
ಮೆಲ್ಬೋರ್ನ್(ಮೇ.20): ಬರೋಬ್ಬರಿ 24 ವರ್ಷದ ಬಳಿಕ ಕ್ಯಾಥೋಲಿಕ್ ಕಾಲೇಜಿನಲ್ಲಿ ಕಲಿತ ಹಲವು ಹಳೇ ವಿದ್ಯಾರ್ಥಿಗಳಿಗೆ ಆಘಾತ ಎದುರಾಗಿದೆ. ಬೆಳ್ಳಂಬೆಳಗ್ಗೆ ಬಂದಿರುವ ಪಾರ್ಸೆಲ್ ತೆರೆದು ನೋಡಿದರೆ, ಬಳಸಿರುವ ಕಾಂಡೋಮ್ ಜೊತೆಗೊಂದು ಬೆದರಿಕೆ ಪತ್ರ. ಆರಂಭಿಕ ಹಂತದಲ್ಲಿ ಒಂದಿಬ್ಬರು ಮಹಿಳೆಯರು ಈ ಕುರಿತು ದೂರು ನೀಡಿದ್ದಾರೆ. ಇದೀಗ ಒಟ್ಟು 65 ಮಹಿಳೆಯರು ಠಾಣೆ ಮೆಟ್ಟಿಲೇರಿದ ಘಟನೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದಿದೆ. 1999ರಲ್ಲಿ ಕಿಲ್‌ಬ್ರೆಡಾ ಕಾಲೇಜ್ ಮೆಂಟೊನ್‌ನಿಂದ ವಿದ್ಯಭ್ಯಾಸ ಮುಗಿಸಿ ಹೊರಬಂದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಬಳಸಿದ ಕಾಂಡೋಮ್ ಕಳುಹಿಸಲಾಗಿದೆ. ಇದೀಗ ಸತತ ದೂರಿನ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
1999ರಲ್ಲಿ ವಿದ್ಯಾಭ್ಯಾಸ ಮುಗಿಸಿ ಹೊರಬಂದ ಕ್ಯಾಥೋಲಿಕ್ ಕಾಲೇಜಿನ ವಿದ್ಯಾರ್ಥಿನಿಯರು ಇದೀಗ ಮೆಲ್ಬೋರ್ನ್‌ನ ವಿವಿಧ ಭಾಗದಲ್ಲಿ ನೆಲೆಸಿದ್ದಾರೆ. ಇವರ ವಿಳಾಸಕ್ಕೆ ಪಾರ್ಸೆಲ್ ಕಳುಹಿಸಲಾಗಿದೆ. ಈ ರೀತಿ ಬಳಸಿದ ಕಾಂಡೋಮ್ ಹಾಗೂ ಬೆದರಿಕೆ ಪತ್ರ ಕಳುಹಿಸಲು ಕಾರಣವೇನು? 1999ರ ಬ್ಯಾಚ್‌ನ ಯಾರಾದರೂ ಮಾಡಿರಬುಹುದೇ ಅನ್ನೋ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಈಗಾಗಲೇ ಕಾಲೇಜು ಹಾಗೂ ಶಾಲೆಗೆ ತೆರಳಿ ಒಂದು ಸುತ್ತಿನ ತನಿಖೆ ನಡೆಸಲಾಗಿದೆ.
ಪ್ರಿನ್ಸಿಪಾಲ್ ಕೋಣೆಯಲ್ಲಿ ಕಾಂಡೋಮ್, ಮದ್ಯದ ಬಾಟಲಿ ಪತ್ತೆ, ಬೆಚ್ಚಿ ಬಿದ್ದ ಮಕ್ಕಳ ಹಕ್ಕುಗಳ ಆಯೋಗ!
