ಭಾರತವೂ ಚೀನಾದ ಜನಪ್ರಿಯ ಸೋಶಿಯಲ್ ಮೀಡಿಯಾ ಆಪ್ ಟಿಕ್ ಟಾಕ್ ಬ್ಯಾನ್ ಮಾಡಿ ಸರಿ ಸುಮಾರು ಮೂರು ವರ್ಷಗಳೇ ಕಳೆದಿವೆ. ಚೀನಾ ಮೂಲದ ಈ ಆಪ್ ಅನ್ನು ಬ್ಯಾನ್ ಮಾಡಲು ಅಮೆರಿಕಾ ಕೂಡ ನಿರ್ಧರಿಸಿದೆ.
ಭಾರತವೂ ಚೀನಾದ ಜನಪ್ರಿಯ ಸೋಶಿಯಲ್ ಮೀಡಿಯಾ ಆಪ್ ಟಿಕ್ ಟಾಕ್ ಬ್ಯಾನ್ ಮಾಡಿ ಸರಿ ಸುಮಾರು ಮೂರು ವರ್ಷಗಳೇ ಕಳೆದಿವೆ. ಚೀನಾ ಮೂಲದ ಈ ಆಪ್ ಅನ್ನು ಬ್ಯಾನ್ ಮಾಡಲು ಅಮೆರಿಕಾ ಕೂಡ ನಿರ್ಧರಿಸಿದೆ. ಅಮೆರಿಕಾದಲ್ಲಿ ಸುಮಾರು 170 ಮಿಲಿಯನ್ ಜನ ಈ ಪ್ರಸಿದ್ಧ ಸೋಶಿಯಲ್ ಮೀಡಿಯಾ ಆಪ್ ಅನ್ನು ಬಳಸುತ್ತಿದ್ದಾರೆ. ಆದರೆ ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಅಮೆರಿಕಾ ಈಗ ಈ ಚೀನಿ ಟಿಕ್ ಟಾಕ್ ಆಪ್ ಅನ್ನು ನಿಷೇಧಿಸಲು ನಿರ್ಧರಿಸಿದೆ. ಅಮೆರಿಕಾದಲ್ಲಿ ಈ ಟಿಕ್ ಟಾಕ್ ಆಪ್ ಬಹಳ ಜನಪ್ರಿಯತೆ ಪಡೆದಿದ್ದು, ಸರ್ಕಾರದ ಈ ನಿರ್ಧಾರಕ್ಕೆ ಟಿಕ್ ಟಾಕ್ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿ ಸೆನೆಟ್ ಹೊರಗೆ ಪ್ರತಿಭಟನೆಯನ್ನು ನಡೆಸಿದ್ದಾರೆ.
ಯುಎಸ್ ಸಂಸತ್ ( United States House of Representatives) ಟಿಕ್ ಟಾಕ್ ಬ್ಯಾನ್ ಮಾಡುವ ಮಸೂದೆಯನ್ನು ವಿಶಾಲ ಹೃದಯದಿಂದ ಸ್ವಾಗತಿಸಿದ್ದು, ಚೀನಾ ಹಾಗೂ ಅದರ ದೊಡ್ಡ ತಂತ್ರಜ್ಞಾನದ ವಿರುದ್ಧ ಅಮೆರಿಕಾದ ಮತ್ತೊಂದು ಸಮರ ಇದಾಗಿದೆ. ಟಿಕ್ ಟಾಕ್ ಬ್ಯಾನ್ ಮಾಡುವ ಈ ಮಸೂದೆಗೆ ಅಮೆರಿಕಾ ಸಂಸತ್‌ನಲ್ಲಿ ಉಭಯ ಪಕ್ಷಗಳಿಂದಲೂ ಬೆಂಬಲ ಸಿಕ್ಕಿದ್ದು, ಈ ಮಸೂದೆ ಪರವಾಗಿ 352ರಿಂದ 365 ಮತಗಳು ಸಿಕ್ಕಿವೆ. ಇಲ್ಲಿಂದ ಇದು 100 ಸದಸ್ಯರಿರುವ ಸೆನೆಟ್‌ಗೆ ತಲುಪುತ್ತದೆ. ಈ ಮಸೂದೆ ತಮ್ಮ ಮೇಜಿನ ಬಳಿ ಬಂದರೆ ಸಹಿ ಹಾಕುವುದಾಗಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.
ಮೆಟಲ್ ಡಿಟೆಕ್ಟರ್ ಸಹಾಯದಿಂದ ಮಿಲೇನಿಯರ್ ಆದ ಟಿಕ್ ಟಾಕರ್!
ಅಮೆರಿಕಾ ಕಾಂಗ್ರೆಸ್ ಹಾಗೂ ಸೆನೆಟ್ ಟಿಕ್ ಟಾಕ್ ಬ್ಯಾನ್ ಮಾಡುವುದಕ್ಕಾಗಿ ಶಾಸಕಾಂಗದ ಎಲ್ಲಾ ಆಯ್ಕೆಗಳನ್ನು ಗಣನೆಗೆ ತೆಗೆದುಕೊಂಡಿತ್ತು. ಆದರೆ ಟಿಕ್‌ಟಾಕ್ ನಿಷೇಧದಿಂದ ಮುಕ್ತ ಹಾಗೂ ಅಭಿವ್ಯಕ್ತಿ ಸ್ವಾತಂತ್ರಕ್ಕೆ ತೊಂದರೆಯಾಗುತ್ತದೆ. ಜಾಗತಿಕ ಮಾಹಿತಿ ವರ್ಗಾವಣೆಗೆ ತೊಂದರೆಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಅಮೆರಿಕಾ ಚೀನಾ ನಡುವಣ ಸಂಬಂಧಗಳಿಗೆ ತೊಂದರೆಯಾಗುತ್ತದೆ ಎಂದು ಕೆಲವು ವಿಮರ್ಶಕರು ವಾದ ಮಂಡಿಸಿದ್ದಾರೆ. ಹೊಸದಾಗಿ ಜಾರಿಗೆ ಬರಲಿರುವ ಮಸೂದೆಯಲ್ಲಿ ಅಮೆರಿಕಾದಲ್ಲಿ ಕಾರ್ಯಾಚರಿಸುವ ಟಿಕ್‌ಟಾಕ್ ತನ್ನ ಚೀನಿ ಮಾಲಿಕತ್ವದ ಜೊತೆ ಸಂಪರ್ಕ ಕಡಿತಗೊಳಿಸಬೇಕು ಅಥವಾ ಅಮೆರಿಕಾದಲ್ಲಿ ನಿಷೇಧವಾಗಬೇಕು ಎಂದು ಎರಡು ಆಯ್ಕೆಗಳನ್ನು ನೀಡಲಾಗಿದೆ.
ಹುಟ್ಟಿದ ಮರುಕ್ಷಣವೇ ಮಾರಾಟ, 19 ವರ್ಷದ ಬಳಿಕ ಟಿಕ್‌ಟಾಕ್‌ನಿಂದ ಒಂದಾದ ಟ್ವಿನ್ಸ್!