
ಎರಡು ದೇಶಗಳ ನಡುವೆ ಯಾವ್ಯಾವುದೋ ರೀತಿಗಳ ಯುದ್ಧಗಳನ್ನು ಕೇಳಿರಬಹುದು. ಆದರೆ ಇದೀಗ ಬೇರೆ ಬೇರೆ ದೇಶಗಳ ತಂತ್ರಜ್ಞಾನದ ಮಾಹಿತಿಗಳನ್ನು ಕದಿಯಲು ರಷ್ಯಾ ಮತ್ತು ಚೈನಾ ಆಘಾತಕಾರಿ ಎನ್ನುವಂಥ ಹನಿಟ್ರ್ಯಾಪ್ ಆರಂಭಿಸಿದ್ದು, ಇದನ್ನು ಒಂದು ರೀತಿಯಲ್ಲಿ ಲೈಂ*ಗಿಕ ಯುದ್ಧ ಎನ್ನಲಾಗುತ್ತಿದೆ! ಚೀನಾ ಮತ್ತು ರಷ್ಯಾ ಪಾಶ್ಚಿಮಾತ್ಯ ದೇಶ ಅದರಲ್ಲಿಯೂ ಮುಖ್ಯವಾಗಿ ಅಮೆರಿಕವನ್ನು ಗುರಿಯಾಗಿಸಲು ಸುಂದರ ಮಹಿಳೆಯರನ್ನು ಬಳಸುತ್ತಿವೆ ಎಂದು ಅಮೆರಿಕ ವರದಿ ಮಾಡಿದೆ. ಇದನ್ನು ತಜ್ಞರು ಲೈಂ*ಗಿಕ ಯುದ್ಧ ಎಂದು ಕರೆದಿದ್ದಾರೆ. ಚೀನೀ ಮತ್ತು ರಷ್ಯಾದ ಕಾರ್ಯಕರ್ತರು ಇನ್ನು ಮುಂದೆ ಕೇವಲ ಸೈಬರ್ ದಾಳಿಗಳು ಅಥವಾ ಹ್ಯಾಕಿಂಗ್ ಅಭಿಯಾನಗಳೂ ಅಲ್ಲದೇ ಈ ಲೈಂ*ಗಿಕ ಅಭಿಯಾನ ಆರಂಭಿಸಿರುವುದಾಗಿ ಹೇಳಲಾಗುತ್ತಿದೆ.
ದಿ ಟೈಮ್ಸ್ ಯುಕೆಯಲ್ಲಿನ ವರದಿಯ ಪ್ರಕಾರ, ರಷ್ಯಾ ಮತ್ತು ಚೀನಾದ ಮಹಿಳಾ ಗೂಢಚಾರರು ಸಿಲಿಕಾನ್ ವ್ಯಾಲಿಯಲ್ಲಿರುವ ಟೆಕ್ ದೈತ್ಯರು ಮತ್ತು ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಲಿಂಕ್ಡ್‌ಇನ್ ಮೂಲಕ ಸಂಪರ್ಕ ಸಾಧಿಸಲು ಹಲವು ಚೀನಿ ಸುಂದರಿಯರು ಕಾತರದಿಂದ ಕಾಯುತ್ತಿರುವ ಆಘಾತಕಾರಿ ವಿಷಯವನ್ನು ಪಮೀರ್ ಕನ್ಸಲ್ಟಿಂಗ್‌ನ ಮುಖ್ಯ ಗುಪ್ತಚರ ಅಧಿಕಾರಿ ಜೇಮ್ಸ್ ಮುಲ್ವೆನಾನ್ ರಿವೀಲ್ ಮಾಡಿದ್ದಾರೆ. ಮಹಿಳಾ ಗೂಢಚಾರರು ಎಂದು ಎನ್ನಿಸಿಕೊಂಡಿರುವ ಈ ಸುಂದರಿಯರು ಅಮೆರಿಕದ ಟೆಕ್ ವ್ಯಾಲಿಯ ಮೂಲಕ ಸರ್ಕಾರಿ ರಹಸ್ಯಗಳು ಮತ್ತು ಹೈಟೆಕ್ ಟೆಕ್ನಾಲಿಜಿಯನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ, ಇದಾಗಲೇ ಕೆಲವು ಪ್ರಕರಣಗಳಲ್ಲಿ ಅವರು ಯಶಸ್ವಿ ಕೂಡ ಆಗಿದ್ದಾರೆ ಎನ್ನುವುದು ತಿಳಿದುಬಂದಿದೆ.
