3,500 ವರ್ಷಗಳಷ್ಟು ಹಳೆಯದಾದ ಸ್ಮಶಾನದಲ್ಲಿ ಪತ್ತೆಯಾದ 'ಸತ್ತವರ ಪುಸ್ತಕ'

Published : Jul 30, 2025, 06:28 PM ISTUpdated : Jul 30, 2025, 06:29 PM IST
book

ಸಾರಾಂಶ

'ಸತ್ತವರ ಪುಸ್ತಕ'ವನ್ನು ಮರಣಾನಂತರದ ಜೀವನಕ್ಕೆ ಮಾರ್ಗದರ್ಶನ ಮಾಡಲು ಸಿದ್ಧಪಡಿಸಲಾಗಿದೆ ಎಂದು ನಂಬಲಾಗಿದೆ.

Book of the Dead papyrus: ಪ್ರಾಚೀನ ಈಜಿಪ್ಟ್‌ನ ನಿಗೂಢ ಜಗತ್ತು ಮತ್ತೊಮ್ಮೆ ಮಾನವ ನಾಗರಿಕತೆಯನ್ನು ಅಚ್ಚರಿಗೊಳಿಸಲು ಮುಂದೆ ಬಂದಿದೆ. ಈ ಬಾರಿ ಮಧ್ಯ ಈಜಿಪ್ಟ್‌ನ ಅಲ್-ಗುರೈಫಾ ಪ್ರದೇಶದಲ್ಲಿ ಉತ್ಖನನದ ಸಮಯದಲ್ಲಿ, 3,500 ವರ್ಷಗಳಷ್ಟು ಹಳೆಯದಾದ ಸ್ಮಶಾನವನ್ನು ಕಂಡುಹಿಡಿಯಲಾಗಿದೆ. ಹೌದು, ಈಜಿಪ್ಟಿನ ಪುರಾತತ್ತ್ವಜ್ಞರು ಇಡೀ ಜಗತ್ತೇ ಅಚ್ಚರಿಪಡುವಂತಹ ಆವಿಷ್ಕಾರ ಮಾಡಿದ್ದಾರೆ. ವಾಸ್ತವವಾಗಿ ಪುರಾತತ್ತ್ವಜ್ಞರು 3,500 ವರ್ಷಗಳಷ್ಟು ಹಳೆಯದಾದ ಸ್ಮಶಾನವನ್ನು ಕಂಡುಹಿಡಿದಿದ್ದಾರೆ.

ಇದರಲ್ಲಿ ಅವರು ಅನೇಕ ಮಮ್ಮಿಗಳು, ಪ್ರತಿಮೆಗಳು ಮತ್ತು ಇತರ ಪ್ರಮುಖ ವಸ್ತುಗಳನ್ನು ಕಂಡುಕೊಂಡಿದ್ದಾರೆ. ಈ ಆವಿಷ್ಕಾರದಲ್ಲಿ 43 ಅಡಿ ಉದ್ದದ 'ಸತ್ತವರ ಪುಸ್ತಕ' (Book of the Dead)ದ ಸುರುಳಿ(ಸ್ಕ್ರಾಲ್‌)ಯೂ ಸಿಕ್ಕಿದೆ. ಈ ಸುರುಳಿಯು ಆ ಯುಗದ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಒಂದು ನೋಟವನ್ನು ನೀಡುತ್ತದೆ. 'ಸತ್ತವರ ಪುಸ್ತಕ'ವನ್ನು ಸತ್ತವರ ಆತ್ಮಕ್ಕೆ ಮರಣಾನಂತರದ ಜೀವನಕ್ಕೆ ಮಾರ್ಗದರ್ಶನ ಮಾಡಲು ಸಿದ್ಧಪಡಿಸಲಾಗಿದೆ ಎಂದು ನಂಬಲಾಗಿದೆ. ಈ ಸುರುಳಿಯು ಇಲ್ಲಿಯವರೆಗೆ ಅಲ್-ಗುರೈಫಾದಲ್ಲಿ ಕಂಡುಬಂದ ಮೊದಲ ಸಂಪೂರ್ಣ ಪ್ಯಾಪಿರಸ್ ಆಗಿದೆ ಮತ್ತು ಅದರ ಸ್ಥಿತಿ ತುಂಬಾ ಉತ್ತಮವಾಗಿದೆ ಎಂದು ಹೇಳಲಾಗುತ್ತದೆ. ವಿಶೇಷವೆಂದರೆ ಈ ಸುರುಳಿಯು ಕ್ರಿ.ಪೂ 1550 ರಿಂದ ಕ್ರಿ.ಪೂ 1070 ರವರೆಗೆ ಅಂದರೆ ಈಜಿಪ್ಟ್‌ನ ಹೊಸ ಸಾಮ್ರಾಜ್ಯಶಾಹಿ ಅವಧಿಯವರೆಗೆ ಇತ್ತು.

