ಟ್ಯೂಷನ್‌ಗೆ ಬರ್ತಿದ್ದ ಮಕ್ಕಳ ಜೊತೆ ಶಿಕ್ಷಕಿಯ ಕಾಮದಾಟ; ಟೀಚರ್‌ಗೆ ಶಿಕ್ಷೆ ಪ್ರಕಟ

By Mahmad Rafik  |  First Published Aug 14, 2024, 12:32 PM IST

37 ವರ್ಷದ ಶಿಕ್ಷಕಿಯೊಬ್ಬಳು ತನ್ನ ಬಳಿ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ ಮಕ್ಕಳ ಜೊತೆಯಲ್ಲಿ ಲೈಂಗಿಕ ಸಂಪರ್ಕ ಹೊಂದುತ್ತಿದ್ದಳು. ಆಕೆಯ ಲ್ಯಾಪ್‌ಟಾಪ್‌ನಲ್ಲಿ ಎಲ್ಲಾ ಸಾಕ್ಷಿ ಇತ್ತು.


ಶಾಲೆಯಲ್ಲಿ ಶಿಕ್ಷಕರು ಮತ್ತು ಮಕ್ಕಳ ನಡುವಿನ ಬಂಧವನ್ನು ಪದಗಳು ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳನ್ನು ಶಿಕ್ಷಕರು ತಮ್ಮ ಮಕ್ಕಳಂತೆಯೇ ಕಾಣುತ್ತಾರೆ. ಆದ್ರೆ ಈ ಮಾತುಗಳಿಗೆ ಅಪವಾದ ಎಂಬಂತೆ ಕೆಲವರ ವರ್ತನೆ ಇರುತ್ತದೆ. ಇಂತಹ ಸುದ್ದಿಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಟ್ಯೂಷನ್‌ಗೆ ಬರುತ್ತಿದ್ದ ಮಕ್ಕಳ ಜೊತೆ ಲೈಂಗಿಕ ಸಂಪರ್ಕ ಹೊಂದುತ್ತಿದ್ದ ಶಿಕ್ಷಕಿಗೆ ಆರು ವರ್ಷ ಜೈಲು ಶಿಕ್ಷೆ ನೀಡಿ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಗೆ ಗುರಿಯಾದ ಶಿಕ್ಷಕಿಯ ಹೆಸರು ಹೋಲಿ ರೌಸ್ ಸ್ವೀನಿ. ಅರೋಪ ಸಾಬೀತಾದ ಹಿನ್ನೆಲೆ ಶಿಕ್ಷೆಗೆ ಗುರಿಯಾಗಿದ್ದಾಳೆ.

37 ವರ್ಷದ ಸ್ವೀನಿ ಆನ್‌ಲೈನ್‌ನಲ್ಲಿ ಮಕ್ಕಳಿಗೆ ಟ್ಯೂಷನ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಳು. ಆನ್‌ಲೈನ್ ಕ್ಲಾಸ್ ಬಳಿಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಳು. ಕಾಮತೃಪ್ತಿಗಾಗಿ ಮನೆಗೆ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಅವರ ಜೊತೆ ಲೈಂಗಿಕ ಸಂಪರ್ಕ ಹೊಂದುತ್ತಿದ್ದಳು. ಹೀಗೆ ಹಲವು ವಿದ್ಯಾರ್ಥಿಗಳ ಜೊತೆಯಲ್ಲಿ ಮಹಿಳೆ ಸಂಬಂಧ ಹೊಂದುತ್ತಿದ್ದಳು. ಅಪ್ರಾಪ್ತ ಮಕ್ಕಳನ್ನೇ ಸ್ವೀನಿ ತನ್ನ ಕಾಮದಾಟಕ್ಕೆ ಬಳಸಿಕೊಳ್ಳುತ್ತಿದ್ದಳು.

Tap to resize

Latest Videos

undefined

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? 

ಒಮ್ಮೆ ಓರ್ವ ವಿದ್ಯಾರ್ಥಿಯ ತಾಯಿ ಮಗನ ವಾಟ್ಸಪ್‌ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಶಿಕ್ಷಕಿ ಸ್ವೀನಿ ಮಕ್ಕಳಿಗೆ ವಾಟ್ಸಪ್‌ ಚಾಟ್‌ನಲ್ಲಿ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಳು. ಈ ವಿಷಯ ತಿಳಿಯುತ್ತಿದ್ಧಂತೆ ವಿದ್ಯಾರ್ಥಿ ತಾಯಿ  ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶಿಕ್ಷಕಿ ಸ್ವೀನಿಯನ್ನು ಬಂಧಿಸಿ, ಆಕೆ ಬಳಸುತ್ತಿದ್ದ ಲ್ಯಾಪ್‌ಟಾಪ್ ವಶಕ್ಕೆ ಪಡೆದುಕೊಂಡಿದ್ದರು. ಲ್ಯಾಪ್‌ಟಾಪ್‌ ನಲ್ಲಿ ಅಪ್ರಾಪ್ತರ ಜೊತೆ ಲೈಂಗಿಕ ಸಂಬಂಧ ಬೆಳೆಸಿರುವ ಸಾಕ್ಷಿ ಲಭ್ಯವಾಗಿದೆ. ವಿಚಾರಣೆ ವೇಳೆಯೂ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ.

