ಭಾರತ ಜತೆಗಿನ ಯುದ್ಧ ಸ್ಥಗಿತಕ್ಕೆ ಟ್ರಂಪ್‌ ಮಧ್ಯಸ್ಥಿಕೆ ಕಾರಣ, ಕಾಶ್ಮೀರ ಸಮಸ್ಯೆಗೆ ಪರಿಹಾರ ಬೇಕಿದೆ: ಶೆಹಬಾಜ್‌

Gowthami K   | Kannada Prabha
Published : Sep 26, 2026, 10:02 AM IST
shehbaz sharif and trump

ಸಾರಾಂಶ

2025ರ ಭಾರತ-ಪಾಕ್ ಯುದ್ಧ ತಡೆಯಲು ಟ್ರಂಪ್ ಕಾರಣ ಎಂದು ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಇದೇ ವೇಳೆ ಅವರು ಕಾಶ್ಮೀರ ಸಮಸ್ಯೆ ಮತ್ತು ಅಮೆರಿಕ-ಇರಾನ್ ಶಾಂತಿ ಒಪ್ಪಂದದ ಬಗ್ಗೆಯೂ ಮಾತನಾಡಿದ್ದಾರೆ. ಮತ್ತೊಂದೆಡೆ, ಅಮೆರಿಕ ಮತ್ತು ಚೀನಾ ಅಧ್ಯಕ್ಷರು ದ್ವಿಪಕ್ಷೀಯ ಸಂಬಂಧ ಬಲಪಡಿಸಲು ಪಣತೊಟ್ಟಿದ್ದಾರೆ.

ವಿಶ್ವಸಂಸ್ಥೆ: ‘ 2025ರಲ್ಲಿ ಭಾರತ- ಪಾಕಿಸ್ತಾನ ನಡುವಿನ ಯುದ್ಧ ಸ್ಥಗಿತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಕಾಲಿಕ ಮಧ್ಯಸ್ಥಿಕೆಯೇ ಕಾರಣ’ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ವಿಶ್ವಸಂಸ್ಥೆ ಹೇಳಿದ್ದಾರೆ. ಇದೇ ವೇಳೆ ಕಾಶ್ಮೀರ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಸುದೀರ್ಘ 23 ನಿಮಿಷಗಳ ಕಾಲ ಮಾತನಾಡಿದ ಷರೀಫ್‌, ಟ್ರಂಪ್‌ ಅವರ ದೃಢ ನಿಶ್ಚಯ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ಧನ್ಯವಾದ ತಿಳಿಸಿದರು. ಇದೇ ವೇಳೆ ಅವರು ಮತ್ತೆ ಕಾಶ್ಮೀರದ ತಂಟೆಗೆ ಬರುವ ತಮ್ಮ ಹಳೆ ಚಾಳಿ ಮುಂದುವರೆಸಿದ್ದಾರೆ.

‘ ಅಮೆರಿಕ ಅಧ್ಯಕ್ಷರ ಸಕಾಲಿಕ ಹಸ್ತಕ್ಷೇಪದಿಂದ ದಕ್ಷಿಣ ಏಷ್ಯಾದಲ್ಲಿ ಲಕ್ಷಾಂತರ ಜೀವಗಳು ಉಳಿದಿದೆ. 2025ರ ಸಂಘರ್ಷವನ್ನು ದಕ್ಷಿಣ ಏಷ್ಯಾ ಮತ್ತೆ 2025ರ ರ ಸಂಘರ್ಷದ ಆ ಪ್ರಪಾತವನ್ನು ಮತ್ತೆ ಎಂದಿಗೂ ತಲುಪದಂತೆ ನೋಡಿಕೊಳ್ಳಲು ಕಾಶ್ಮೀರ ಸಮಸ್ಯೆಗೆ ನ್ಯಾಯಯುತ ಪರಿಹಾರ ಬೇಕಿದೆ’ ಎಂದರು.

