
ನಾಯಿಗಳು ಕಂಬಗಳನ್ನು ಕಂಡಾಗ, ಗೋಡೆಗಳನ್ನು ಕಂಡಾಗ ಇಲ್ಲವೇ ವಾಹನಗಳನ್ನು ಕಂಡಾಗ ಕಾಲು ಎತ್ತುವುದು ಮಾಮೂಲು. ಅದು ಅದರ ಹುಟ್ಟುಗುಣ. ಆದರೆ ಕೆಲವೊಂದು ಪುರುಷರಿಗೂ ಇಂಥದ್ದೊಂದು ಕೆಟ್ಟ ಚಾಳಿ ಇರುತ್ತದೆ. ಎಲ್ಲೆಂದರಲ್ಲಿ ಗೋಡೆ ಕಂಡ ತಕ್ಷಣ ಕಾಲು ಅಗಲಿಸಿ ನಿಂತೇ ಬಿಡುವುದು! ಮೂತ್ರ ಬಂದಾಗ ಅದನ್ನು ತಡೆದಿಟ್ಟುಕೊಳ್ಳುವುದು ಕಷ್ಟ ಎನ್ನುವುದು ನಿಜವಾದರೂ, ಕಂಡ ಕಂಡಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಬ್ಬುನಾತ ಬರಿಸಿ ಹೋಗುವ ಚಾಳಿ ಕೆಲವರಿಗೆ ಇದೆ. ಸಂದಿಗೊಂದಿ ಕಂಡ ತಕ್ಷಣ ಅದೇನು ಹುಮ್ಮಸ್ಸು ಬರುತ್ತದೆಯೋ ಗೊತ್ತಿಲ್ಲ, ಹೋಗಿ ನಿಂತು ಬಿಡುತ್ತಾರೆ!
ಆದರೆ, ಇನ್ಮುಂದೆ ಹೀಗೆ ಹೋಗಿ ನಿಂತರೆ, ನೀವು ಮಾಡಿದ ಮೂತ್ರ ನಿಮಗೇ ವಾಪಸ್ ಬಂದೀತು ಹುಷಾರ್! ನಿಜ. ಇಂಥದ್ದೊಂದು ಪೇಂಟಿಂಗ್ ಈಗ ಗೋಡೆಗಳಿಗೆ ಹಚ್ಚಲಾಗುತ್ತಿದೆ. ಇದನ್ನು ಆ್ಯಂಟಿ ಯೂರಿನ್ ಪೇಂಟ್ (Anti Urine Paint) ಎಂದು ಕರೆಯಲಾಗುತ್ತದೆ. ಯಾರೇ ಹೋಗಿ ಈ ಪೇಂಟ್ ಇರುವ ಗೋಡೆಗೆ ಮೂತ್ರ ಮಾಡಿದರೆ ಸಾಕು, ಅದು ವಾಪಸ್ ತಿರುಗಿ ಅವರ ಮೈಮೇಲೇ ಚೆಲ್ಲುವ ಟೆಕ್ನಾಲಾಜಿಯನ್ನು ಹೊಂದಿದೆ.
ಹಾಗೆಂದು ಸದ್ಯ ಇದು ಭಾರತಕ್ಕೆ ಬಂದಿಲ್ಲ ಎನ್ನುವುದು ಹೀಗೆ ಕಾಲು ಅಗಲಿಸುವವರಿಗೆ ಸ್ವಲ್ಪ ಸಮಾಧಾನದ ಸಂಗತಿ. ಸದ್ಯ ಇದು ಸಿಂಗಪುರ, ಇಂಗ್ಲೆಂಡ್ ಸೇರಿದಂತೆ ಕೆಲವೊಂದು ದೇಶಗಳಲ್ಲಿ ಅಳವಡಿಕೆ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಹಲವು ವರ್ಷಗಳಿಂದ ಈ ಪೇಂಟಿಂಗ್ ಗೋಡೆಗಳಿಗೆ ಹಚ್ಚಲಾಗಿದೆ. ದೇಶ ಯಾವುದಾದರೇನು, ಎಲ್ಲರೂ ಮನುಷ್ಯರೇ ಅಲ್ವಾ? ಅದಕ್ಕಾಗಿಯೇ ದೇಶ-ವಿದೇಶ ಎನ್ನುವ ವ್ಯತ್ಯಾಸ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ಮಾಡುವವರಿಗೆ ಪಾಠ ಕಲಿಸುವ ಉದ್ದೇಶದಿಂದ ಇದನ್ನು ಅಲ್ಲಿ ಅಳವಡಿಸಿಕೊಳ್ಳಲಾಗಿದೆ.