ಚುಮ್ಮಾ ಚುಮ್ಮಾ ದೇ ದೇ, ಸಂದರ್ಶನದಲ್ಲೇ ಶಿಕ್ಷಕಿ ಬಳಿ ಅಸಭ್ಯವಾಗಿ ವರ್ತಿಸಿದ ಪ್ರಿನ್ಸಿಪಾಲ್ ದೃಶ್ಯ ಸೆರೆ!

ಸ್ವೀನಿ ಮಕ್ಕಳಿಗೆ ಗಣಿತದ ಪಾಠ ಮಾಡುತ್ತಿದ್ದಳು. ಹಲವು ದಿನಗಳಿಂದ ಶಿಕ್ಷಕಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಳು. ನ್ಯಾಯಾಲಯ ಅಪರಾಧಿ ಸ್ವೀನಿಗೆ ಆರು ವರ್ಷದ ಜೈಲು ಶಿಕ್ಷೆ ನೀಡಿದ್ದು, ಭವಿಷ್ಯದಲ್ಲಿ  ಪಾಠ ಮಾಡದಂತೆ ನಿಷೇಧ ವಿಧಿಸಲಾಗಿದ್ದು, ಮಕ್ಕಳ ಹತ್ತಿರ ಹೋಗದಂತೆ ನ್ಯಾಯಾಲಯ ಆದೇಶ ನೀಡಿದ ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆಯ ಈ ರೀತಿಯ ವರ್ತನೆಯಿಂದ ಮಕ್ಕಳ ಮನಸ್ಸಿನಲ್ಲಿ ಗಂಭೀರ ಪರಿಣಾಮ ಬೀರಿರುತ್ತದೆ. ಹಾಗಾಗಿ ಮಕ್ಕಳಿಗೆ ಸೂಕ್ತ ಕೌನ್ಸಿಲಿಂಗ್ ಮಾಡಿಸುವ ಅಗತ್ಯವಿದೆ. ಮಹಿಳೆ ಶಿಕ್ಷಗೆ ಗುರಿಯಾಗಿದ್ದರಿಂದ ಮಕ್ಕಳ ಪೋಷಕರು ನಿರಾಳಗೊಂಡಿದ್ದಾರೆ. ಸದ್ಯ ಶಿಕ್ಷಕಿ ಜೈಲಿನಲ್ಲಿದ್ದಾಳೆ ಎಂದು ತನಿಖಾಧಿಕಾರಿ ಮಾಹಿತಿ ನೀಡಿದ್ದಾರೆ.

ಮಕ್ಕಳಿಗೆ ಹಸ್ತಮೈಥುನ ವಿಡಿಯೋ ಕಳಿಸಿದ್ದ ಶಿಕ್ಷಕಿ 

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 30 ವರ್ಷದ ಶಿಕ್ಷಕಿ, ಕಾಮತೃಷೆ ತೀರಿಸಿಕೊಳ್ಳಲು 17 ವರ್ಷದ ವಿದ್ಯಾರ್ಥಿಗೆ ಹಸ್ತಮೈಥುನದ ವಿಡಿಯೋ ಕಳುಹಿಸಿದ್ದಳು. ಮದುವೆಯಾಗಿದ್ದರೂ ಶಿಕ್ಷಕಿಗೆ ಅಪ್ರಾಪ್ತ ಮಕ್ಕಳ ಜೊತೆ ಲೈಂಗಿಕ ಸಂಪರ್ಕ ಹೊಂದುವ ಚಟವಿತ್ತು. ಆನಂತರ ಮಕ್ಕಳಿಗೆ ಬ್ಲಾಕ್‌ಮೇಲ್ ಮಾಡಿ ಸೆಕ್ಸ್‌ನಲ್ಲಿ ಭಾಗಿಯಾಗುತ್ತಿದ್ದಳು.

8ನೇ ತರಗತಿ ವಿದ್ಯಾರ್ಥಿಗೆ ತನ್ನ ನಗ್ನ ಫೋಟೋ ಕಳುಹಿಸಿ ಮಂಚಕ್ಕೆ ಕರೆದ ಶಿಕ್ಷಕಿ ಅರೆಸ್ಟ್!

click me!