ನಿಧಿ ಶೋಧಕರಿಗೆ ಬೆಟ್ಟದಲ್ಲಿ 1000 ವರ್ಷ ಹಳೆಯ ಚಿನ್ನದ ನಾಣ್ಯ ಸಿಕ್ಕಿದೆ!

By Sathish Kumar KH  |  First Published Nov 7, 2024, 8:44 PM IST

ದೊಡ್ಡ ಪರ್ವತದಲ್ಲಿ ಮೆಟಲ್ ಡಿಟೆಕ್ಟರ್‌ನೊಂದಿಗೆ ನಡೆಯುವಾಗ ಬರೋಬ್ಬರಿ 1,000 ವರ್ಷಗಳ ಹಳೆಯ ನಾಣ್ಯ ಪತ್ತೆಯಾಗಿದೆ. ಅದರಲ್ಲಿರುವ ಚಿತ್ರವನ್ನು ನೋಡಿ ಸ್ಥಳೀಯರು ಶಾಕ್ ಆಗಿದ್ದಾರೆ.


ನಮ್ಮ ಸುತ್ತಮುತ್ತ ಇತಿಹಾಸದ ಅನೇಕ ರಹಸ್ಯಗಳು ಅಡಗಿವೆ. ಪುರಾತತ್ವಶಾಸ್ತ್ರಜ್ಞರು ಈ ರಹಸ್ಯಗಳನ್ನು ಹುಡುಕುತ್ತಾ ಪ್ರಪಂಚದಾದ್ಯಂತ ಸಂಚರಿಸುತ್ತಾರೆ. ಈಗಾಗಲೇ ಅನೇಕ ಕುತೂಹಲಕಾರಿ ರಹಸ್ಯಗಳನ್ನು ಬಯಲಿಗೆಳೆದಿದ್ದಾರೆ.

ನಿಧಿ ಹುಡುಕುವವರು ಕೂಡ ಇತಿಹಾಸದ ರಹಸ್ಯಗಳನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇತ್ತೀಚೆಗೆ, ಒಬ್ಬ ನಿಧಿ ಹುಡುಕುವ ವ್ಯಕ್ತಿ ನಾರ್ವೆಯ ಪರ್ವತದಲ್ಲಿ ತನ್ನ ಮೆಟಲ್ ಡಿಟೆಕ್ಟರ್‌ನೊಂದಿಗೆ ನಿಧಿ ಹುಡುಕುತ್ತಿದ್ದಾಗ ನಡೆದ ಘಟನೆಯನ್ನು ಸಾಮಾಜಿಕ ಮಾಧ್ಯಮಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೆಟಲ್ ಡಿಟೆಕ್ಟರ್ ಶಬ್ದ ಮಾಡಿದ ಸ್ಥಳದಲ್ಲಿ ಅಗೆದಾಗ ಒಂದು ಚಿನ್ನದ ನಾಣ್ಯ ಸಿಕ್ಕಿತು. 

Latest Videos

undefined

ಈ ನಾಣ್ಯ ಸಾವಿರ ವರ್ಷ ಹಳೆಯದು! ಅದರಲ್ಲೂ ಯೇಸುಕ್ರಿಸ್ತನ ಚಿತ್ರವಿರುವ ಅಪರೂಪದ ನಾಣ್ಯ! ಕ್ರಿ.ಶ. 330ರಲ್ಲಿ ಕಾನ್‌ಸ್ಟಂಟೈನ್ ದಿ ಗ್ರೇಟ್ ಆಳ್ವಿಕೆಯಲ್ಲಿ ರೋಮನ್ ಸಾಮ್ರಾಜ್ಯದ ರಾಜಧಾನಿ ಕಾನ್‌ಸ್ಟಾಂಟಿನೋಪಲ್‌ನಲ್ಲಿ ಈ ರೀತಿಯ ನಾಣ್ಯಗಳನ್ನು ಬಳಸುತ್ತಿದ್ದರು ಎಂದು ತಜ್ಞರು ಹೇಳುತ್ತಾರೆ. ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಈ ಅಪರೂಪದ ನಾಣ್ಯ ಪತ್ತೆಯಾದದ್ದು ಒಂದು ವರ್ಷದ ಹಿಂದೆ. ಆದರೆ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಕೆಲಸಗಾರನಿಗೆ 30 ಕೆಜಿ ನಾಣ್ಯಗಳ ಮೂಲಕ ಸಂಬಳ ಕೊಟ್ಟ ಮಾಲೀಕ!

ನಾರ್ವೆಯ ವೆಸ್ಟ್ರೆ ಸ್ಲೈಡ್ರೆ ಪರ್ವತದ ಬಳಿ ಈ ಚಿನ್ನದ ನಾಣ್ಯ ಪತ್ತೆಯಾಗಿದೆ. ನಾಣ್ಯದ ಎರಡೂ ಬದಿಗಳಲ್ಲಿ ಚಿತ್ರಗಳಿವೆ. ಒಂದು ಬದಿಯಲ್ಲಿ ಬೈಬಲ್ ಹಿಡಿದಿರುವ ಯೇಸುವಿನ ಚಿತ್ರವಿದ್ದರೆ, ಇನ್ನೊಂದು ಬದಿಯಲ್ಲಿ ಆ ಕಾಲದ ಸಾಮ್ರಾಜ್ಯದ ಚಿತ್ರವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಜ್ಞರ ಪ್ರಕಾರ, ಈ ನಾಣ್ಯ 977 ರಿಂದ 1025ರ ನಡುವೆ ಬೇಸಿಲ್ ಮತ್ತು ಕಾನ್‌ಸ್ಟಂಟೈನ್ ಚಕ್ರವರ್ತಿಯ ಆಳ್ವಿಕೆಯಲ್ಲಿ ತಯಾರಾದದ್ದು ಎಂದು ಹೇಳಲಾಗಿದೆ. ಆದರೆ, ಈ ನಾಣ್ಯ ಇಲ್ಲಿಗೆ ಹೇಗೆ ಬಂತು ಎಂಬುದರ ಬಗ್ಗೆ ಸಂಶೋಧನೆ ನಡೆಯುತ್ತಿದೆ.

click me!