NASA News: ಮೂರನೇ ಬಾರಿ ಬಾಹ್ಯಾಕಾಶಕ್ಕೆ ಸುನಿತಾ ವಿಲಿಯಮ್ಸ್ ಪ್ರಯಾಣ

By Kannadaprabha News  |  First Published Jun 2, 2024, 12:10 PM IST

ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಬಾಹ್ಯಾಕಾಶ ಪ್ರಯಾಣಕ್ಕೆ ಕೈಗೊಂಡಿದ್ದಾರೆ.  ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಬೋಯಿಂಗ್‌ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಶನಿವಾರ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10 ಗಂಟೆಗೆ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಪ್ರಯಾಣ ಬೆಳೆಸಿದ್ದಾರೆ.


ನವದೆಹಲಿ (ಜೂ.2): ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಬಾಹ್ಯಾಕಾಶ ಪ್ರಯಾಣಕ್ಕೆ ಕೈಗೊಂಡಿದ್ದಾರೆ. 

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಬೋಯಿಂಗ್‌ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಶನಿವಾರ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10 ಗಂಟೆಗೆ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಪ್ರಯಾಣ ಬೆಳೆಸಿದ್ದಾರೆ.

Tap to resize

Latest Videos

ಕಳೆದ ತಿಂಗಳ 7 ರಂದೇ ಸುನೀತಾ ಅಂತರಿಕ್ಷ ಪ್ರಯಾಣ ಕೈಗೊಳ್ಳಬೇಕಿತ್ತು. ಆದರೆ ತಾಂತ್ರಿಕ ದೋಷದ ಕಾರಣದಿಂದ ಮುಂದೂಡಲಾಗಿತ್ತು. ವಿಲಿಯಮ್ಸ್ ಹೊರತಾಗಿ ಬುಚ್‌ ವಿಲ್ಮೋರ್‌ ಕೂಡ ಅಂತರಿಕ್ಷಕ್ಕೆ ಪ್ರಯಾಣ ಕೈಗೊಳ್ಳಲಿದ್ದಾರೆ. ಸುನಿತಾ ಮತ್ತು ವಿಲ್ಮೋರ್ ಒಂದು ವಾರ ಬಾಹ್ಯಾಕಾಶದಲ್ಲಿಯೇ ಉಳಿಯಲಿದ್ದಾರೆ.

ಇಂದು ಮತ್ತೊಮ್ಮೆ ಸುನೀತಾ ವಿಲಿಯಮ್ಸ್ ಗಗನಯಾತ್ರೆ: ಜೊತೆಗಿರಲಿದೆ ಗಣೇಶನ ವಿಗ್ರಹ, ಭಗವದ್ಗೀತೆ !

ಸುನೀತಾ ವಿಲಿಯಮ್ಸ್, ಮಹಿಳೆಯೊಬ್ಬರು ಅತಿ ಹೆಚ್ಚು ಬಾಹ್ಯಾಕಾಶ ನಡಿಗೆ ಮಾಡಿದ  ದಾಖಲೆಯನ್ನು ಹೊಂದಿದ್ದಾರೆ. ಅವರು ಯುನೈಟೆಡ್ ಸ್ಟೇಟ್ಸ್ ನೌಕಾಪಡೆಯ ಅಧಿಕಾರಿಯೂ ಆಗಿದ್ದಾರೆ ಮತ್ತು ಬಾಹ್ಯಾಕಾಶ ಯಾತ್ರೆ 14 ಮತ್ತು  15 ರ ಭಾಗವಾಗಿದ್ದರು. ಸುನೀತಾ ವಿಲಿಯಮ್ಸ್ ಸಾಧನೆಗಾಗಿ ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದಿದ್ದಾರೆ.

click me!