8ನೇ ಮಗು ಸ್ವಾಗತಿಸಲು ಸಿದ್ಧರಾದ ಬ್ರಿಟನ್‌ ಮಾಜಿ ಪ್ರಧಾನಿ: 3 ಹೆಂಡತಿಯರ ಮುದ್ದಿನ ಗಂಡನಾಗಿರೋ ಬೋರಿಸ್‌ ಜಾನ್ಸನ್‌

By BK Ashwin  |  First Published May 20, 2023, 7:25 PM IST

ಕ್ಯಾರಿ ಜಾನ್ಸನ್‌ ಬೋರಿಸ್‌ ಜಾನ್ಸನ್‌ ಅವರ 3ನೇ ಪತ್ನಿಯಾಗಿದ್ದು, ಈ ದಂಪತಿಗೆ ಈಗಾಗಲೇ ವಿಲ್ಫ್ ಮತ್ತು ರೋಮಿ ಎಂಬ ಇಬ್ಬರು ಮಕ್ಕಳಿದ್ದಾರೆ.


ಲಂಡನ್‌ (ಮೇ 20, 2023): ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ 8ನೇ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಅವರ 3ನೇ ಪತ್ನಿ ಕ್ಯಾರಿ ಜಾನ್ಸನ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. 

ಇನ್ನು, ಕ್ಯಾರಿ ಜಾನ್ಸನ್‌ರೊಂದಿಗೆ ಈ ಮಗು ಕನ್ಸರ್ವೇಟಿವ್ ಪಕ್ಷದ ನಾಯಕ ಬೋರಿಸ್ ಜಾನ್ಸನ್ ಅವರೊಂದಿಗೆ ಮೂರನೇ ಮಗುವಾಗಿರುತ್ತದೆ. ಈ ದಂಪತಿಗೆ ಈಗಾಗಲೇ ವಿಲ್ಫ್ ಮತ್ತು ರೋಮಿ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ಕ್ರಮವಾಗಿ 2020 ಮತ್ತು 2021 ರಲ್ಲಿ ಅಂದರೆ ಬೋರಿಸ್ ಜಾನ್ಸನ್‌ ಪ್ರಧಾನಿಯಾಗಿದ್ದ ಅವಧಿಯಲ್ಲಿ ಜನಿಸಿದ್ದಾರೆ. 

Tap to resize

Latest Videos

undefined

ಇದನ್ನು ಓದಿ: ಯುಕೆಯಲ್ಲಿ ಬೆಲೆ ಏರಿಕೆಯದ್ದೇ ದೊಡ್ಡ ಸಮಸ್ಯೆ: ಸೂಪರ್‌ಮಾರ್ಕೆಟ್‌ ಕಳ್ಳತನದ ಹಾದಿ ಹಿಡಿದ ಯುವಕರು!

ಇನ್‌ಸ್ಟಾಗ್ರಾಮ್‌ನಲ್ಲಿ ಈ ಸುದ್ದಿ  ಹಂಚಿಕೊಂಡ ಕ್ಯಾರಿ ಜಾನ್ಸನ್‌, ತನ್ನ ಇಬ್ಬರು ಮಕ್ಕಳೊಂದಿಗೆ ತನ್ನ ಫೋಟೋವನ್ನು ಪೋಸ್ಟ್‌ ಮಾಡಿದ್ದು ಮತ್ತು "ಕೆಲವೇ ವಾರಗಳಲ್ಲಿ ತಂಡದ ನೂತನ ಸದಸ್ಯರು ಆಗಮಿಸುತ್ತಿದ್ದಾರೆ" ಎಂದು ಬರೆದಿದ್ದಾರೆ. ಅಲ್ಲದೆ, ತಾನು ಕಳೆದ 8 ತಿಂಗಳಿನಿಂದ ಸಾಕಷ್ಟು ದಣಿದಿದ್ದೇನೆ. ಆದರೆ ಈ ಪುಟ್ಟ ಸದಸ್ಯರನ್ನು ಭೇಟಿಯಾಗಲು ನಾವು ಹೆಚ್ಚು ಕಾಯಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ. 

