ಕಜಖಸ್ಥಾನ, ಕೊರಿಯಾ ಬಳಿಕ ಮತ್ತೊಂದು ಭೀಕರ ದುರಂತ: ನದಿಗೆ ಬಿದ್ದ ಟ್ರಕ್, 60 ಜನರ ಸಾವು

Published : Dec 30, 2024, 01:38 PM IST
ಕಜಖಸ್ಥಾನ, ಕೊರಿಯಾ ಬಳಿಕ ಮತ್ತೊಂದು ಭೀಕರ ದುರಂತ: ನದಿಗೆ ಬಿದ್ದ ಟ್ರಕ್, 60 ಜನರ ಸಾವು

ಸಾರಾಂಶ

ಪ್ರಯಾಣಿಕರಿಂದ ತುಂಬಿದ್ದ ಟ್ರಕ್ ನದಿಗೆ ಉರುಳಿ 60 ಜನರು ಮೃತಪಟ್ಟಿದ್ದಾರೆ. ಈ ದುರಂತ ದಕ್ಷಿಣ ಸೀದಾಮಾ ಎಂಬಲ್ಲಿ ಸಂಭವಿಸಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.

ಅದೀಸ್ ಅಬಾಬಾ: ಕಜಖಸ್ಥಾನ, ದಕ್ಷಿಣ ಕೊರಿಯಾದಲ್ಲಿನ ವಿಮಾನ ಪತನದ ಬಳಿಕ ಆಫ್ರಿಕಾದ ಪೂರ್ವ ರಾಷ್ಟ್ರ ಇಥಿಯೊಫಿಯಾದಲ್ಲಿ ಭೀಕರ ದುರಂತ ಸಂಭವಿಸಿದ್ದು, 60 ಜನರು ಮೃತರಾಗಿದ್ದಾರೆ. ಪ್ರಯಾಣಿಕರಿಂದ ತುಂಬಿದ್ದ ಟ್ರಕ್ ನದಿಗೆ ಉರುಳಿದ ಪರಿಣಾಮ 60 ಜನರು ಜಲಸಮಾಧಿಯಾಗಿದ್ದಾರೆ.  ದಕ್ಷಿಣ ಸೀದಾಮಾ ಎಂಬಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಸ್ಥಳೀಯ ಮಾಧ್ಯಮ ಸಂಸ್ಥೆಯ ವರದಿ ಪ್ರಕಾರ, ಭಾನುವಾರ ರಾತ್ರಿ  ಈ ಘಟನೆ ನಡೆದಿದೆ. ಗಾಯಾಳುಗಳನ್ನು ಬೋನಾ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಸರ್ಕಾರಿ ಸ್ವಾಮ್ಯದ ಇಥಿಯೋಪಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್(EBC) ವರದಿ ಪ್ರಕಾರ್, ಟ್ರಕ್‌ನಲ್ಲಿದ್ದ ಎಲ್ಲ ಜನರು ಮದುವೆ ಸಂಭ್ರಮದಲ್ಲಿ ಭಾಗಿಯಾಗಲು ತೆರಳುತ್ತಿದ್ದರು. ಕೆಟ್ಟ ರಸ್ತೆಗಳಿಂದಾಗಿ ಇಥಿಯೊಫಿಯಾದಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸುತ್ತಿರುತ್ತವೆ. ಚಾಲಕನ ನಿರ್ಲಕ್ಷ್ಯ ಮತ್ತು ವಾಹನದ ದುರಸ್ತಿಯಿಂದಾಗಿ ಈ ಅಪಘಾತ ಸಂಭವಿಸಿದೆ. ನದಿ ಪಕ್ಕದಲ್ಲಿದ್ರೂ ರಸ್ತೆ ಬದಿ ಯಾವುದೇ ರೀತಿಯ ತಡೆಗೋಡೆ ಸಹ ನಿರ್ಮಿಸಿರಲಿಲ್ಲ. ರಸ್ತೆಯಲ್ಲಿ ಯಾವುದೇ ಸುರಕ್ಷಾ ಕ್ರಮಗಳು ಸಹ ಇರಲಿಲ್ಲ. 

ಇಬಿಸಿ ವರದಿ ಪ್ರಕಾರ, ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ನದಿಗೆ ಉರುಳಿದೆ.  ನದಿಯಲ್ಲಿ ಶೋಧ ಕಾರ್ಯ ಇನ್ನೂ ಮುಂದುವರಿದಿದೆ. ಸದ್ಯದ ಮಾಹಿತಿ ಪ್ರಕಾರ 60 ಜನರು ಮೃತರಾಗಿರೋದು ಖಚಿತಯವಾಗಿದೆ. ಆದ್ರೆ ಟ್ರಕ್‌ನಲ್ಲಿ ಎಷ್ಟು ಜನರು ಪ್ರಯಾಣಿಸುತ್ತಿದ್ದರು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯ ಮುಂದುವರಿದಿದೆ.

ಇದನ್ನೂ ಓದಿ: ಏನಾಯ್ತು? ನಾನೇಕೆ ಇಲ್ಲಿದ್ದೇನೆ? ಕೊರಿಯಾ ವಿಮಾನ ದುರಂತದಲ್ಲಿ ಬದುಕುಳಿದವರ ಆಘಾತಕಾರಿ ಅನುಭವ

2018ರಲ್ಲಿ ಇಂತಹುವುದೇ ದೊಡ್ಡ ಭೀಕರ ದುರಂತವೊಂದು ನಡೆದಿತ್ತು. ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ವಾಹನ, ಆಳವಾದ ಕಣಿವೆಗೆ ಬಿದ್ದ ಪರಿಣಾಮ 38 ಜನರು ಮೃತರಾಗಿದ್ದರು. 

ಭಾನುವಾರ ಬೆಳಗ್ಗೆ ದಕ್ಷಿಣ ಆಫ್ರಿಕಾದ ಮುವಾನ್ ನಲ್ಲಿ ವಿಮಾನವೊಂದು ಪತನಗೊಂಡಿತ್ತು. 181ರಲ್ಲಿ 179 ಜನರು ಮೃತರಾಗಿದ್ದಾರೆ. ಅಜೆರ್ಬೈಜಾನ್ ರಾಜಧಾನಿ ಬಾಕುದಿಂದ ರಷ್ಯಾದ ಚೆಚೆನ್ಯಾ ಪ್ರಾಂತ್ಯದ ರಾಜಧಾನಿ ಗ್ರೋಜ್ನಿಗೆ ಹೋಗುತ್ತಿದ್ದ ಅಜೆರ್ಬೈಜಾನ್ ಏರ್ಲೈನ್ಸ್ ವಿಮಾನವು ಡಿಸೆಂಬರ್ 25 ರಂದು ಪತನಗೊಂಡಿತ್ತು. ಈ ವಿಮಾನದಲ್ಲಿ ಐವರು ಸಿಬ್ಬಂದಿ ಸೇರಿದಂತೆ 67 ಜನರು ಪ್ರಯಾಣಿಸುತ್ತಿದ್ದರು. ಈ ದುರಂತದಲ್ಲಿ 42 ಮಂದಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: South Korea Plane Crash: 181ರಲ್ಲಿ 179 ಜನರ ಸಾವು, ಆ ಇಬ್ಬರು ಬದುಕಿದ್ದೇಗೆ? ಪೈಲಟ್ ತಪ್ಪು ಮಾಡಿದ್ದೆಲ್ಲಿ? 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್