ಇದು ವಿಶ್ವದ ಭಯಾನಕ ಪಿಶಾಚಿ ಗೊಂಬೆ, ಮ್ಯೂಸಿಯಂನಲ್ಲಿದ್ದರೂ 17 ಪುರುಷರ ಮೇಲೆ ಮಾಡಿದೆ ದಾಳಿ!

By Chethan Kumar  |  First Published Aug 21, 2024, 8:10 PM IST

ಕೆಲ ಐತಿಹಾಸಿ ವಿಶೇಷತೆಗಳ ಪುರಾತನ ಗೊಂಬೆಯೊಂದನ್ನು ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಆದರೆ ಈ ಗೊಂಬೆ ಇದೀಗ ವಿಶ್ವದ ಭಯಾನಕ ಪಿಶಾಚಿ ಗೊಂಬೆ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಸಂಗ್ರಹಾಲಯದ ಗಾಜಿನೊಳಗಿದ್ದರೂ ಈ ಡಾಲ್‌ ಈಗಾಗಲೇ 17 ಮಂದಿ ಮೇಲೆ ದಾಳಿ ಮಾಡಿದೆ.


ಲಂಡನ್(ಆ.21) ಮಕ್ಕಳಿಗೆ ಗೊಂಬೆಗಳು ಇಷ್ಟ. ಅದರಲ್ಲೂ ಹೆಣ್ಣುಮಕ್ಕಳ ಆಟಿಕೆಗಳಲ್ಲಿ ಗೊಂಬೆಗಳ ಸಂಖ್ಯೆ ಹೆಚ್ಚು. ಡಾಲ್ ಮೇಲಿನ ಪ್ರೀತಿ ದೊಡ್ಡವರಾದರೂ ಕಡಿಮೆಯಾಗುವುದಿಲ್ಲ. ಆದರೆ ಇಲ್ಲೊಂದು ಡಾಲ್ ಇದೆ. ಗೊಂಬೆ ಎಂದು ಅಪ್ಪಿಕೊಳ್ಳಲು ಸಾಧ್ಯವಿಲ್ಲ, ಇಟ್ಟಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಪುರಾತನ ವಿಶೇಷತೆಗಳ ಕಾರಣ ಈ ಗೊಂಬೆಯನ್ನು ಖರೀದಿಸಿ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಆದರೆ ಯಾವಾಗ ಈ ಗೊಂಬೆ ಸಂಗ್ರಹಾಲಯ ಸೇರಿತೋ, ಅಲ್ಲಿಂದಲೇ ಭೂತ ಪ್ರೇತಗಳ ಕಾಟ ಶುರುವಾಗಿದೆ. ಇದುವರೆಗೆ ಬರೋಬ್ಬರಿ 17 ಮಂದಿ ಮೇಲೆ ಈ ಗೊಂಬೆ ದಾಳಿ ಮಾಡಿದೆ. ಇದೀಗ ಈ ಗೊಂಬೆಯನ್ನು ವಿಶ್ವದ ಭಯಾನಕ ಪಿಶಾಚಿ ಗೊಂಬೆ ಎಂದೇ ಕರೆಯುತ್ತಿದ್ದಾರೆ. ಈ ಗೊಂಬೆ ಇಂಗ್ಲೆಂಡ್‌ನ ದಕ್ಷಿಣ ಯಾರ್ಕ್‌ಶೈರ್ ಮ್ಯೂಸಿಯಂನಲ್ಲಿದೆ.

ಐತಿಹಾಸಿಕ, ಪುರಾತನ ವಸ್ತುಗಳನ್ನೊಳಗೊಂಡ ವಸ್ತುಸಂಗ್ರಹಾಲಯವನ್ನು 37 ವರ್ಷದ ಲೀ ಸ್ಟೀರ್ ನಡೆಸುತ್ತಿದ್ದಾರೆ. ಈ ಮ್ಯೂಸಿಯಂ ಹುಟ್ಟುಹಾಕಿದ ಲೀ ಸ್ಟೀರ್ ಈ ಗೊಂಬೆಯನ್ನು £86 ಅಂದರೆ ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 9,415 ರೂಪಾಯಿಗೆ ಖರೀದಿಸಿದ್ದಾರೆ. ಖಾಸಗಿ ಆನ್‌ಲೈನ್ ಶಾಪಿಂಗ್ ಮೂಲಕ ಈ ಗೊಂಬೆ ಖರೀದಿಸಿ ಮ್ಯೂಸಿಯಂನಲ್ಲಿಟ್ಟಿದ್ದಾರೆ.

Tap to resize

Latest Videos

undefined

ಸಾರಿಗೆ ಬಸ್‌ನಲ್ಲಿ ಭೂತ ಪ್ರಯಾಣ, ಸಿಸಿಟಿವಿಯಲ್ಲಿ ಪತ್ತೆಯಾದ ಅದೃಶ್ಯ ವ್ಯಕ್ತಿಯ ಸೆರೆ ಹಿಡಿದ ಕಂಡಕ್ಟರ್!

