ಬಡ ದೇಶಗಳ ಜನರಿಗೆ 2022ನೇ ಇಸ್ವಿವರೆಗೂ ಲಸಿಕೆ ಸಿಗದು: ಸಮೀಕ್ಷೆ

By Suvarna NewsFirst Published Dec 17, 2020, 12:13 PM IST
Highlights

ಕೊರೋನಾ ವೈರಸ್‌ ನಿಗ್ರಹಿಸುವ ಲಸಿಕೆಗೆ ಶ್ರೀಮಂತ ದೇಶಗಳು| ಬಡ ದೇಶಗಳ ಜನರಿಗೆ 2022ನೇ ಇಸ್ವಿವರೆಗೂ ಲಸಿಕೆ ಸಿಗದು: ಸಮೀಕ್ಷೆ

ವಾಷಿಂಗ್ಟನ್(ಡಿ.17)‌: ಕೊರೋನಾ ವೈರಸ್‌ ನಿಗ್ರಹಿಸುವ ಲಸಿಕೆಗೆ ಶ್ರೀಮಂತ ದೇಶಗಳು ಮುಗಿಬಿದ್ದಿರುವುದರಿಂದ ಬಡ ದೇಶಗಳ ಜನರಿಗೆ 2022ರವರೆಗೂ ಲಸಿಕೆ ಲಭ್ಯವಾಗುವುದಿಲ್ಲ ಎಂಬ ಆತಂಕಕಾರಿ ವಿಷಯವನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಅಮೆರಿಕ ಜಾನ್‌ ಹಾಪ್ಕಿನ್ಸ್‌ ಬ್ಲೂಮ್‌ಬರ್ಗ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ ಈ ಸಮೀಕ್ಷೆ ನಡೆಸಿದ್ದು, ಎಲ್ಲಾ ಲಸಿಕೆ ತಯಾರಿಕಾ ಕಂಪನಿಗಳು ಲಸಿಕೆಯನ್ನು ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸಿದರೂ ಜಗತ್ತಿನ ಒಟ್ಟು ಜನಸಂಖ್ಯೆಯ ಐದನೇ 1ರಷ್ಟುಜನರಿಗೆ 2022ರ ಒಳಗಾಗಿ ಲಸಿಕೆ ಲಭ್ಯವಾಗುವುದಿಲ್ಲ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಕ್ಲಿನಿಕಲ್‌ ಪ್ರಯೋಗಕ್ಕೆ ಒಳಪಟ್ಟಿರುವ 48 ಲಸಿಕೆಗಳ ಒಟ್ಟು 7.48 ಬಿಲಿಯನ್‌ ಡೋಸ್‌ಗಳನ್ನು ಹಲವಾರು ದೇಶಗಳು ಈಗಾಗಲೇ ಬುಕ್‌ ಮಾಡಿವೆ.

ಇನ್ನೂ ಅಚ್ಚರಿಯ ಸಂಗತಿ ಎಂದರೆ 2021ರ ಅಂತ್ಯದ ಒಳಗಾಗಿ ಈಗಾಗಲೇ ಪ್ರಯೋಗಕ್ಕೆ ಒಳಪಟ್ಟಿರುವ ಲಸಿಕೆಗಳ ಒಟ್ಟು ಉತ್ಪಾದನಾ ಸಾಮರ್ಥ್ಯ ಕೇವಲ 5.96 ಬಿಲಿಯನ್‌ ಡೋಸ್‌. ಅವುಗಳ ಬೆಲೆಯು ಪ್ರತಿ ಡೋಸಿಗೆ 6 ಡಾಲರ್‌ನಿಂದ ಆರಂಭವಾಗಿ 75 ಅಮೆರಿಕನ್‌ ಡಾಲರ್‌ ವರೆಗೂ ಇರಲಿದೆ.

ಹೀಗೆ ಲಭ್ಯವಾಗುವ ಒಟ್ಟು ಲಸಿಕೆಯ ಅರ್ಧದಷ್ಟುಜಗತ್ತಿನ ಶೇ.14ರಷ್ಟುಜನಸಂಖ್ಯೆ ಇರುವ ಶ್ರೀಮಂತ ದೇಶಗಳಿಗೆ ಹೋಗುತ್ತದೆ. ಉಳಿದಂತೆ ಜಗತ್ತಿನ ಶೇ.85ರಷ್ಟುಜನಸಂಖ್ಯೆಯನ್ನು ಹೊಂದಿರುವ ಮಧ್ಯಮ ಮತ್ತು ಬಡ ರಾಷ್ಟ್ರಗಳಿಗೆ ಲಸಿಕೆ ಲಭ್ಯತೆ ಅನಿಶ್ಚಿತವಾಗಿದೆ. ಆ ದೇಶಗಳಿಗೆ ಕೇವಲ 40% ಲಸಿಕೆ ವಿತರಣೆಯಾಗಬಹುದು. ಅದೂ ಅವುಗಳ ಆರ್ಥಿಕ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ ಎಂದು ಸಮೀಕ್ಷೆ ಹೇಳಿದೆ.

click me!