ಇಲ್ಲಿದೆ ನೋಡಿ ಪುಸ್ತಕದ ವಿಡಿಯೋ 

ಇದನ್ನು 43 ಅಡಿ ಉದ್ದದ ಪ್ಯಾಪಿರಸ್ ಸ್ಕ್ರಾಲ್‌ನಲ್ಲಿ ಬರೆಯಲಾಗಿದೆ. ಇದು ಅತ್ಯಂತ ಅಪರೂಪದ ಮತ್ತು ಪ್ರಮುಖವಾದ ಆವಿಷ್ಕಾರವಾಗಿದೆ. ಇದು ಪ್ರಾಚೀನ ಈಜಿಪ್ಟಿನ ಗ್ರಂಥಗಳ ಸಂಗ್ರಹವಾಗಿದೆ ಎಂದು ನಂಬಲಾಗಿದೆ. ಈ ಮೊದಲೇ ಹೇಳಿದ ಹಾಗೆ ಆತ್ಮದ ಜೀವನ ಮತ್ತು ಮಾರ್ಗದರ್ಶನಕ್ಕೆ ಸಂಬಂಧಿಸಿದೆ. ಒಂದು ವರದಿಯ ಪ್ರಕಾರ, ಈ ಆವಿಷ್ಕಾರದ ನಂತರ ಪ್ರಾಚೀನ ಈಜಿಪ್ಟಿನವರಿಗೆ ಸಮಾಧಿ ವಿಧಾನ ಏನೆಂದು ಖಂಡಿತವಾಗಿಯೂ ತಿಳಿದಿತ್ತು ಎಂದು ಹೇಳಲಾಗುತ್ತಿದೆ.

ಪುರಾತತ್ತ್ವಜ್ಞರು ಏನೆಲ್ಲಾ ಕಂಡುಹಿಡಿದರು?
3,500 ವರ್ಷಗಳಷ್ಟು ಹಳೆಯದಾದ ಈ ಸ್ಮಶಾನವನ್ನು ಮಧ್ಯ ಈಜಿಪ್ಟ್‌ನಲ್ಲಿ ಕಂಡುಹಿಡಿಯಲಾಗಿದೆ. ಈ ಸ್ಮಶಾನದಲ್ಲಿ ಮಮ್ಮಿಗಳು, ತಾಯತಗಳು, ಪ್ರತಿಮೆಗಳು, ಕ್ಯಾನೋಪಿಕ್ ಜಾಡಿಗಳು (Canopic jars) ಮತ್ತು 43 ಅಡಿ ಉದ್ದದ ಪ್ಯಾಪಿರಸ್ ಸ್ಕ್ರಾಲ್ (Papyrus scroll) ಕಂಡುಬಂದಿವೆ. ಈ ಸ್ಕ್ರಾಲ್ ಅಲ್-ಗುರೈಫಾ (Al-Ghuraifa) ಪ್ರದೇಶದಲ್ಲಿ ಕಂಡುಬಂದ ಮೊದಲ ಸಂಪೂರ್ಣ ಪ್ಯಾಪಿರಸ್ ಆಗಿದೆ. ವಿಶೇಷವೆಂದರೆ ಇದು ಉತ್ತಮ ಸ್ಥಿತಿಯಲ್ಲಿದೆ ಎಂದು ಈಜಿಪ್ಟ್‌ನ ಸುಪ್ರೀಂ ಆಂಟಿಕ್ವಿಟೀಸ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಮುಸ್ತಫಾ ವಜಿರಿ ಮಾಹಿತಿಯನ್ನು ನೀಡಿದ್ದಾರೆ.

