ತಮ್ಮ ಮನೆಗೆ ತಾವೇ ಬೆಂಕಿ ಹಚ್ಚಿದರು: ಹಳ್ಳಿ ಬಿಡುವಾಗ ಆಕ್ರೋಶದ ನಡೆ!

Published : Nov 16, 2020, 08:26 AM IST
ತಮ್ಮ ಮನೆಗೆ ತಾವೇ ಬೆಂಕಿ ಹಚ್ಚಿದರು:  ಹಳ್ಳಿ ಬಿಡುವಾಗ ಆಕ್ರೋಶದ ನಡೆ!

ಸಾರಾಂಶ

ತಮ್ಮ ಮನೆಗೆ ತಾವೇ ಬೆಂಕಿ ಹಚ್ಚಿದ ಅರ್ಮೇನಿಯನ್ನರು!| ಅಜರ್‌ಬೈಜನ್‌ ದೇಶಕ್ಕೆ ಜಾಗ ಬಿಟ್ಟುಕೊಡುವ ಮುನ್ನ ಮನೆಗೆ ಬೆಂಕಿ

ಮಾಸ್ಕೋ(ನ.6): ಹಿಂದಿನ ಸೋವಿಯತ್‌ ಒಕ್ಕೂಟದ ದೇಶಗಳಲ್ಲಿ ಒಂದಾದ ಅರ್ಮೇನಿಯಾದ ಗಡಿ ಭಾಗದಲ್ಲಿರುವ ಕೆಲ ಹಳ್ಳಿಗಳ ಜನರು ತಮ್ಮ ಮನೆಗಳಿಗೆ ತಾವೇ ಬೆಂಕಿ ಹಚ್ಚಿರುವ ವಿಚಿತ್ರ ವಿದ್ಯಮಾನ ನಡೆದಿದೆ. ಇತ್ತೀಚೆಗೆ ಏರ್ಪಟ್ಟಒಪ್ಪಂದದಲ್ಲಿ ಈ ಹಳ್ಳಿಗಳನ್ನು ಅಜರ್‌ಬೈಜನ್‌ ದೇಶಕ್ಕೆ ಬಿಟ್ಟುಕೊಡಬೇಕು ಎಂದು ನಿರ್ಧಾರವಾದ ಹಿನ್ನೆಲೆಯಲ್ಲಿ ತಮ್ಮ ಮನೆಗಳನ್ನು ಪುಕ್ಕಟೆಯಾಗಿ ಇನ್ನೊಂದು ದೇಶಕ್ಕೆ ಏಕೆ ಬಿಟ್ಟುಕೊಡಬೇಕೆಂದು ಮಾಲಿಕರು ದೇಶ ಬಿಡುವ ಮುನ್ನ ಮನೆಗಳಿಗೆ ಬೆಂಕಿ ಹಚ್ಚಿ ಹೋಗಿದ್ದಾರೆ.

1990ರ ದಶಕದಲ್ಲಿ ಸೋವಿಯತ್‌ ಒಕ್ಕೂಟ ಛಿದ್ರವಾದ ನಂತರ ಅದರಲ್ಲಿನ ಎರಡು ದೇಶಗಳಾದ ಅರ್ಮೇನಿಯಾ ಮತ್ತು ಅಜರ್‌ಬೈಜನ್‌ ನಡುವೆ ನಿರಂತರವಾಗಿ ಗಡಿ ಸಮರ ನಡೆಯುತ್ತಿತ್ತು. ಕಳೆದ ಆರು ವಾರಗಳಿಂದ ಅದು ತೀವ್ರಗೊಂಡು, ಕೊನೆಗೆ ರಷ್ಯಾ, ಫ್ರಾನ್ಸ್‌, ಅಮೆರಿಕ ಮುಂತಾದ ದೇಶಗಳ ಮಧ್ಯಸ್ಥಿಕೆಯಲ್ಲಿ ಅರ್ಮೇನಿಯಾದ ಕೆಲ ಹಳ್ಳಿಗಳನ್ನು ಅಜರ್‌ಬೈಜನ್‌ಗೆ ಬಿಟ್ಟುಕೊಡಬೇಕೆಂದು ನಿರ್ಧಾರವಾಗಿದೆ. ಆ ಹಳ್ಳಿಗಳ ಜನರು ತಮ್ಮ ಮನೆ ತೊರೆದು ಅರ್ಮೇನಿಯಾದ ಕಡೆಗೆ ತೆರಳಲು ಮೊನ್ನೆಯ ಶನಿವಾರದ ಗಡುವು ನೀಡಲಾಗಿತ್ತು. ಹೀಗಾಗಿ ಮನೆ ತೊರೆದು ಹೋಗುವ ಮುನ್ನ ನೂರಾರು ಗ್ರಾಮಸ್ಥರು ಅಜರ್‌ಬೈಜನ್ನರ ಮೇಲಿನ ದ್ವೇಷದಿಂದ ತಮ್ಮ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಮೂಲತಃ ಈ ಹಳ್ಳಿಗಳು ಅಜರ್‌ಬೈಜನ್‌ನವೇ ಆಗಿದ್ದು, ದಶಕಗಳಿಂದ ಅರ್ಮೇನಿಯಾದ ಪ್ರತ್ಯೇಕತಾವಾದಿಗಳು ಇವುಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿರಿಸಿಕೊಂಡಿದ್ದವು ಎಂದು ಹೇಳಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?