ಲೀ ಸ್ಟೀರ್ ಯಾವಾಗ ಈ ಗೊಂಬೆ ಖರೀದಿಸಿ ಮ್ಯೂಸಿಯಂನಲ್ಲಿಟ್ಟರೋ ಅಲ್ಲಿಂದ ಇವರ ಸಂಕಷ್ಟ ಶುರುವಾಗಿದೆ. ಗೊಂಬೆಯನ್ನು ತಂದು ಗಾಜಿನೊಳಗಿನ ಬಾಕ್ಸ್‌ನಲ್ಲಿ ಇಟ್ಟಿದ್ದಾರೆ. ಈ ಗೊಂಬೆ ಸಂಗಾತಿ ತಿರಸ್ಕರಿಸಲ್ಪಟ್ಟು ನೋವಿನಲ್ಲಿರುವ ರೀತಿ ಇದೆ. ಈ ಗೊಂಬೆ ಹೆಸರು ಎಲಿಝಬೆತ್. ಗೊಂಬೆಯನ್ನು ಸಂಗ್ರಹಾಲಯದಲ್ಲಿಟ್ಟ ಬಳಿಕ ಪ್ರತಿ ದಿನ ಲೀ ಸ್ಟೀರ್ ಎಲ್ಲಾ ಪುರಾತನ ವಸ್ತು, ಪಾರಂಪರಿಕ ವಸ್ತುಗಳನ್ನು ಪರಿಶೀಲಿಸುತ್ತಾರೆ. ಗಾಜಿನ ಮೇಲೆ ಧೂಳು ಹಿಡಿದಿದ್ದರೆ ಒರೆಸಿ ಶುಚಿಗೊಳಿಸುತ್ತಾರೆ. ಹೀಗೆ ಗೊಂಬೆ ಇಟ್ಟ ಕೊಠಡಿಯೊಳಗೆ ತೆರಳಿ ಪರಿಶೀಲಿಸುತ್ತದ್ದಂತೆ ಲೀ ಸ್ಟೀರ್ ಕುತ್ತಿಗೆ ಭಾಗದಲ್ಲಿ ಯಾರೋ ಪರಚಿದಂತೆ ಅನುಭವವಾಗಿದೆ. ಕೆಲವೇ ಕ್ಷಣದಲ್ಲಿ ಕುತ್ತಿಗೆಯಲ್ಲಿ ಉಗುರಿನ ಮಾರ್ಕ್ ಪತ್ತೆಯಾಗಿದೆ. 

ಇದೇ ರೀತಿ 16 ಪುರುಷರಿಗೆ ಅನುಭವವಾಗಿದೆ. ಇನ್ನು ಈ ಗೊಂಬೆಯ ಫೋಟೋ, ವಿಡಿಯೋ ತೆಗೆಯಲು ಮುಂದಾಗುವ ಸಂದರ್ಶಕರಿಗೂ ಸಮಸ್ಯೆಗಳಾಗಿದೆ. ಕ್ಯಾಮೆರಾ ಕೆಟ್ಟು ಹೋಗುವುದು, ರೆಕಾರ್ಡ್ ಮಾಡಿದ ವಿಡಿಯೋ ನಾಪತ್ತೆ, ಲೈಟ್ ತನ್ನಷ್ಟಕ್ಕೆ ಆಫ್ ಆಗುವುದು ಹೀಗೆ ಒಂದಲ್ಲಾ ಒಂದು ಅನಿಷ್ಠಗಳು ಸಂಭವಿಸಿದೆ. 

ಜಾನ್ ಪೌಲ್ ಕೆನ್ನಿ ಅನ್ನೋ ಮತ್ಬೊಬ್ಬ ಮ್ಯೂಸಿಯಂ ಪರಿವೀಕ್ಷಕನಿಗೂ ಇದೇ ರೀತಿ ಅನುಭವವಾಗಿದೆ. ಟಿಕ್‌ಟಾಕ್ ವಿಡಿಯೋ ಮಾಡುತ್ತಿರುವ ವೇಳೆ ಯಾರೋ ಹಿಂಬದಿಯಿಂದ ಶರ್ಟ್ ಹಿಡಿದು ಎಳೆದಂತಾಗಿದೆ. ಈ ಗೊಂಬೆಯ ಕೊಠಡಿಗೆ ತೆರಳಿದ ಪುರಷರಿಗೆ ಈ ರೀತಿಯ ಅನುಭವವಾಗಿದೆ. ಇದೀಗ ಈ ಗೊಂಬೆಯನ್ನು ಅಲ್ಲಿಂದೆ ತೆಗಯಲು ಭಯವಾಗುತ್ತಿದೆ. ಹಾಗಂತ ಇಟ್ಟುಕೊಳ್ಳಲು ಆಗದ ಪರಿಸ್ಥಿತಿ ಎದುರಾಗಿದೆ.

ಸ್ಮಶಾನದ ಪಕ್ಕದಲ್ಲಿರುವ ರಾಜಸ್ಥಾನ ವಿಧಾನಸಭೆಗೆ ಭೂತದ ಕಾಟ, 200 ಸಂಖ್ಯಾಬಲಕ್ಕೆ ಸಾವಿನ ಶಾಕ್!
 

click me!