
ತಿರಾನಾ: ಕೆಲ ತಿಂಗಳುಗಳ ಹಿಂದೆ, ವಿಶ್ವದ ಮೊದಲ ಎಐ ಸಚಿವೆ ಎಂದೇ ಸುದ್ದಿಯಾಗಿದ್ದ ಅಲ್ಬೇನಿಯಾದ ‘ಡಿಯೆಲ್ಲಾ’ ಈಗ ಗರ್ಭಿಣಿಯಂತೆ. ಈ ವಿಷಯವನ್ನು ಸ್ವತಃ ಪ್ರಧಾನಿ ಡದಿ ರಾಮಾ ಹಂಚಿಕೊಂಡಿದ್ದು, ‘ಮೊದಲ ಬಾರಿ ಗರ್ಭವತಿಯಾಗಿರುವ ಡಿಯೆಲ್ಲಾ, ಒಬ್ಬ ಸಂದಸನಿಗೆ ಒಂದು ಎಂಬಂತೆ 83 ಎಐ ಮಕ್ಕಳಿಗೆ ಜನ್ಮ ನೀಡಲಿದ್ದಾಳೆ. ಅವುಗಳು 2026ರ ಅಂತ್ಯದ ವೇಳೆಗೆ ತಮ್ಮ ಕೆಲಸ ಶುರು ಮಾಡಲಿವೆ. ಅವುಗಳಿಗೆ ತಮ್ಮ ತಾಯಿಯ ಬಗ್ಗೆಯೂ ಗೊತ್ತಿರಲಿದೆ’ ಎಂದು ಹೇಳಿದ್ದಾರೆ.
ಅತಿ ಭ್ರಷ್ಟ ದೇಶಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಅಲ್ಬೇನಿಯಾದಲ್ಲಿ ಸರ್ಕಾರಿ ಕೆಲಸಗಳಲ್ಲಿ ಪಾರದರ್ಶಕತೆ ತಂದು, ಭ್ರಷ್ಟಾಚಾರ ನಿಗ್ರಹಿಸುವ ಗುರಿಯೊಂದಿಗೆ ಸೆಪ್ಟೆಂಬರ್‌ನಲ್ಲಿ ಡೆಯೆಲ್ಲಾ ಎಂಬ ವರ್ಚುವಲ್ ಸಚಿವೆಯನ್ನು ನೇಮಿಸಿಕೊಳ್ಳಲಾಗಿತ್ತು. ಈಗ ಈಕೆಯ ಬರಲಿರುವ ಮಕ್ಕಳು ಎಂದು ಹೇಳಲಾಗುತ್ತಿರುವ ಮರಿ ಎಐಗಳು, ಪ್ರತಿಯೊಬ್ಬ ಸಂಸದನ ಸಹಾಯಕನಾಗಿ ಇರಲಿವೆ.
ಅವುಗಳ ಪ್ರತಿ ಸಂಸತ್ ಕಲಾಪವನ್ನು ದಾಖಲಿಸುವುದರ ಜತೆಗೆ, ಸಂಸದರು ಆ ವೇಳೆ ಹಾಜರಿರದಿದ್ದರೆ, ಅಲ್ಲಿ ನಡೆದ ಚರ್ಚೆಗಳ ಬಗ್ಗೆ ಮಾಹಿತಿ ಒದಗಿಸಲಿವೆ. ಜತೆಗೆ ಸಂಸದರಿಗೆ ಸೂಕ್ತ ಸಲಹೆಗಳನ್ನೂ ಕೊಡಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