ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿಷೇಧ

By Kannadaprabha News  |  First Published Nov 8, 2024, 5:40 AM IST

‘ಸಾಮಾಜಿಕ ಮಾಧ್ಯಮ ಮಕ್ಕಳಿಗೆ ಹಾನಿ ಉಂಟುಮಾಡುತ್ತಿರುವ ಕಾರಣ ಅವುಗಳನ್ನು ಬಳಸಲು 16 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗುವುದು ಹಾಗೂ ಈ ನಿಯಮ ಪಾಲನೆಗೆ ಸಾಮಾಜಿಕ ಜಾಲತಾಣಗಳನ್ನೇ ಹೊಣೆಯಾಗಿಸಲಾಗುವುದು’ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಟನಿ ಅಲ್ಬನೀಸ್‌ ಹೇಳಿದ್ದಾರೆ.


ಮೆಲ್ಬರ್ನ್‌ (ನ.08): 16 ವರ್ಷದ ಒಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸದಂತೆ ನಿರ್ಬಂಧಿಸಲು ಆಸ್ಟ್ರೇಲಿಯಾ ಸರ್ಕಾರ ಚಿಂತನೆ ನಡೆಸಿದೆ. ‘ಸಾಮಾಜಿಕ ಮಾಧ್ಯಮ ಮಕ್ಕಳಿಗೆ ಹಾನಿ ಉಂಟುಮಾಡುತ್ತಿರುವ ಕಾರಣ ಅವುಗಳನ್ನು ಬಳಸಲು 16 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗುವುದು ಹಾಗೂ ಈ ನಿಯಮ ಪಾಲನೆಗೆ ಸಾಮಾಜಿಕ ಜಾಲತಾಣಗಳನ್ನೇ ಹೊಣೆಯಾಗಿಸಲಾಗುವುದು’ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಟನಿ ಅಲ್ಬನೀಸ್‌ ಹೇಳಿದ್ದಾರೆ.

‘ಈ ಕುರಿತ ಮಸೂದೆಯನ್ನು ಈ ವರ್ಷದ ಅಧಿವೇಶನದ ಕೊನೆಯ 2 ವಾರಗಳಲ್ಲಿ ಮಂಡಿಸಲಿದ್ದು, ಇದು ಅಂಗೀಕಾರವಾದ 1 ವರ್ಷದ ನಂತರ ಜಾರಿಗೆ ಬರಲಿದೆ. ಈ ಅವಧಿಯಲ್ಲಿ ಎಕ್ಸ್‌, ಟಿಕ್‌ಟಾಕ್‌, ಇನ್ಸ್‌ಟಾಗ್ರಾಂ, ಫೇಸ್‌ಬುಕ್‌ಗಳು 16 ವರ್ಷಕ್ಕಿಂತ ಸಣ್ಣ ಮಕ್ಕಳನ್ನು ಜಾಲತಾಣ ಬಳಕೆಯಿಂದ ಹೊರಗಿಡುವ ವಿಧಾನದ ಕುರಿತು ಚಿಂತಿಸಬೇಕು’ ಎಂದು ಅಲ್ಬನೀಸ್‌ ಸೂಚಿಸಿದ್ದಾರೆ. ಆದರೆ ಇದು ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸುವುದನ್ನು ಒಳಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಮೆಟಾ ಸುರಕ್ಷತೆಯ ಮುಖ್ಯಸ್ಥ, ಸರ್ಕಾರ ನಿಗದಿಪಡಿಸಿರುವ ವಯೋಮಿತಿಯನ್ನು ಗೌರವಿಸುವುದಾಗಿ ಭರವಸೆ ನೀಡಿದ್ದಾರೆ. 

Latest Videos

undefined

ಸಿಎಂ ಪತ್ನಿ ಪ್ರಕರಣದ ಎಫೆಕ್ಟ್: ಮುಡಾ ಎಲ್ಲ 50:50 ಸೈಟ್‌ ರದ್ದು!

ಜೊತೆಗೆ, ಪೋಷಕರು ತಮ್ಮ ಮಕ್ಕಳು ಬಳಸುವ ಅಪ್ಲಿಕೇಶನ್‌ಗಳನ್ನು ನಿಯಂತ್ರಿಸಲು ಅಪ್ಲಿಕೇಶನ್ ಸ್ಟೋರ್‌ ಮತ್ತು ಆಪರೇಟಿಂಗ್ ಸಿಸ್ಟಂಗಳಲ್ಲಿರುವ ಸರಳ ಹಾಗೂ ಪರಿಣಾಮಕಾರಿ ಸಾದನಗಳನ್ನು ಬಲಸಬಹುದು ಎಂಬ ಸಲಹೆಯನ್ನೂ ನೀಡಿದ್ದಾರೆ. ಆದರೆ ಇದಕ್ಕೆ ಎಕ್ಸ್‌ ಹಾಗೂ ಟಿಕ್‌ಟಾಕ್‌ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಯಂಗ್‌ ಮೆಂಟಲ್‌ ಹೆಲ್ತ್‌ ಸರ್ವಿಸ್‌ ರೀಚ್‌ಔಟ್‌ ನಿರ್ದೇಶಕಿ, ಮಕ್ಕಳು ಸಹಜವಾಗಿ ನಿಷೇಧವನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಾರೆ ಹಾಗೂ ಸಮಸ್ಯೆಗೆ ಸಿಲುಕುತ್ತಾರೆ ಎಂದರು.

click me!