ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ಗೆ ಏರ್ ಇಂಡಿಯಾ ತನ್ನೆಲ್ಲಾ ವಿಮಾನಗಳ ಸಂಚಾರ ರದ್ದುಗೊಳಿಸಿದೆ. ಏರ್ ಇಂಡಿಯಾ ವಾರಕ್ಕೆ 5 ವಿಮಾನಗಳ ಸಂಚಾರವನ್ನು ಟೆಲ್ ಅವಿವ್‌ಗೆ ಕೈಗೊಳ್ಳುತ್ತದೆ.
ನವದೆಹಲಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ಗೆ ಏರ್ ಇಂಡಿಯಾ ತನ್ನೆಲ್ಲಾ ವಿಮಾನಗಳ ಸಂಚಾರ ರದ್ದುಗೊಳಿಸಿದೆ. ಏರ್ ಇಂಡಿಯಾ ವಾರಕ್ಕೆ 5 ವಿಮಾನಗಳ ಸಂಚಾರವನ್ನು ಟೆಲ್ ಅವಿವ್‌ಗೆ ಕೈಗೊಳ್ಳುತ್ತದೆ.
ಹಮಾಸ್ ಉಗ್ರರ ಕೃತ್ಯಕ್ಕೆ ಜಾಗತಿಕ ಖಂಡನೆ
ನವದೆಹಲಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರು (Hamas militants) ನಡೆಸಿರುವ ದಾಳಿಗೆ ಜಾಗತಿಕ ಖಂಡನೆ ವ್ಯಕ್ತವಾಗಿದೆ. ಅಮೆರಿಕ (America) ಬ್ರಿಟನ್(Britain), ಫ್ರಾನ್ಸ್, ಜರ್ಮನಿ, ಬೆಲ್ಜಿಯಂ(Belgium) ಸೇರಿದಂತೆ ಹಲವು ದೇಶಗಳು ಹಾಗೂ ವಿಶ್ವಸಂಸ್ಥೆ ಮತ್ತು ನ್ಯಾಟೋದಂತಹ ಸಂಸ್ಥೆಗಳು ಈ ಕೃತ್ಯವನ್ನು ಖಂಡಿಸಿವೆ.
ದಾಳಿಯ ಬಳಿಕ ಪ್ರತಿಕ್ರಿಯಿಸಿರುವ ಅಮೆರಿಕ, ‘ಹಮಾಸ್ ಉಗ್ರರ (Hamas terrorists) ಕೃತ್ಯವನ್ನು ನಾವು ಖಂಡಿಸುತ್ತೇವೆ. ಭಯೋತ್ಪಾದನೆಗೆ ಯಾವುದೇ ಸಮಜಾಯಿಷಿ ಇಲ್ಲ. ಅಲ್ಲದೇ ರಕ್ಷಣೆಗಾಗಿ ಇಸ್ರೇಲ್‌ಗೆ ಅಗತ್ಯ ಇರುವ ಸಹಾಯವನ್ನು ಅಮೆರಿಕ ಒದಗಿಸಲಿದೆ’ ಎಂದು ಹೇಳಿದೆ. ‘ಹಮಾಸ್ ಉಗ್ರರ ದಾಳಿಯನ್ನು ನಾವು ಖಂಡಿಸುತ್ತೇವೆ ಹಾಗೂ ಇಸ್ರೇಲ್‌ಗೆ ಅಗತ್ಯವಿರುವ ಎಲ್ಲಾ ಸಹಾಯ ಒದಗಿಸುತ್ತೇವೆ’ ಎಂದು ಬ್ರಿಟನ್ ಹೇಳಿದೆ. ಜೊತೆಗೆ ಉಕ್ರೇನ್, ಸ್ಪೇನ್, ರಷ್ಯಾ, ಪೋಲಂಡ್, ಜಪಾನ್, ಇಟಲಿ, ಗ್ರೀಸ್, ಜರ್ಮನಿ, ಫ್ರಾನ್ಸ್, ಬೆಲ್ಜಿಯಂ (Belgium) ದೇಶಗಳು ಈ ಕೃತ್ಯವನ್ನು ಖಂಡಿಸಿದ್ದು, ಇಸ್ರೇಲ್‌ಗೆ ಬೆಂಬಲ ನೀಡುವುದಾಗಿ ಹೇಳಿವೆ. ಆದರೆ ಇರಾನ್, ಕುವೈತ್, ಕತಾರ್ ದೇಶಗಳು ಈ ಕೃತ್ಯ ನಡೆಯಲು ಇಸ್ರೇಲ್ ಪ್ರಮುಖ ಕಾರಣ ಎಂದು ದೂಷಿಸಿವೆ.
ಇಸ್ರೇಲ್ ಸರ್ಕಾರದ ಜೊತೆ ನಿಂತ ವಿರೋಧ ಪಕ್ಷ, 'ಟೀಕಿಸುವ ಸಮಯವಲ್ಲ, ಎಮರ್ಜೆನ್ಸಿ ಸರ್ಕಾರ ರಚಿಸಿ' ಎಂದ ಲಾಪಿಡ್!
