಸಿ ಠಾಣೆಗೆ ಕರೆ ತಂದಿದ್ದಾರೆ. ದಶಕಗಳ ಕಾಲ ಸೇನಾ ನರ್ಸ್‌ ಆಗಿ ಕೆಲಸ ಮಾಡಿದ್ದ ಜೇನ್‌ ಯಾವತ್ತೂ ಕೂಡ ಬಂಧನಕ್ಕೊಳಗಾಗಿರಲಿಲ್ಲ. ಕುಡಿದು ವಾಹನ ಚಲಾಯಿಸಿದರು, ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡಿದ್ದರು ಆಕೆ ಬಂಧನಕ್ಕೆ ಒಳಗಾಗಿರಲಿಲ್ಲ ಎಂದು ಡೈಲಿ ಮೇಲ್ ವರದಿ ಮಾಡಿದೆ. ಇನ್ನು ಅಜ್ಜಿಯನ್ನು ಬಂಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಕ್ಟೋರಿಯಾ ಪೊಲೀಸರು ಫೇಸ್‌ಬುಕ್‌ನಲ್ಲಿ ಫೋಟೋಗಳನ್ನು ಪೋಸ್ಟ್‌ ಮಾಡಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಗಳು ಬರ್ತ್‌ಡೇ ಗರ್ಲ್‌ ಜೇನ್‌ ಜೊತೆ ನಗುತ್ತಾ ಪೋಸ್ ನೀಡುತ್ತಿರುವ ಚಿತ್ರವಿದೆ. 

ಅಜ್ಜಿಯ ಕೊನೆಯ ಆಸೇ ಈಡೇರಿಸಲು ಸಮಾಧಿ ಮೇಲೆ ಐದೂವರೆ ಅಡಿ ಎತ್ತರದ ಶಿಶ್ನ ಪ್ರತಿಮೆ ಕೆತ್ತನೆ!

ಈ ರೀತಿಯ ಬಂಧನ ಮಾಡಲು ನಮಗೆ ಖುಷಿಯಾಗುತ್ತದೆ. ಬಹುತೇಕರಿಗೆ, ಪೊಲೀಸರಿಂದ ಯಾವತ್ತಿಗೂ ಬಂಧನವಾಗದೇ ಜೀವನ ಕಳೆಯುವುದು ಹೆಮ್ಮೆ ಹಾಗೂ ಖುಷಿಯ ವಿಚಾರ. ಅದಾಗ್ಯೂ ಇತ್ತೀಚೆಗೆ ತಮ್ಮ 100ನೇ ಹುಟ್ಟುಹಬ್ಬ ಆಚರಿಸಿದ ಮಾಜಿ ನರ್ಸ್‌ ಜೇನ್‌ ಬಿಕ್ಟನ್‌ಗೆ ಪೊಲೀಸರಿಂದ ಬಂಧನವಾಗುವುದು ಖುಷಿಯ ವಿಚಾರವಾಗಿತ್ತು. ಆಕೆ ಆಕೆಯ ಆಸೆಯಂತೆ ಬಂಧನಕ್ಕೊಳಗಾದರು. ಜೇನ್ ಅವರ ಆಸೆಯನ್ನು ಕೇಳಿ ನಮ್ಮ ಪೊಲೀಸ್ ತಂಡ ಕಾರ್ಯಾಚರಣೆಗೆ ಇಳಿಯಿತು. ಜೇನ್‌ ಅವರು ತಮ್ಮ ಹುಟ್ಟುಹಬ್ಬವನ್ನು ನಾರ್ರಕನ್ ಗಾರ್ಡನ್ಸ್ ರೆಸಿಡೆನ್ಶಿಯಲ್ ವೃದ್ಧಾಶ್ರಮದಲ್ಲಿ ಆಚರಿಸುತ್ತಿದ್ದಾಗ ಅಲ್ಲಿಗೆ ದಾಳಿ ಮಾಡಿದ ನಮ್ಮ ಮೂವರು ಯುವ ಕಾನ್ಸ್‌ಟೇಬಲ್‌ಗಳು ಸೈರನ್ ಮಾಡಿ, ಬೆಳಕು ಬೆಳಗಿ ಆಕೆಯನ್ನು ಬಂಧಿಸಿ ಆಕೆಯ ಹುಟ್ಟುಹಬ್ಬದ ದಿನವೇ ಆಕೆಯ ಆಸೆಯನ್ನು ಪೂರೈಸಿದರು ಎಂದು ವಿಕ್ಟೋರಿಯಾ ಪೊಲೀಸ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದೆ. 

ಅಬ್ಬಬ್ಬಾ..ಈಕೆಗೆ ಬರೋಬ್ಬರಿ 105 ಮಕ್ಕಳನ್ನು ಹೆರಬೇಕಂತೆ !

ವಿಕ್ಟೋರಿಯಾ ಪೊಲೀಸರ ಈ ಕ್ರಮವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ನೀವು ಅವರನ್ನು ತುಂಬಾ ಖುಷಿಯಾಗುವಂತೆ ಮಾಡಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. ಎಂತೆಂಥಾ ಆಸೆಗಳೆಲ್ಲಾ ಇರುತ್ತಲ್ಲ. ನಿಮಗೂ ಇಂತ ಆಸೆಗಳಿದ್ಯಾ ನೋಡಿ...
 

click me!