IIT UAE: ವಿದೇಶದಲ್ಲಿ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ ಸ್ಥಾಪನೆಗೆ ಐತಿಹಾಸಿಕ ಒಪ್ಪಂದ!

By Suvarna NewsFirst Published Feb 19, 2022, 10:13 AM IST
Highlights

ಭಾರತ-ಯುಎಇ ವ್ಯಾಪಾರ ಒಪ್ಪಂದದ ಭಾಗವಾಗಿ, ಯುಎಇಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ.

ನವದೆಹಲಿ (ಫೆ. 19): ಭಾರತ-ಯುಎಇ (UAE) ವ್ಯಾಪಾರ ಒಪ್ಪಂದದ ಭಾಗವಾಗಿ, ಯುಎಇಯಲ್ಲಿ ಪ್ರತಿಷ್ಟಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (Indian Institute of Technology) ಸ್ಥಾಪಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ. ವಿದೇಶದಲ್ಲಿ ಐಐಟಿ ಸ್ಥಾಪನೆಯಾಗುತ್ತಿರುವುದು ಇದೇ ಮೊದಲು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿಗಳು) ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಕ್ಟ್, 1961 ರಿಂದ ನಿಯಂತ್ರಿಸಲ್ಪಡುತ್ತವೆ ಹಾಗೂ  ಪ್ರಸ್ತುತ ಭಾರತದಲ್ಲಿ ಒಟ್ಟು 23 ಐಐಟಿಗಳು ಬಿಟೆಕ್ ಪದವಿಯನ್ನು ನೀಡುತ್ತವೆ.  ದೇಶದ ಅಗ್ರ ಐಐಟಿಗಳಲ್ಲಿ ಐಐಟಿ ದೆಹಲಿ, ಬಾಂಬೆ, ಖರಗ್‌ಪುರ, ಮದ್ರಾಸ್ ಮತ್ತು ಇತರ ಹಲವು ಸೇರಿವೆ.

ಭಾರತ ಮತ್ತು ಯುಎಇ ಐತಿಹಾಸಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (CEPA) ಸಹಿ ಹಾಕಿದ್ದು, ಮುಂದಿನ ಐದು ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ಸರಕು ವ್ಯಾಪಾರವನ್ನು US $ 100 ಶತಕೋಟಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ೯Sheikh Mohamed bin Zayed Al Nahyan) ನಡುವಿನ ವರ್ಚುವಲ್ ಶೃಂಗಸಭೆಯ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಇದನ್ನೂ ಓದಿIIT Bombay NCoE CCU: ಐಐಟಿ ಬಾಂಬೆಯಿಂದ ಹೊಸ ಕೇಂದ್ರ ಸ್ಥಾಪನೆ, ಕೇಂದ್ರದಿಂದ ಧನಸಹಾಯ

ಭಾರತ-ಯುಎಇ ಜಂಟಿ ಯೋಜನೆ: ಉಭಯ ದೇಶಗಳ ನಡುವಿನ ಪಾಲುದಾರಿಕೆಯು ಹಲವಾರು ಒಪ್ಪಂದಗಳು ಮತ್ತು ಹಲವಾರು ಕ್ಷೇತ್ರಗಳಲ್ಲಿ ತಿಳುವಳಿಕೆ ಒಪ್ಪಂದದ ಜಂಟಿ ಯೋಜನೆಗೆ ನಾಂದಿ ಹಾಡಲಿದೆ.  ಆರ್ಥಿಕತೆ, ಹವಾಮಾನ ಬದಲಾವಣೆ ಮತ್ತು ಹೌಬಾರಾ ಸಂರಕ್ಷಣೆ, ಕೈಗಾರಿಕೆಗಳು ಮತ್ತು ಸುಧಾರಿತ ತಂತ್ರಜ್ಞಾನಗಳು, ಕಡಿಮೆ ಕಾರ್ಬನ್ ಹೈಡ್ರೋಜನ್ ಅಭಿವೃದ್ಧಿಗಳು ಮತ್ತು ಹೂಡಿಕೆಗಳು, ಆಹಾರ ಭದ್ರತೆ, ಹಣಕಾಸು ಸೇವೆಗಳು ಮತ್ತು ಶಿಕ್ಷಣ ಸಹಕಾರ ಸೇರಿದಂತೆ ಹಲವು ಜಂಟಿ ಯೋಜನೆಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 