ಉಗ್ರರ ದಾಳಿಯಿಂದ ಇಸ್ರೇಲನ್ನು ಕಾಪಾಡಿದ್ದು ಐರನ್ ಡೋಮ್ ವ್ಯವಸ್ಥೆ
ನವದೆಹಲಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರು 7 ಸಾವಿರಕ್ಕೂ ಹೆಚ್ಚು ರಾಕೆಟ್‌ಗಳಿಂದ ದಾಳಿ ನಡೆಸಿದರೂ ಸಹ ಇಸ್ರೇಲ್‌ನ ಪ್ರಮುಖ ನಗರಗಳು ಈ ದಾಳಿಯಿಂದ ರಕ್ಷಣೆ ಪಡೆದುಕೊಂಡಿದ್ದು ಐರನ್ ಡೋಮ್ ಎಂಬ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಿಂದ. ಇಸ್ರೇಲ್ ಮೇಲೆ ಹಾರಾಡುತ್ತಿದ್ದ ಕ್ಷಿಪಣಿಗಳನ್ನು ಗುರುತಿಸಿ ಅವುಗಳನ್ನು ನಾಶ ಮಾಡುವ ಮೂಲಕ ಈ ವ್ಯವಸ್ಥೆ ಇಸ್ರೇಲನ್ನು ಶತ್ರುಗಳ ದಾಳಿಯಿಂದ ರಕ್ಷಿಸಿದೆ.
ಏನಿದು ಐರನ್ ಡೋಮ್ ವ್ಯವಸ್ಥೆ?
ಐರನ್ ಡೋಮ್ ಎಂಬುದು ಏರ್ ಡಿಫೆನ್ಸ್ ಸಿಸ್ಟಂ ಆಗಿದ್ದು, ಇದನ್ನು ಇಸ್ರೇಲ್‌ನ ಸಂಸ್ಥೆಗಳೇ ಅಭಿವೃದ್ಧಿ ಪಡಿಸಿವೆ. ಇದಕ್ಕಾಗಿ ಅಮೆರಿಕ ಆರ್ಥಿಕ ಸಹಾಯವನ್ನು ಒದಗಿಸಿದೆ. ಈ ಕ್ಷಿಪಣಿ ನಿಯಂತ್ರಣ ವ್ಯವಸ್ಥೆ ಹೊಂದಿರುವ ವಾಹನಗಳನ್ನು ಇಸ್ರೇಲ್ ಪ್ರಮುಖ ನಗರಗಳಲ್ಲೆಲ್ಲಾ ಅಳವಡಿಸಿದೆ. ಇಸ್ರೇಲ್‌ನ ವಾಯು ಸೀಮೆಯ ಮೇಲೆ ಯಾವುದೇ ಕಡಿಮೆ ದೂರ ಚಲಿಸಬಲ್ಲ ಕ್ಷಿಪಣಿ, ಡ್ರೋನ್‌ಗಳು ಕಂಡುಬಂದರೆ ಈ ವಾಹನಗಳಲ್ಲಿ ರೆಡಾರ್ ಅದನ್ನು ಗುರುತಿಸಿ, ಅವು ಗಾಳಿಯಲ್ಲಿರುವಾಗಲೇ ನಾಶ ಮಾಡಲಿದೆ.
'ಉಗ್ರರಿಗೆ ಇದೇ Swords of Iron ಗಿಫ್ಟ್' ಫೈಟರ್ ಜೆಟ್‌ಗೆ ಬಾಂಬ್ ಜೋಡಿಸುವ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್!
ಈ ವ್ಯವಸ್ಥೆ ಸ್ವಯಂಚಾಲಿತವಾಗಿ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಗುರುತಿಸಲಿದ್ದು, ಅವುಗಳಿಂದ ಜನವಸತಿ ಕ್ಷೇತ್ರಗಳು ಅಪಾಯಕ್ಕೆ ಸಿಲುಕಲಿವೆ ಎಂಬುದು ತಿಳಿದುಬರುತ್ತಲೇ ಅವುಗಳನ್ನು ಹೊಡೆದುರುಳಿಸಲಿದೆ. ಒಂದು ವೇಳೆ ರಾಕೆಟ್‌ಗಳು ಖಾಲಿ ಸ್ಥಳದಲ್ಲಿ ಬೀಳುತ್ತಿದ್ದರೆ ಅವುಗಳ ಮೇಲೆ ಈ ವ್ಯವಸ್ಥೆ ದಾಳಿ ಮಾಡುವುದಿಲ್ಲ. ಇದು 4 ಕಿ.ಮೀ.ನಿಂದ 70 ಕಿ.ಮೀ.ವರೆಗೆ ನಿಗಾ ವಹಿಸಲಿದ್ದು, ಶತ್ರುದಾಳಿಯಿಂದ ರಕ್ಷಣೆ ನೀಡಲಿದೆ.
Watch: ಗಾಜಾದ ಮೇಲೆ ಮುಗಿಬಿದ್ದ ಇಸ್ರೇಲ್ ಏರ್‌ಫೋರ್ಸ್, ಬಾಂಬ್ ದಾಳಿಗೆ 160 ಪ್ಯಾಲಿಸ್ತೇನಿಯನ್ನರ ಸಾವು!