ಈ ಯುವತಿಯರು ಟೆಕ್ ದೈತ್ಯರನ್ನು ತಮ್ಮ ಗುರಿಯಾಗಿಸಿಕೊಂಡು ಅವರನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಕೊನೆಗೆ ಅವರನ್ನು ಮದುವೆ ಕೂಡ ಆಗುತ್ತಾರೆ. ಮಕ್ಕಳನ್ನೂ ಪಡೆದಿರುವ ಉದಾಹರಣೆಗಳಿವೆ. ಕೊನೆಗೆ, ಎಲ್ಲಾ ರಹಸ್ಯಗಳನ್ನು ಕದ್ದು ಅದನ್ನು ತಮ್ಮ ದೇಶಕ್ಕೆ ನೀಡುತ್ತಿರುವ ಆತಂಕಕಾರಿ ವರದಿಗಳು ಬಂದಿವೆ.
ಇದಾಗಲೇ, ರಷ್ಯಾದ ಅನ್ನಾ ಚಾಪ್ಮನ್ ಎಂಬ ಯುವತಿ ಒಂದು ಕಾಲದಲ್ಲಿ ಪುಟಿನ್ ಅವರ 2010 ರ ಗೂಢಚಾರ ಜಾಲದ ಮುಖವಾಗಿದ್ದವರು. ಇವರನ್ನು ಕೂಡ ಇದೇ ರೀತಿ ಬಳಸಿಕೊಳ್ಳಲಾಗಿತ್ತು ಎನ್ನಲಾಗುತ್ತಿದೆ. ರಷ್ಯಾದ ಮಿಲಿಟರಿ ಅಕಾಡೆಮಿಯಲ್ಲಿ ಲೈಂ*ಗಿಕ ತಂತ್ರಗಳನ್ನು ಮತ್ತು ಪುರುಷರನ್ನು ಹೇಗೆ ಪ್ರೀತಿಸುವಂತೆ ಮಾಡುವುದು ಎಂಬುದನ್ನು ತಮಗೆ ಕಲಿಸಲಾಗುತ್ತಿದೆ ಎಂದು ಅಲಿಯಾ ರೋಜಾ ಎಂಬ ಯುವತಿ, ಬಾಯ್ಬಿಟ್ಟಿದ್ದರು. ಸ್ವಲ್ಪ ಸಮಯದ ಹಿಂದೆ ಲಂಡನ್‌ನಲ್ಲಿ, ಇಬ್ಬರು ಬಲ್ಗೇರಿಯನ್ ಮಹಿಳೆಯರು - ಕ್ವೆಟೆಲಿನಾ ಗಾಂಚೆವಾ ಮತ್ತು ಟ್ವೆಟಂಕಾ ಡೊಂಚೆವಾ - ಪುಟಿನ್ ವಿರೋಧಿಗಳ ಮೇಲೆ ಕಣ್ಣಿಟ್ಟಿದ್ದ ರಷ್ಯಾದ ಹನಿಟ್ರ್ಯಾಪ್ ರಿಂಗ್‌ನ ಭಾಗವಾಗಿ ಸಿಕ್ಕಿಬಿದ್ದಿದ್ದರು.
2011 ಮತ್ತು 2015 ರ ನಡುವೆ ಅಮೆರಿಕದ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಫಾಂಗ್ ಫಾಂಗ್ ಎಂಬ ಯುವತಿ, ಇಬ್ಬರು ಮೇಯರ್‌ಗಳನ್ನು ಮೋಹಿಸಿ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಬಳಿಕ ಆಕೆ ಚೀನಾಕ್ಕೆ ಪಲಾಯನ ಮಾಡುವ ಮೊದಲು ಅಮೆರಿಕದ ಅಧಿಕಾರಿಗಳೊಂದಿಗೆ ಲೈಂ*ಗಿಕ ಸಂಬಂಧ ಹೊಂದಿದ್ದನ್ನು FBI ಪತ್ತೆಹಚ್ಚಿದೆ. ರಾಜಕೀಯ ವಲಯಗಳಲ್ಲಿ ಹಿಡಿತ ಸಾಧಿಸುವುದು ಅವರ ಉದ್ದೇಶವಾಗಿತ್ತು.
ಈ ಬಗ್ಗೆ ಎಲ್ಲ ರೀತಿಯ ಎಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ವಿಶ್ಲೇಷಕ ಜೆಫ್ ಸ್ಟಾಫ್ ಹೇಳಿದ್ದಾರೆ. ಚೀನಾ ನಮ್ಮ ಸ್ಟಾರ್ಟ್‌ಅಪ್‌ಗಳು, ನಮ್ಮ ಶೈಕ್ಷಣಿಕ ಸಂಸ್ಥೆಗಳು, ನಮ್ಮ ನಾವೀನ್ಯಕಾರರು ಮತ್ತು ನಮ್ಮ ರಕ್ಷಣಾ ಇಲಾಖೆಯಿಂದ ಅನುದಾನಿತ ಸಂಶೋಧನಾ ಯೋಜನೆಗಳನ್ನು ಗುರಿಯಾಗಿಸಿಕೊಂಡಿದೆ. ಇದೆಲ್ಲವೂ ಚೀನಾದ ಆರ್ಥಿಕ ಯುದ್ಧ ತಂತ್ರಕ್ಕೆ ಅವಿಭಾಜ್ಯವಾಗಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