ಮಾ.21ಕ್ಕೆ ಡೋನಾಲ್ಡ್ ಟ್ರಂಪ್ ಅರೆಸ್ಟ್, ಸುಳಿವು ನೀಡಿ ಪ್ರತಿಭಟನೆಗೆ ಕರೆ ನೀಡಿದ ಮಾಜಿ ಅಧ್ಯಕ್ಷ!

Published : Mar 18, 2023, 07:12 PM IST
ಮಾ.21ಕ್ಕೆ ಡೋನಾಲ್ಡ್ ಟ್ರಂಪ್ ಅರೆಸ್ಟ್, ಸುಳಿವು ನೀಡಿ ಪ್ರತಿಭಟನೆಗೆ ಕರೆ ನೀಡಿದ ಮಾಜಿ ಅಧ್ಯಕ್ಷ!

ಸಾರಾಂಶ

ಮಾರ್ಚ್ 21ಕ್ಕೆ ನನ್ನ ಬಂಧನ ಆಗಲಿದೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭವಿಷ್ಯ ನುಡಿದಿದ್ದಾರೆ. ಇಷ್ಟೇ ಅಲ್ಲ ರಾಷ್ಟ್ರವನ್ನು ಉಳಿಸಲು ಬೆಂಬಲಿಗರಿಗೆ ಪ್ರತಿಭಟನೆಗೆ ಕರೆ ನೀಡಲಾಗಿದೆ.

ವಾಶಿಂಗ್ಟನ್(ಮಾ.18): ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇತ್ತೀಚೆಗೆ ತೆರಿಗೆ ವಂಚನೆ ಪ್ರಕರಣದಲ್ಲಿ ದಂಡ ಪಾವತಿಸಿದ್ದರು. ಬಳಿಕ ಟ್ರಂಪ್ 2024ರ ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರಿ ಸದ್ದು ಮಾಡಿದ್ದರು. ಇದೀಗ ಟ್ರಂಪ್ ಮತ್ತೆ ಸುದ್ದಿಯಾಗಿದ್ದಾರೆ.  ಈ ಬಾರಿ ಟ್ರಂಪ್ ತಮ್ಮದೇ ಭವಿಷ್ಯ ನುಡಿದಿದ್ದಾರೆ. ಮಾರ್ಚ್ 21 ರಂದು ನನ್ನ ಬಂಧನವಾಗಲಿದೆ. ಹೀಗಾಗಿ ಬೆಂಬಲಿಗರು ರಾಷ್ಟ್ರವನ್ನು ಮರಳಿ ಪಡೆಯಲು ಪ್ರತಿಭಟನೆ ನಡೆಸಬೇಕು ಎಂದು ಟ್ರಂಪ್ ಕರೆ ನೀಡಿದ್ದಾರೆ.

ಡೋನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ. ರಿಪಬ್ಲಿಕನ್ ಪಾರ್ಟಿಯ ಅಭ್ಯರ್ಥಿ, ಅಮೆರಿಕ ಮಾಜಿ ಅಧ್ಯಕ್ಷ ಮುಂದಿನ ಮಂಗಳವಾರ ಅರೆಸ್ಟ್ ಆಗಲಿದ್ದಾರೆ. ಬೆಂಬಲಿಗರೇ ನಮ್ಮ ರಾಷ್ಟ್ರವನ್ನು ಮರಳಿ ಪಡೆದುಕೊಳ್ಳಲು ಹೋರಾಡಿ ಎಂದು ಟ್ರಂಪ್ ಟ್ರುತ್ ಸೋಶಿಯಲ್ ಮೂಲಕ ಮನವಿ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಚುನಾವಣೆ: ಟ್ರಂಪ್‌ ವಿರುದ್ಧ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಸ್ಪರ್ಧೆ

 ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಅಲ್ವಿನ್ ಬ್ರೈಗ್ ಕಚೇರಿ ಅತ್ಯಂತ ಭ್ರಷ್ಟ ಹಾಗೂ ರಾಜಕೀಯ ಪ್ರೇರಿತ ಎಂದು ಟ್ರಂಪ್ ಆರೋಪಿಸಿದ್ದರು. ಬಳಿಕ ಅಟಾರ್ನಿ ಅಲ್ವಿನ್ ಬ್ರೈಗ್ ಹಾಗೂ ಟ್ರಂಪ್ ನಡುವಿನ ರಾಜಕೀಯ ಗುದ್ದಾಟ ಆರಂಭಗೊಂಡಿತ್ತು.  ಪೋರ್ನ್ ಸ್ಟಾರ್ ಡೆನಿಯಲ್ ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡ ಟ್ರಂಪ್ ವಿರುದ್ಧ ಸತತ ಆರೋಪ ಮಾಡಿದ್ದರು. ಟ್ರಂಪ್ ಜೊತೆ ಸಂಬಂಧವಿದೆ. 2016ರಲ್ಲಿ 130,000 ಅಮೆರಿಕನ್ ಡಾಲರ್ ಮೊತ್ತವನ್ನ ಟ್ರಂಪ್ ನೀಡಿದ್ದರೆ ಎಂದು ಪೋರ್ನ್ ಸ್ಟಾರ್ ಡೆನಿಯಲ್ ಹೇಳಿದ್ದರು. ಈ ಹೇಳಿಕೆ ಬಳಿಕ ಟ್ರಂಪ್ ಹಣದ ವ್ಯವಹಾರವನ್ನೂ ಅಟಾರ್ನಿ ಅಲ್ವಿನ್ ಬ್ರೈಗ್ ಪ್ರಶ್ನಿಸಿದ್ದರು. ಪ್ರಕರಣ ಮುಚ್ಚಿಹಾಕಲು ಟ್ರಂಪ್ ಹಣ ನೀಡಿದ್ದಾರೆ ಅನ್ನೋ ಆರೋಪದಡಿ ಇದೀಗ ಟ್ರಂಪ್ ಬಂಧನ ವಾಗುವ ಸಾಧ್ಯೆತೆ ಇದೆ ಎಂದು ಹೇಳಲಾಗುತ್ತಿದೆ. 