ಈ ಘಟನೆ ಕುರಿತು ಈಗಾಗಲೇ ಹಲವರನ್ನು ವಿಚಾರಣೆ ಒಳಪಡಿಸಲಾಗಿದೆ. ಆದರೂ ಬಳಸಿದ ಕಾಂಡೋಮ್ ಹಾಗೂ ಬೆದರಿಕೆ ಪತ್ರದ ಹಿಂದಿನ ಉದ್ದೇಶ, ಆರೋಪಿ ಕುರಿತು ಯಾವುದೇ ಸುಳಿಸುವ ಸಿಕ್ಕಿಲ್ಲ. ಇತ್ತ ಮಹಿಳೆಯರು ಆತಂತಕ್ಕೆ ಒಳಗಾಗಿದ್ದಾರೆ. ಈ ರೀತಿಯ ಪಾರ್ಸೆಲ್, ಬೆದರಿಕೆ ಪತ್ರ ಬರುತ್ತೆ ಅನ್ನೋ ಸಣ್ಣ ಸುಳಿವು ಅವರಿಗೆ ಇರಲಿಲ್ಲ. ಹಲವರ ಮನೆಯಲ್ಲಿ ಕುಟುಂಬದ ಇತರ ಸದಸ್ಯರು ಈ ಪಾರ್ಸೆಲ್ ತೆರೆದು ನೋಡಿದ್ದಾರೆ.
ಪಾರ್ಸೆಲ್ ಹಾಗೂ ಬೆದರಿಕೆ ಪತ್ರ ಸ್ವೀಕರಿಸಿರುವ ಮಹಿಳೆಯೊಬ್ಬರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಈ ರೀತಿ ಪಾರ್ಸೆಲ್ ಹಾಗೂ ಬೆದರಿಕೆ ಪತ್ರ ನೋಡಿ ಗಾಬರಿಯಾಗಿತ್ತು. ಕುಟುಂಬದ ಸಲಹೆಯಂತೆ ಪೊಲೀಸರಿಗೆ ದೂರು ನೀಡಿದ್ದೇನೆ. ಇದೇ ವೇಳೆ ಪೊಲೀಸರು ಹಲವು ಘಟನೆ ನಡೆದಿರುವ ಮಾಹಿತಿ ಬಹಿರಂಗ ಪಡಿಸಿದ್ದಾರೆ. ನಮ್ಮ ಮೇಲೆ ದ್ವೇಷ ಸಾಧಿಸಲು ಈ ರೀತಿ ಮಾಡಿರುವ ಸಾಧ್ಯತೆ ಇದೆ. ಈ ರೀತಿಯ ಹಗೆತನ ಸಾಧಿಸಲು ಕಾಲೇಜು ಹಾಗೂ ಶಾಲಾ ದಿನಗಳಲ್ಲಿ ಯಾವುದೇ ಘಟನೆಗಳು ನಡೆದಿಲ್ಲ. ಆದರೂ ಯಾಕೆ ಕಳುಹಿಸಿದ್ದಾರೆ ಅನ್ನೋದು ಅರ್ಥವಾಗಿಲ್ಲ ಎಂದಿದ್ದಾರೆ.
ಫ್ರಾನ್ಸ್‌ನಲ್ಲಿ 18ರಿಂದ 25 ವರ್ಷದ ಮಕ್ಕಳಿಗೆ ಕಾಂಡೋಮ್ ಫ್ರೀ
ಪೊಲೀಸರು ಇದೀಗ ಬೆದರಿಕೆ ಪತ್ರ, ಬಳಸಿದ ಕಾಂಡೋಮ್ ಸೇರಿದಂತೆ ಇತರ ಮಾಹಿತಿಗಳನ್ನು ಕಲೆಹಾಕಿ ತನಿಖೆ ನಡೆಸುತ್ತಿದ್ದಾರೆ. 65ಕ್ಕೂ ಹೆಚ್ಚು ಮಹಿಳೆಯರಿಗೆ ಒಬ್ಬನೇ ಆರೋಪಿ ಕಳುಹಿಸಿರುವ ಸಾಧ್ಯತೆ ಇದೆ. ಇದೀಗ ಶಾಲೆ ಹಾಗೂ ಕಾಲೇಜು ಆಡಳಿತ ಮಂಡಳಿಯ ನೆರವು ಪಡೆಯಲಾಗಿದೆ. ಇತ್ತ ದೂರುದಾರರು 24 ವರ್ಷದ ಹಳೇ ಘಟನೆಗಳನ್ನು ಪೊಲೀಸರ ಮುಂದೆ ಹೇಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