ಗ್ರೀಸ್‌ ಬಳಿ ದೋಣಿ ದುರಂತ: 300 ಪಾಕಿಸ್ತಾನಿ ಅಕ್ರಮ ವಲಸಿಗರು ಬಲಿ?

Published : Jun 20, 2023, 06:24 AM ISTUpdated : Jun 20, 2023, 06:25 AM IST
ಗ್ರೀಸ್‌ ಬಳಿ ದೋಣಿ ದುರಂತ:  300 ಪಾಕಿಸ್ತಾನಿ ಅಕ್ರಮ ವಲಸಿಗರು ಬಲಿ?

ಸಾರಾಂಶ

400 ಪಾಕಿಸ್ತಾನಿಯರು ಸೇರಿದಂತೆ 750ಕ್ಕೂ ಹೆಚ್ಚು ವಲಸಿಗರನ್ನು ಕೊಂಡೊಯ್ಯುತ್ತಿದ್ದ ಬೋಟೊಂದು ಗ್ರೀಸ್‌ ದೇಶದ ಕಡಲ ತೀರದಲ್ಲಿ ಮುಳುಗಿದ ಕಾರಣ, 300ಕ್ಕೂ ಹೆಚ್ಚು ಪಾಕಿಸ್ತಾನಿ ಪ್ರಜೆಗಳು ಸಾವನ್ನಪ್ಪಿರುವ ಭೀತಿ ಎದುರಾಗಿದೆ.

ಅಥೆನ್ಸ್‌: 400 ಪಾಕಿಸ್ತಾನಿಯರು ಸೇರಿದಂತೆ 750ಕ್ಕೂ ಹೆಚ್ಚು ವಲಸಿಗರನ್ನು ಕೊಂಡೊಯ್ಯುತ್ತಿದ್ದ ಬೋಟೊಂದು ಗ್ರೀಸ್‌ ದೇಶದ ಕಡಲ ತೀರದಲ್ಲಿ ಮುಳುಗಿದ ಕಾರಣ, 300ಕ್ಕೂ ಹೆಚ್ಚು ಪಾಕಿಸ್ತಾನಿ ಪ್ರಜೆಗಳು ಸಾವನ್ನಪ್ಪಿರುವ ಭೀತಿ ಎದುರಾಗಿದೆ. ಘಟನೆಯಲ್ಲಿ ಈವರೆಗೆ 78 ಜನರನ್ನು ಮಾತ್ರವೇ ರಕ್ಷಿಸಲಾಗಿದೆ. ಉಳಿದ 500ಕ್ಕೂ ಹೆಚ್ಚು ನಾಪತ್ತೆಯಾಗಿರುವ ಕಾರಣ ಸಾವಿನ ಸಂಖ್ಯೆ 600 ದಾಟುವ ಆತಂಕ ವ್ಯಕ್ತವಾಗಿದೆ.  ಈ ಹಿನ್ನೆಲೆಯಲ್ಲಿ ಸೋಮವಾರ ಪಾಕಿಸ್ತಾನ ಸರ್ಕಾರ ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಿಸಿತ್ತು. ಅಲ್ಲದೆ ಅಕ್ರಮ ವಲಸೆಗೆ ನೆರವಾಗಿದ್ದ 12 ಜನರನ್ನು ಬಂಧಿಸಿದೆ. ಜೊತೆಗೆ ಇಂಥ ಮಾನವ ಕಳ್ಳಸಾಗಣೆ ಕೃತ್ಯದಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದೆ.

ಏನಾಯ್ತು?:

ದೇಶದ ಕೆಟ್ಟಆರ್ಥಿಕ ಪರಿಸ್ಥಿತಿ (bad economic situation), ಹಣದುಬ್ಬರ (inflation) ಮೊದಲಾದ ಸಮಸ್ಯೆಯಿಂದ ಕಂಗೆಟ್ಟ ಸಾವಿರಾರು ಪಾಕಿಸ್ತಾನಿ ಪ್ರಜೆಗಳು ಪ್ರತಿವರ್ಷ ಉತ್ತಮ ಬದುಕು ಅರಸಿ ಅಕ್ರಮ ಮಾರ್ಗದ ಮೂಲಕ ಯುರೋಪ್‌ ದೇಶಗಳನ್ನು (European countries) ಪ್ರವೇಶಿಸುತ್ತಾರೆ. ಇದಕ್ಕಾಗಿ ಪ್ರತಿ ಕುಟುಂಬ 25 ಲಕ್ಷ ರು.ಗಳನ್ನು ವ್ಯಯಿಸುತ್ತದೆ.  ಇಂಥ ಪ್ರಯಾಣದ ಭಾಗವಾಗಿ 400 ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ 750 ಜನರನ್ನು ಹೊತ್ತ ಬೋಟೊಂದು ಕಳೆದ ವಾರ ಟರ್ಕಿಯಿಂದ ಇಟಲಿಯತ್ತ ಪ್ರಯಾಣಿಸುತ್ತಿತ್ತು. ಸಮುದ್ರದಲ್ಲಿ ಕಿಕ್ಕಿರಿದು ತುಂಬಿದ್ದ ಬೋಟನ್ನು ಕಂಡ ಗ್ರೀಕ್‌ ಕರಾವಳಿ ಪಡೆಯ ಸಿಬ್ಬಂದಿ, ಜನರಿಗೆ ನೆರವಿನ ಹಸ್ತ ಚಾಚಿದರೂ ಬೋಟ್‌ನಲ್ಲಿದ್ದ ಜನತೆ ಅದನ್ನು ತಿರಸ್ಕರಿಸಿ ತಮ್ಮ ಪ್ರಯಾಣ ಮುಂದುವರೆಸಿದ್ದಾರೆ.