ಟ್ರಂಪ್ ಯಾವ ಕಾರಣಕ್ಕೆ ಬಂಧನಕ್ಕೊಳಗಾಲಿದ್ದಾರೆ ಅನ್ನೋ ಮಾಹಿತಿಯನ್ನು ನೀಡಿಲ್ಲ. ಟ್ರಂಪ್ ಅಧಿಕಾರದಲ್ಲಿ ಹಲವು ಅಕ್ರಮಗಳು ನಡೆದಿದೆ ಅನ್ನೋ ಆರೋಪಗಳಿವೆ. ಇದರ ಜೊತೆಗೆ ಟ್ರಂಪ್ ತನ್ನ ವ್ಯವಹಾರಗಳಲ್ಲಿ ತೆರಿಗೆ ವಂಚನ ಮಾಡಿದ್ದಾರೆ ಅನ್ನೋ ಆರೋಪವೂ ಇದೆ. 

ಮತ್ತೆ ಟ್ವಿಟ್ಟರ್‌ನಲ್ಲಿ ಶುರುವಾಗಲಿದೆ ಡೊನಾಲ್ಡ್‌ ಟ್ರಂಪ್‌ ಹವಾ..! ಅಮೆರಿಕ ಮಾಜಿ ಅಧ್ಯಕ್ಷರು ಹೇಳಿದ್ದೇನು..?

17 ತೆರಿಗೆ ವಂಚನೆ, ಸಂಚು ಮತ್ತು ವ್ಯಾಪಾರ ದಾಖಲೆಗಳ ತಿರುಚುವಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಂಸ್ಥೆಗೆ ಇತ್ತೀಚೆಗೆ  13 ಕೋಟಿ ರು. ದಂಡ ವಿಧಿಸಲಾಗಿತ್ತು. ಐಶಾರಾಮಿ ವಸ್ತುಗಳನ್ನು ಹೊಂದಿದ್ದರೂ ಸಹ ತೆರಿಗೆ ತಪ್ಪಿಸಿಕೊಳ್ಳಲು ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂದು ಟ್ರಂಪ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಟ್ರಂಪ್‌ ಕಟ್ಟಡದಲ್ಲಿರುವ ಬಾಡಿಗೆರಹಿತ ಅಪಾರ್ಚ್‌ಮೆಂಟ್‌ಗಳು. ಐಶಾರಾಮಿ ಕಾರುಗಳು ಮತ್ತು ಖಾಸಗಿ ಶಾಲಾ ಶಿಕ್ಷಣದಲ್ಲಿ ತೆರಿಗೆ ವಂಚಿಸಲಾಗಿದೆ ಎಂದು ಹೇಳಲಾಗಿತ್ತು.

ಇತ್ತೀಚೆಗೆ ಡೋನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಮೊದಲು ಚುನಾ​ವಣೆ ನಡೆ​ಯುವ 2 ರಾಜ್ಯ​ಗ​ಳಿಗೆ ಭೇಟಿ ನೀಡುವ ಮೂಲಕ ಈ ಪ್ರಚಾ​ರಕ್ಕೆ ಅವರು ಚಾಲ​ನೆ ನೀಡಿ​ದ್ದಾರೆ. ಕೊಲಂಬಿಯಾಗೆ ಪ್ರಯಾ​ಣಿ​ಸುವ ಮುನ್ನ ನ್ಯೂ ಹ್ಯಾಂಪ್‌​ಶೈ​ರ್‌​ನಲ್ಲಿ ನಡೆ​ಯುವ ವಾರ್ಷಿಕ ಜಿಒಪಿ ಸಭೆ​ಯಲ್ಲಿ ಅವರು ಪ್ರಮುಖ ಭಾಷ​ಣ​ಕಾ​ರ​ರಾ​ಗಿ​ದ್ದಾರೆ. ಇಲ್ಲಿ ಅವರು ತಮ್ಮ ನಾಯ​ಕ​ತ್ವದ ತಂಡ​ವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಕಳೆದ ಕೆಲವು ವಾರ​ಗ​ಳಿಂದ ರಿಪ​ಬ್ಲಿ​ಕನ್‌ ಪಕ್ಷದ ನಾಯ​ಕರು ಜನರನ್ನು ಭೇಟಿ ಮಾಡುವ ಮೂಲಕ ಟ್ರಂಪ್‌ ಪರವಾಗಿ ತಮ್ಮದೇ ಯೋಜ​ನೆ​ಗ​ಳನ್ನು ರೂಪಿ​ಸು​ತ್ತಿ​ದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ಸರ್ಕಾರದಲ್ಲಿ 63% ಕಮಿಷನ್‌: ಅಶೋಕ್‌
ಸಾಮಾಜಿಕ ಜಾಲತಾಣ ಖಾತೆ ಪಬ್ಲಿಕ್‌ ಇದ್ರಷ್ಟೇ ವೀಸಾ : ಟ್ರಂಪ್‌