ಈ ಒಪ್ಪಂದವು ಕೌಶಲ್ಯ ಅಭಿವೃದ್ಧಿಯಲ್ಲಿ ಸಹಕಾರವನ್ನು ಹೆಚ್ಚಿಸುವುದನ್ನು ಎತ್ತಿ ತೋರಿಸುತ್ತದೆ, ಇದರಿಂದಾಗಿ ಮಾರುಕಟ್ಟೆಯ ಅಗತ್ಯತೆಗಳಿಗೆ ಹೊಂದಿಕೆಯಾಗುತ್ತದೆ ಮತ್ತು ಕೆಲಸದ ಭವಿಷ್ಯದ ಬದಲಾವಣೆಯ ಅಗತ್ಯಗಳನ್ನು ಪರಿಹರಿಸುತ್ತದೆ. ಭಾರತ-ಯುಎಇ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯು ದ್ವಿಪಕ್ಷೀಯ ಸಂಬಂಧಗಳ ಭವಿಷ್ಯದ ಹಾದಿಯನ್ನು ಕೇಂದ್ರಿಕರಿಸುತ್ತದೆ. 

ಇದನ್ನೂ ಓದಿ: IIT Kanpur New Departments: ಹೊಸದಾಗಿ ಬಾಹ್ಯಾಕಾಶ ಮತ್ತು ಖಗೋಳ ವಿಜ್ಞಾನ ವಿಭಾಗ ಸ್ಥಾಪಿಸಿದ ಐಐಟಿ ಕಾನ್ಪುರ

ಎರಡೂ ದೇಶಗಳ ಚಿಂತನಾ ನಾಯಕರ ನಡುವೆ ಸಾಂಸ್ಕೃತಿಕ ವಿನಿಮಯ, ಸಾಂಸ್ಕೃತಿಕ ಯೋಜನೆಗಳು, ಪ್ರದರ್ಶನಗಳು ಮತ್ತು ಸಂವಾದವನ್ನು ಸುಗಮಗೊಳಿಸಲು ಮತ್ತು ಉತ್ತೇಜಿಸಲು ಭಾರತ-ಯುಎಇ ಸಾಂಸ್ಕೃತಿಕ ಮಂಡಳಿಯನ್ನು ಸ್ಥಾಪಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.

ಸ್ಟಾರ್ಟ್-ಅಪ್‌ಗಳಿಗೆ ಉತ್ತೇಜನ: ಉಭಯ ರಾಷ್ಟ್ರಗಳು ಪರಸ್ಪರರ ಶುದ್ಧ ಶಕ್ತಿಯ (Clean Energy) ಕಾರ್ಯಾಚರಣೆಗಳನ್ನು ಬೆಂಬಲಿಸಲು ಮತ್ತು ಹಸಿರು ಹೈಡ್ರೋಜನ್ ಉತ್ಪಾದನೆಯ ಮೇಲೆ ವಿಶೇಷ ಗಮನವನ್ನು ನೀಡುವ ಮೂಲಕ ತಂತ್ರಜ್ಞಾನದ ಬೆಳವಣಿಗೆ ಸಹಾಯ ಮಾಡಲು ಜಂಟಿ ಹೈಡ್ರೋಜನ್ ಕಾರ್ಯಪಡೆಯನ್ನು ಸ್ಥಾಪಿಸಲು ಸಹ ಒಪ್ಪಿಕೊಂಡಿವೆ. ಇದು ನಿರ್ಣಾಯಕ ತಂತ್ರಜ್ಞಾನಗಳ ಮೇಲೆ ಸಹ ಸಹಕರಿಸುತ್ತದೆ ಮತ್ತು ಇ-ವ್ಯವಹಾರಗಳು ಮತ್ತು ಇ-ಪಾವತಿ ಪರಿಹಾರಗಳನ್ನು ಪರಸ್ಪರ ಉತ್ತೇಜಿಸುತ್ತದೆ ಮತ್ತು ಎರಡೂ ದೇಶಗಳಿಂದ ಸ್ಟಾರ್ಟ್-ಅಪ್‌ಗಳನ್ನು ಉತ್ತೇಜಿಸುತ್ತದೆ.

 

My remarks at the India-UAE virtual summit. https://t.co/uk6UlyElL4

— Narendra Modi (@narendramodi)

 

"ಎರಡೂ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ಐತಿಹಾಸಿಕ ಸಂಬಂಧಗಳನ್ನು ದೃಢೀಕರಿಸಿ ಮತ್ತು ನಾವೀನ್ಯತೆ ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ವಿಶ್ವದರ್ಜೆಯ ಸಂಸ್ಥೆಗಳನ್ನು ಸ್ಥಾಪಿಸುವ ಅಗತ್ಯವನ್ನು ಅರಿತುಕೊಂಡ ನಾಯಕರು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸಲು ಒಪ್ಪಿಕೊಂಡರು." ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ. 

click me!