ಮೆಡಿಟರೇನಿಯನ್ ಸಮುದ್ರದಲ್ಲಿ ದುರಂತ, 90 ಮಂದಿ ಸಾವು, ನಾಲ್ವರು ಗಂಭೀರ!

ಇದಾದ ಕೆಲ ಹೊತ್ತಿನಲ್ಲೇ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕಿ ಮಾರ್ಗ ಬಿಟ್ಟು ಬೇರೆ ಕಡೆ ಚಲಿಸುತ್ತಿದ್ದ ಬೋಟ್‌ಗೆ ನೆರವಾಗಲು ಮತ್ತೊಂದು ಬೋಟ್‌ನ ಸಿಬ್ಬಂದಿ ಮುಂದಾಗಿದ್ದರು. ಹೀಗೆ ನೆರವಿನ ಯತ್ನದ ವೇಳೆ ಬೋಟನ್ನು ಎಳೆದಾಗ ಅದು ಮಗುಚಿ ಬಿದ್ದು ದುರ್ಘಟನೆ ಸಂಭವಿಸಿದೆ. ಬಳಿಕ ಘಟನಾ ಸ್ಥಳದಿಂದ 12 ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ 78 ಜನರನ್ನು ಮಾತ್ರವೇ ರಕ್ಷಿಸಲಾಗಿದೆ. ಉಳಿದ 500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಘಟನೆ ನಡೆದು ನಾಲ್ಕೈದು ದಿನಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವವರು ಬದುಕಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಕೆಳ​ಮ​ಹ​ಡಿಗೆ ಪಾಕಿಗ​ಳನ್ನು ದಬ್ಬಿದ್ದೇ ಅವರ ಸಾವಿಗೆ ಕಾರ​ಣ?

ದೋಣಿ ಮುಳು​ಗು​ತ್ತಿದೆ ಎಂದು ಗೊತ್ತಾ​ಗು​ತ್ತಿ​ದ್ದಂತೆಯೇ ಬೋಟ್‌ನ ಕೆಳ ಮಹಡಿಗೆ ಅವ​ರನ್ನು ಕಳಿ​ಸ​ಲಾ​ಗಿದೆ. ಏಕೆಂದರೆ ಮುಳು​ಗು​ವು​ದ​ರಿಂದ ಹೆಚ್ಚು ಬಾಧಿ​ತ​ವಾ​ಗು​ವುದು ಕೆಳ​ಮ​ಹಡಿ. ಹೀಗಾಗಿ ದುರ್ಘಟನೆಯಲ್ಲಿ ಪಾಕಿಸ್ತಾನಿ ಪ್ರಜೆಗಳ ಸಾವೇ ಹೆಚ್ಚಿದೆ. ಅವ​ರು ಬದುಕಿರುವ ಸಾಧ್ಯತೆ ಕಡಿಮೆ. ಕಾರಣ, ಅಲ್ಲಿ ಇದ್ದವರು ತಪ್ಪಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಡುಪಿ ಕೊಡೇರಿ ಬೋಟ್ ದುರಂತ: ನಾಪತ್ತೆಯಾಗಿದ್ದ ನಾಲ್ವರ ಶವ ಪತ್ತೆ

ಕುಡಿಯಲೂ ನೀರಿಲ್ಲ:

ಬೋಟ್‌ನಲ್ಲಿ ಕುಡಿಯುವ ನೀರು ಕೂಡಾ ಖಾಲಿಯಾಗಿತ್ತು ಸಮುದ್ರದಲ್ಲಿ ದೊಡ್ಡ ಹಡಗಿನ ನಾವಿಕರು ನೀಡಿದ ಸ್ವಲ್ಪ ನೀರನ್ನು ಬಳಸಿ ಜೀವ ಉಳಿಸಿಕೊಂಡಿದ್ದೆವು. ಆದರೆ ಕಳೆದ 5 ದಿನಗಳಿಂದ ಬೋಟ್‌ ತನ್ನ ನಿರ್ಧರಿತ ಮಾರ್ಗ ಬಿಟ್ಟು ಅಲೆಗಳ ಹೊಡೆತಕ್ಕೆ ಬೇರೆಡೆ ಚಲಿಸುತ್ತಿತ್ತು ಎಂದು ಘಟನೆಯಲ್ಲಿ ಬದುಕುಳಿದ ಪಾಕಿಸ್ತಾನಿ ವ್ಯಕ್ತಿಯೊಬ್ಬ ತನ್ನ ಕುಟುಂಬಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ
ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್