ತಮ್ಮ ಭಾಷಣದಲ್ಲಿ ಷರೀಫ್‌ ಸಿಂಧು ಜಲ ಒಪ್ಪಂದದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಇದರ ಜತೆಗೆ ಅಮೆರಿಕ- ಇರಾನ್ ಯುದ್ಧ ಸ್ಥಗಿತದ ಬಗ್ಗೆ ಪಾಕ್‌ ಪ್ರಯತ್ನದ ಬಗ್ಗೆಯೂ ಟ್ರಂಪ್‌ ಮಾತನಾಡಿದ್ದು, ‘ ಪಾಕಿಸ್ತಾನವು ಸಂಘಟಿತ ಪ್ರಯತ್ನಗಳ ತ್ವರಿತ ಕಾರ್ಯಾಚರಣೆ ನಡೆಸಿತು. ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್‌ ಅನ್ನು ಒಂದೇ ಸೂರಿನಡಿಯಲ್ಲಿ ಯಶಸ್ವಿಯಾಗಿ ತಂದಿತು. ಇಸ್ಲಾಮಾಬಾದ್ ಮಾತುಕತೆಯಿಂದ ಹಿಡಿದು ಇಸ್ಲಾಮಾಬಾದ್ ತಿಳುವಳಿಕೆ ಒಪ್ಪಂದದವರೆಗೆ, ಈ ಗಂಭೀರ ಸಂಘರ್ಷವನ್ನು ಕೊನೆಗೊಳಿಸಲು ಅನೇಕ ಐತಿಹಾಸಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ದ್ವಿಪಕ್ಷೀಯ ಸಂಬಂಧಕ್ಕೆ ಬಲ: ಟ್ರಂಪ್‌-ಕ್ಸಿ ಪಣ

ಸದ್ಯ ಅಮೆರಿಕ ಭೇಟಿಯಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದ್ವಿಪಕ್ಷೀಯ ಮಾತುಕತೆ ಯಶ ಕಂಡಿದೆ ಹಾಗೂ ಹಳೆಯ ವೈಷಮ್ಯ ಮರೆತು ಪರಸ್ಪರ ಸಂಬಂಧ ಬಲಪಡಿಸಲು ಉಭಯ ನಾಯಕರು ಪಣ ತೊಟ್ಟಿದ್ದಾರೆ,

ಕ್ಸಿ ಜತೆ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆಸಿದ ಟ್ರಂಪ್‌, ‘ಅಮೆರಿಕ-ಚೀನಾ ಬಾಂಧವ್ಯ ಈಗ ಹಿಂದೆಂದಿಗಿಂತ ಉತ್ತಮವಾಗಿದೆ’ ಎಂದು ವರ್ಣಿಸಿದರು. ಜತೆಗೆ, ಎರಡೂ ಕಡೆಯವರ ಸಾಮಾನ್ಯ ಹಿತಾಸಕ್ತಿಗಳ ಆಧಾರದಲ್ಲಿ ಭವಿಷ್ಯದ ಸಂಬಂಧಗಳ ದಿಕ್ಕು ರೂಪಿಸುವುದಾಗಿ ಅವರು ಹೇಳಿದರು.

ಓವಲ್‌ ಕಚೇರಿಯಲ್ಲಿ ಕ್ಸಿ ಜತೆ 2 ಗಂಟೆ ಮಾತುಕತೆ ಬಳಿಕ ಶ್ವೇತಭವನದಲ್ಲಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಮಾತನಾಡಿದ ಟ್ರಂಪ್, ‘ಅಮೆರಿಕನ್ನರು ಮತ್ತು ಚೀನಿಯರು ಸರಕು, ಜ್ಞಾನ, ಸಂಪ್ರದಾಯಗಳು, ಆಲೋಚನೆಗಳನ್ನು ವಿನಿಮಯಿಸಿಕೊಂಡಿದ್ದಾರೆ. ಇದು ವಾಣಿಜ್ಯ ಮತ್ತು ಗೌರವಕ್ಕೆ ಬುನಾದಿಯಾಗಿದೆ’ ಎಂದರು.

ಜಿನ್‌ಪಿಂಗ್‌ ಮಾತನಾಡಿ, ‘ನಮ್ಮ ಸಂಬಂಧಗಳು ಐತಿಹಾಸಿಕ ಘಟ್ಟ ತಲುಪಿವೆ. ಟ್ರಂಪ್‌ ಜತೆಗಿನ ಮಾತುಕತೆ ವೇಳೆ ಅನೇಕ ವಿಚಾರಗಳಲ್ಲಿ ಸಾಮಾನ್ಯ ಒಮ್ಮತಕ್ಕೆ ಬರಲಾಗಿದೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲಂಚ್ ಬ್ರೇಕ್‌ನಲ್ಲಿ ಬದಲಾದ ಯುವತಿ ಲೈಫ್, ₹19 ಕೋಟಿ ಜಾಕ್‌ಪಾಟ್ ಕಸದ ಬುಟ್ಟಿಗೆ ಸೇರಬೇಕಿದ್ದ ಬದುಕಿನಲ್ಲಿ ಅದೃಷ್ಟ!
ಆಸ್ಟ್ರೇಲಿಯಾದಿಂದ ಅಮೆರಿಕಕ್ಕೆ ಸಾಗಿಸುತ್ತಿದ್ದಾಗ ಚೀನಾ ಪಾಲಾದ F-35 ಯುದ್ಧವಿಮಾನದ ಬಿಡಿಭಾಗ! ದಾರಿ ತಪ್ಪಿದ್ದೆಲ್ಲಿ?