ಇದೇನು ಭಾರತಕ್ಕೆ ಬರಲು ಹೆಚ್ಚೇನು ವರ್ಷ ಬೇಕಾಗಿಲ್ಲ. ಭಾರತಕ್ಕೆ ಬಂದರೆ, ಸರ್ಕಾರದ ಬೊಕ್ಕಸದಲ್ಲಿ ದುಡ್ಡು ಇದ್ದರೆ ಕರ್ನಾಟಕದಲ್ಲಿಯೂ ಇದು ಜಾರಿಗೆ ಬರಬಹುದು. ಹಾಗೆಂದು ನಿರಾಳರಾಗಬೇಡಿ. ಕೆಲವು ಕಡೆಗಳಲ್ಲಿ ಪರೀಕ್ಷಾರ್ಥವಾಗಿ ಸುಮ್ಮನೇ ಪ್ರಯೋಗಕ್ಕೆ ಪೇಂಟಿಂಗ್ ಮಾಡಲೂ ಬಹುದು. ಆದ್ದರಿಂದ ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಗೋಡೆ ಕಂಡಾಗ ಸ್ವಲ್ಪ ಹುಷಾರಾಗಿ ಇರಿ ಅಷ್ಟೇ.
ಅಂದಹಾಗೆ ಈ ಟೆಕ್ನಾಲಾಜಿಯನ್ನು 2015ರಲ್ಲಿಯೇ ಕಂಡು ಹಿಡಿಯಲಾಗಿದೆಯಂತೆ. ಆದರೆ ಇದು ಅಷ್ಟು ಪರಿಣಾಮಕಾರಿಯಾಗಿ ಸಕ್ಸಸ್ ಕಂಡಿರಲಿಲ್ಲ. ಆದರೆ ಇದೀಗ ಕೆಲವು ದೇಶಗಳಲ್ಲಿನ ಸಾರ್ವಜನಿಕ ಸ್ಥಳಗಳ ಗೋಡೆಗಳಿಗೆ ಈ ಪೇಂಟ್ ಹಚ್ಚಲಾಗುತ್ತಿದೆ. ಎರಡು ಪದರಗಳಲ್ಲಿ ಪೇಂಟ್ ಲೇಪನ ಮಾಡಲಾಗುತ್ತದೆ. ಮೊದಲ ಹಂತವು ಬೇಸ್ ಪ್ರೈಮರ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಪ್ರೈಮರ್ ಮೇಲ್ಮೈಯನ್ನು ಸುಗಮಗೊಳಿಸುತ್ತದೆ, ಅದನ್ನು ಹೈಡ್ರೋಫೋಬಿಕ್ ಮಾಡುತ್ತದೆ. ನಂತರ ಟಾಪ್ ಕೋಟ್ ಅನ್ನು ಅನ್ವಯಿಸಲಾಗುತ್ತದೆ. ನೀರು ಅಂಟಿಕೊಳ್ಳುವ ಹೈಡ್ರೋಫಿಲಿಕ್ ಮೇಲ್ಮೈಗಿಂತ ಭಿನ್ನವಾಗಿ ಹೈಡ್ರೋಫೋಬಿಕ್ ಮೇಲ್ಮೈ ದ್ರವವನ್ನು ಅದಕ್ಕೆ ಅಂಟಿಕೊಳ್ಳಲು ಅನುಮತಿಸುವುದಿಲ್ಲ. ಆದ್ದರಿಂದಲೇ ಇದು ವಾಪಸ್ ಬರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