ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗದಲ್ಲಿರುವ ಹಿಂದೂಗಳಿಗೆ ಕೆಲಸ ತೊರೆಯುವಂತೆ ಬೆದರಿಕೆ

By Kannadaprabha News  |  First Published Aug 22, 2024, 10:42 AM IST

ಹಿಂಸಾಪೀಡಿತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ಮುಂದುವರಿದಿದ್ದು, ನೂರಾರು ಹಿಂದೂ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಕೋಲ್ಕತಾ ಇಸ್ಕಾನ್‌ ಉಪಾಧ್ಯಕ್ಷ ರಾಧಾ ರಮಣ ದಾಸ್‌ ಆರೋಪಿಸಿದ್ದಾರೆ.


ಢಾಕಾ: ಹಿಂಸಾಪೀಡಿತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ಮುಂದುವರಿದಿದ್ದು, ನೂರಾರು ಹಿಂದೂ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಕೋಲ್ಕತಾ ಇಸ್ಕಾನ್‌ ಉಪಾಧ್ಯಕ್ಷ ರಾಧಾ ರಮಣ ದಾಸ್‌ ಆರೋಪಿಸಿದ್ದಾರೆ. ‘ಈ ಬೆದರಿಕೆಯ ಇತ್ತೀಚಿನ ಬಲಿಪಶು ಅಜೀಂಪುರ ಸರ್ಕಾರಿ ಕಾಲೇಜಿನ ಗೌತಮ್ ಚಂದ್ರ ಪಾಲ್. ಅವರಿಗೆ ಬಾಂಗ್ಲಾದೇಶದಲ್ಲಿ ಅತ್ಯುತ್ತಮ ರಸಾಯನಶಾಸ್ತ್ರ ಶಿಕ್ಷಕರನ್ನು ನೀಡಲಾಗಿತ್ತು ಮತ್ತು ಈಗ ಮುಸ್ಲಿಂ ವಿದ್ಯಾರ್ಥಿಗಳು ಅವರನ್ನು ರಾಜೀನಾಮೆ ನೀಡುವಂತೆ ಬೆದರಿಸಿದರು ಎಂದು ದಾಸ್‌ ಹೇಳಿದ್ದಾರೆ. ಸಂರಕ್ಷಿತ ಪ್ರದೇಶಗಳಲ್ಲಿ ಗಣಿಗಾರಿಕೆ ನಿಷೇಧ: ಸುಪ್ರೀಂ ಸಲಹೆ

ಸಂರಕ್ಷಿತ ಪ್ರದೇಶಗಳಲ್ಲಿ ಗಣಿಗಾರಿಕೆ ನಿಷೇಧ: ಸುಪ್ರೀಂ ಸಲಹೆ

Latest Videos

ನವದೆಹಲಿ: ಸಂರಕ್ಷಿತ ಮತ್ತು ಸಮುದಾಯಗಳಿಗೆ ಮೀಸಲಿರಿಸಿರುವ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸಲು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಬುಧವಾರ ಸೂಚಿಸಿದೆ. ವನ್ಯ ಜೀವಿಗಳು ಒಂದು ರಾಷ್ಟ್ರೀಯ ಉದ್ಯಾನವನ ಅಥವಾ ಅಭಯಾರಣ್ಯಕ್ಕೆ ಮುಕ್ತವಾಗಿ ಸಂಚರಿಸಲು ಅನುಕೂಲವಾಗಲು ಸಂರಕ್ಷಿತ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿ ಗಣಿಗಾರಿಕೆ ನಡೆಸಿದರೆ ಇದಕ್ಕೆ ಅಡಚಣೆ ಉಂಟಾಗುತ್ತದೆ ಎಂದು ನ್ಯಾ। ಬಿ.ಆರ್‌. ಗವಿ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ. 

ಪೋಖ್ರಣ್‌ ಬಳಿ ಐಎಎಫ್‌ ಯುದ್ಧ ವಿಮಾನದಿಂದ ಹಠಾತ್ ಬಿದ್ದ ಮದ್ದುಗುಂಡುಗಳಿದ್ದ 'ಏರ್‌ಸ್ಟೋರ್‌'

ಸಂರಕ್ಷಿತ ಪ್ರದೇಶದ ಸುತ್ತಲಿನ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ ಕೇಂದ್ರಕ್ಕೆ ಈ ಮನವಿ ಮಾಡಿದೆ. ಜೊತೆಗೆ ಸರ್ಕಾರ ಪರಿಸರ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಬೇಕು ಎಂದಿದೆ. ಕಳೆದ ವರ್ಷ ಏ.26ರಂದು ಸಂರಕ್ಷಿತ ಹಾಗೂ ಮೀಸಲು ಪ್ರದೇಶಗಳ ಸುತ್ತಮುತ್ತ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡದಂತೆ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿತ್ತು.

ಏಪ್ರಿಲ್‌ನಲ್ಲಿ ಅಂತರಿಕ್ಷ ನಿಲ್ದಾಣಕ್ಕೆ ಭಾರತೀಯ ಗಗನಯಾತ್ರಿಗಳು: ಸಿಂಗ್‌

ನವದೆಹಲಿ: ನಾಸಾ ಮತ್ತು ಇಸ್ರೋದ ಸಹಭಾಗಿತ್ವದಲ್ಲಿ ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಭಾರತದ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.  ಮೊದಲ 'ರಾಷ್ಟ್ರೀಯ ಬಾಹ್ಯಾಕಾಶ ದಿನದ ಕಾರ್ಯಕ್ರಮ'ದ ಕುರಿತಾಗಿ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜಿತೇಂದ್ರ ಸಿಂಗ್, 'ಭಾರತೀಯ ಗಗನಯಾತ್ರಿಗಳು ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ' ಎಂದರು.

ಹಾಸಿಗೆ ಹಿಡಿದ ಪತಿಯ ವೀರ್ಯ ಸಂಗ್ರಹಕ್ಕೆ ಪತ್ನಿಗೆ ಅನುಮತಿ ನೀಡಿದ ಕೇರಳ ಹೈಕೋರ್ಟ್‌

ನಾಸಾ ಮತ್ತು ಇಸ್ರೋದ ಈ ಯೋಜನೆ ಭಾಗವಾಗಿ ದೇಶದ ಇಬ್ಬರು ಗಗನಯಾತ್ರಿಗಳಾಗಿರುವ ಸುಭಾಂಶು ಶುಕ್ಲಾ ಮತ್ತು ಪ್ರಶಾಂತ್ ಬಾಲಕೃಷ್ಣ ನಾಯರ್‌ ಆಯ್ಕೆಯಾಗಿದ್ದಾರೆ. ಅಲ್ಲದೇ ಇದಕ್ಕಂತಲೇ ಅಮೆರಿಕದಲ್ಲಿ ನುರಿತ ತರಬೇತಿಯನ್ನು ಪಡೆದಿದ್ದಾರೆ. ಶುಕ್ಲಾರನ್ನು ಈ ಯೋಜನೆಗೆ ಇಸ್ರೋ ನಿಯೋಜನೆ ಮಾಡಿದ್ದು, ನಾಯರ್ ಬ್ಯಾಕಪ್‌ ಆಗಿ ಉಳಿಯಲಿದ್ದಾರೆ.

ಕೋಲ್ಕತ್ತಾ ವೈದ್ಯೆಯ ಕೊಂದವ ಆರ್‌ಜಿ ಕರ್ ಆಸ್ಪತ್ರೆಯ ಬಾಸ್‌ ಸಂದೀಪ್ ಘೋಷ್ ಶಿಷ್ಯ!

click me!