
ವಾಷಿಂಗ್ಟನ್(ಜು.17): ಭಾರತದಲ್ಲಿ ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿದ ಬೆನ್ನಲ್ಲೇ ಇದೀಗ ಅಮೆರಿಕದಲ್ಲೂ ಟಿಕ್‌ಟಾಕ್ ಸೇರಿದಂತೆ ಚೀನಾದ ಆ್ಯಪ್‌ಗಳನ್ನು ನಿಷೇಧಿಸಬೇಕು ಎಂಬ ಅಭಿಯಾನ ಕಾವು ಪಡೆದುಕೊಂಡಿದೆ.
ಈ ಹಿನ್ನೆಲೆಯಲ್ಲಿ ಚೀನಾದ ಆ್ಯಪ್‌ಗಳನ್ನು ನಿಷೇಧಿಸುವ ಕುರಿತಂತೆ ಒಂದು ವಾರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶ್ವೇತ ಭವನದ ಮುಖ್ಯ ಕಾರ್ಯದರ್ಶಿ ಮಾರ್ಕ್ ಮೆಡೋಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿಗೆ 25 ಸಾವಿರ ಫೇಸ್‌ಶೀಲ್ಡ್ ಕೊಟ್ಟ ಸೋನು ಸೂದ್..!
ಟಿಕ್‌ಟಾಕ್, ವಿ ಚ್ಯಾಟ್, ಯುಸಿ ಬ್ರೌಸರ್ ಹಾಗೂ ಇನ್ನಿತರ ಚೀನಾ ಆ್ಯಪ್‌ಗಳಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಇದೆ ಮತ್ತು ವಿದೇಶದ ಸಲಹಾ ಸಂಸ್ಥೆಯೊಂದ ಅಮೆರಿಕದ ನಾಗರಿಕರ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಬಗ್ಗೆ ವಿವಿಧ ಆಡಳಿತಾತ್ಮಕ ವಿಭಾಗಗಳ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಸುಮಾರು 4 ಕೋಟಿಗೂ ಅಧಿಕ ಟಿಕ್‌ಟಾಟ್ ಬಳಕೆದಾರರಿದ್ದಾರೆ.
ಒಬಾಮಾ, ಜೋ ಬೈಡೆನ್, ಮಸ್ಕ್ ಸೇರಿ ಪ್ರಮುಖರ ಟ್ವೀಟರ್ ಖಾತೆ ಹ್ಯಾಕ್!
ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಟೆಸ್ಲಾ ಸಿಇಒ ಎಲಾನ್ ಮಸ್ಕ್, ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ , ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಸೇರಿದಂತೆ ವಿಶ್ವದ ಹಲವು ಖ್ಯಾತನಾಮರ ಟ್ವೀಟರ್ ಖಾತೆಗಳಿಗೆ ಗುರುವಾರ ಕನ್ನ ಹಾಕಲಾಗಿದೆ.
ಕ್ರಿಪ್ಟೋ ಕರೆನ್ಸಿ ವಂಚನೆ ನಡೆಸುವ ಜಾಲ ಈ ಕನ್ನ ಹಾಕಿದ್ದು ಕಂಡುಬಂದಿದೆ. ಹ್ಯಾಕ್ ಆದ ಎಲ್ಲಾ ಖಾತೆಗಳಿಂದಲೂ, ‘ ಕೊರೋನಾ ಹಿನ್ನೆಲೆಯಲ್ಲಿ ನಾನು ನನ್ನ ಸಮುದಾಯಕ್ಕೆ ಕೊಡುಗೆ ನೀಡಲು ಬಯಸುತ್ತೇನೆ. ಯಾರು ನನ್ನ ಖಾತೆಗೆ 1000 ಡಾಲರ್ ಬಿಟ್‌ಕಾಯಿನ್ ಕರೆನ್ಸಿ ಹಾಕುತ್ತಾರೋ ಅವರಿಗೆ ಮರಳಿ 2000 ಡಾಲರ್ ಬಿಟ್ ಕಾಯಿನ್ ಕರೆನ್ಸಿ ಹಾಕಲಾಗುವುದು’ ಎಂಬ ಸಂದೇಶ ರವಾನಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