ಅಲ್ಲದೆ, "ವಿಲ್ಫ್ ಮತ್ತೆ ದೊಡ್ಡ ಸಹೋದರನಾಗುವ ಬಗ್ಗೆ ಉತ್ಸುಕನಾಗಿದ್ದಾನೆ ಮತ್ತು ಅದರ ಬಗ್ಗೆ ನಾನ್‌ಸ್ಟಾಪ್‌ ಆಗಿ ಮಾತನಾಡುತ್ತಲೇ ಇದ್ದಾನೆ. ಆದರೆ, ರೋಮಿಗೆ ಏನು ಬರಲಿದೆ ಎಂಬ ಕ್ಲೂ ಸಹ ಇಲ್ಲ ಎನಿಸುತ್ತದೆ. ಅವಳಿಗೆ ಶೀಘ್ರದಲ್ಲೇ ಗೊತ್ತಾಗುತ್ತದೆ’’ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಯುಕೆಯಲ್ಲಿ ಅಚ್ಚರಿ: ಇಬ್ಬರಲ್ಲ, ಮೂರು ಜನರ ಡಿಎನ್‌ಎ ಹೊಂದಿದ ಮಗು ಜನನ

ಬೋರಿಸ್‌ ಜಾನ್ಸನ್ ತನ್ನ ಹಿಂದಿನ ಮದುವೆಯಿಂದ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಮರೀನಾ ವ್ಹೀಲರ್‌ ಅವರನ್ನು ಈ ಹಿಂದೆ ಬ್ರಿಟನ್‌ ಮಾಜಿ ಪ್ರಧಾನಿ ವಿವಾಹವಾಗಿದ್ದರು. ಅಷ್ಟೇ ಅಲ್ಲದೆ, ಕಲಾ ಸಲಹೆಗಾರರಾದ ಹೆಲೆನ್ ಮ್ಯಾಕಿನ್ಟೈರ್ ಅವರೊಂದಿಗೆ ಮತ್ತೊಂದು ಮಗುವನ್ನು ಹೊಂದಿದ್ದಾರೆ. ಬೋರಿಸ್‌ ಜಾನ್ಸನ್ ಮೂರು ಬಾರಿ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. 

ಸುಮಾರು 200 ವರ್ಷಗಳ ನಂತರ ಬೋರಿಸ್‌ ಜಾನ್ಸನ್ ಅವರು ಅಧಿಕಾರದಲ್ಲಿದ್ದಾಗ ವಿವಾಹವಾದ ಮೊದಲ ಪ್ರಧಾನ ಮಂತ್ರಿ ಎನಿಸಿಕೊಂಡಿದ್ದರು ಎಂದು ಬಿಬಿಸಿ ವರದಿ ಮಾಡಿತ್ತು. ಅಲ್ಲದೆ, 2021 ರಲ್ಲಿ ಸಂದರ್ಶನವೊಂದರಲ್ಲಿ, ಡೌನಿಂಗ್ ಸ್ಟ್ರೀಟ್ ಸಂಖ್ಯೆ 10 ರಲ್ಲಿ ಮಗುವಿನೊಂದಿಗೆ ವಾಸಿಸುವುದು "ಅದ್ಭುತ" ಎಂದು ಬೋರಿಸ್‌ ಜಾನ್ಸನ್ ಹೇಳಿದ್ದರು. ಆದರೆ ಇದು "ಬಹಳಷ್ಟು ಕೆಲಸ" ಎಂದೂ ಹೇಳಿಕೊಂಡಿದ್ದರು. 

ಇದನ್ನೂ ಓದಿ: ವೃದ್ಧನ ಮೃತದೇಹ 2 ವರ್ಷ ಫ್ರೀಜರ್‌ನಲ್ಲಿಟ್ಟ: ಪಿಂಚಣಿ ಹಣವನ್ನು ಶಾಪಿಂಗ್‌ಗೆ ಬಳಸ್ತಿದ್ದ ಪಾಪಿ!

ಅವರು ಆಡಳಿತ ನಡೆಸಲು ಯೋಗ್ಯರಲ್ಲ ಎಂದು ಮಂತ್ರಿಗಳ ಸಾಮೂಹಿಕ ದಂಗೆಯ ನಂತರ ಬೋರಿಸ್ ಜಾನ್ಸನ್ ಅವರು 2022 ರಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ನಂತರ ಲಿಜ್ ಟ್ರಸ್ ಅವರು ಸೆಪ್ಟೆಂಬರ್ 6 ರಿಂದ ಅಕ್ಟೋಬರ್ 25 ರವರೆಗೆ ಅಂದರೆ ಕಡಿಮೆ ಅವಧಿಗೆ ಸೇವೆ ಸಲ್ಲಿಸಿದ ನಂತರ ಅವರೂ ರಾಜೀನಾಮೆ ನೀಡಿದರು. ಅವರ ನಂತರ, ಪ್ರಸ್ತುತ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಅಕ್ಟೋಬರ್ 2022 ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. 

ಇದನ್ನೂ ಓದಿ: ಕ್ಯಾಡ್ಬರಿ ಚಾಕೊಲೇಟ್‌ ಪ್ರಿಯರೇ ಎಚ್ಚರ: ಸಾವಿರಾರು ಉತ್ಪನ್ನ ಹಿಂಪಡೆದ ಕಂಪನಿ, ಖರೀದಿಸಿದ್ದನ್ನು ತಿನ್ನದಂತೆ ಎಚ್ಚರಿಕೆ!

click me!