ಗಮನ ಸೆಳೆದ ಪುಸ್ತಕದ ಪ್ರತಿ
ಈ ಸ್ಮಶಾನವು ಕ್ರಿ.ಪೂ 1550 ಮತ್ತು ಕ್ರಿ.ಪೂ 1070 ರ ನಡುವಿನ ಅವಧಿಗೆ ಸೇರಿದೆ ಎಂದು ವಜಿರಿ ಹೇಳುತ್ತಾರೆ. ಇದು ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಿಗೆ ಹೆಸರುವಾಸಿಯಾಗಿತ್ತು, ಆದರೆ ಸತ್ತವರ ಪುಸ್ತಕದ ಪ್ರತಿಯ ಆವಿಷ್ಕಾರವು ತಜ್ಞರ ಗಮನ ಸೆಳೆದಿದೆ. ಪುಸ್ತಕವು 43 ರಿಂದ 49 ಅಡಿ ಉದ್ದವಾಗಿದೆ ಎಂದು ನಂಬಲಾಗಿದೆ. ಇಲ್ಲಿಯವರೆಗೆ ಅದರ ವಿಷಯಗಳ ಬಗ್ಗೆ ಜನರಿಗೆ ಬಹಳ ಕಡಿಮೆ ವಿವರಗಳು ಲಭ್ಯವಿದೆ.

ತಜ್ಞರು ಹೇಳಿದ್ದೇನು?
ಜರ್ಮನಿಯ ರೋಮರ್ ಮತ್ತು ಪೆಲಿಜಿಯಸ್ ಮ್ಯೂಸಿಯಂನ ಸಿಇಒ ಲಾರಾ ವೈಸ್ ಲೈವ್ ಸೈನ್ಸ್ ಜೊತೆ ಮಾತನಾಡಿದ್ದಾರೆ. ಇದು ತುಂಬಾ ಉದ್ದವಾಗಿದೆ ಮತ್ತು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದ್ದು, ಖಂಡಿತವಾಗಿಯೂ ಒಂದು ದೊಡ್ಡ ಮತ್ತು ಆಸಕ್ತಿದಾಯಕ ಆವಿಷ್ಕಾರವಾಗಿದೆ ಎಂದು ಹೇಳಿದ್ದಾರೆ. ಚಿಕಾಗೋ ವಿಶ್ವವಿದ್ಯಾಲಯದ ಈಜಿಪ್ಟಾಲಜಿಸ್ಟ್ ಫಾಯ್ ಸ್ಕಾಲ್ಫ್ ಇದನ್ನು ಅತ್ಯಂತ ಅಪರೂಪ ಎಂದು ಬಣ್ಣಿಸಿದ್ದಾರೆ. ಅದರ ಪ್ರತಿಯನ್ನು ಮೂಲತಃ ಸಮಾಧಿ ಮಾಡಿದ ಸಮಾಧಿಯಲ್ಲಿ ಕಂಡುಹಿಡಿಯಬೇಕು ಎಂದು ಅವರು ಹೇಳಿದರು.

ಈ ಐತಿಹಾಸಿಕ ಆವಿಷ್ಕಾರದ ಚಿತ್ರಗಳು ಮತ್ತು ಮಾಹಿತಿಯು ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್ ಆಗುತ್ತಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