ಫ್ಲೈದುಬೈ ವಿಮಾನ ಅಪಹರಣ ಯತ್ನ: ಪಾಕಿಸ್ತಾನ ಸೇರಿ 31 ಮುಸ್ಲಿಂ ದೇಶಗಳ ಪೈಲಟ್‌ಗಳಿಗೆ ಇಸ್ರೇಲ್ ನಿಷೇಧ!

Published : Oct 15, 2026, 05:07 PM IST
Airlines

ಸಾರಾಂಶ

ಒಮಾನ್ ಮೂಲದ ಉಗ್ರ ಪೈಲಟ್ ಫ್ಲೈದುಬೈ ವಿಮಾನವನ್ನು ಅಪಹರಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಇಸ್ರೇಲ್ ಕಠಿಣ ಭದ್ರತಾ ನಿಯಮಗಳನ್ನು ಜಾರಿಗೊಳಿಸಿದೆ. ಇದರನ್ವಯ ಪಾಕಿಸ್ತಾನ ಸೇರಿದಂತೆ ತನ್ನೊಂದಿಗೆ ರಾಜತಾಂತ್ರಿಕ ಸಂಬಂಧವಿಲ್ಲದ 31 ದೇಶಗಳ ಪೈಲಟ್‌ಗಳು ಮತ್ತು ಸಿಬ್ಬಂದಿಗೆ ಇಸ್ರೇಲ್ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಭಾರತೀಯ ಪೈಲಟ್ ಮೇಲಿನ ಈ ದಾಳಿಯ ಕುರಿತು ಎನ್‌ಐಎ ಕೂಡ ತನಿಖೆ ಆರಂಭಿಸಿದೆ.

ಟೆಲ್‌ ಅವೀವ್‌: ಸೆ.30ರಂದು ಒಮಾನ್‌ ಮೂಲದ ಉಗ್ರ ಪೈಲಟ್‌ ಫ್ಲೈದುಬೈ ವಿಮಾನವನ್ನು ಅಪಹರಿಸಿ, ಪತನಗೊಳಿಸಲು ಯತ್ನಿಸಿದ ಹಿನ್ನೆಲೆಯಲ್ಲಿ, ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರದ 31 ದೇಶಗಳ ಪೈಲಟ್‌ಗಳು ಮತ್ತು ವಿಮಾನ ಸಿಬ್ಬಂದಿ ಇಸ್ರೇಲ್ ದೇಶವನ್ನು ಪ್ರವೇಶಿಸದಂತೆ ಏರ್ ಫ್ರಾನ್ಸ್‌ ಮತ್ತು ಯುನೈಟೆಡ್‌ ಏರ್‌ಲೈನ್ಸ್‌ ಸಂಸ್ಥೆಗಳು ನಿರ್ಬಂಧ ಹೇರಿವೆ. ಇದರಲ್ಲಿ ಉಗ್ರ ಪೋಷಣೆಯಿಂದ ಕುಖ್ಯಾತವಾಗಿರುವ ಪಾಕಿಸ್ತಾನವೂ ಸೇರಿದೆ.

ಇಸ್ರೇಲ್‌ ಯಾವ ದೇಶದೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿಲ್ಲವೋ, ಆ ದೇಶದವರು ತನ್ನ ದೇಶದ ವಿಮಾನ ಕಾರ್ಯಾಚರಣೆಯಲ್ಲಿ ಭಾಗವಹಿಸದಂತೆ ಇಸ್ರೇಲ್‌ನಲ್ಲಿ ನಿಯಮವಿದೆ. ಒಮಾನ್‌ ಜತೆ ಯಾವುದೇ ಸಂಬಂಧವಿಲ್ಲದಿದ್ದರೂ, ಅಲ್ಲಿನ ಪೈಲಟ್ ಇಸ್ರೇಲ್‌ಗೆ ಬರುತ್ತಿದ್ದ ವಿಮಾನ ಅಪಹರಿಸಲು ಮುಂದಾಗಿದ್ದ. ಹೀಗಾಗಿ ತನ್ನ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಿರುವ ಇಸ್ರೇಲ್‌, 30 ದೇಶಗಳ ಪೈಲಟ್‌ಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಿದೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಜತೆ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಕತಾರ್‌, ಇರಾನ್‌, ಇರಾಕ್‌ ಕೂಡ ಸೇರಿವೆ. ಈ ನಿಯಮವನ್ನು ಜಾರಿಗೊಳಿಸಿ ಏರ್ ಫ್ರಾನ್ಸ್‌ ಮತ್ತು ಯುನೈಟೆಡ್‌ ಏರ್‌ಲೈನ್ಸ್‌ ಪೈಲಟ್‌ಗಳಿಗೆ ನಿರ್ದೇಶನ ನೀಡಿವೆ.

ಏರ್ ಫ್ರಾನ್ಸ್ ಸಂಸ್ಥೆಯು ತನ್ನ ಪೈಲಟ್‌ಗಳು ಹಾಗೂ ವಿಮಾನ ಸಿಬ್ಬಂದಿಗೆ ಮೆಮೋ ರವಾನಿಸಿದ್ದು, ಈ ಹೊಸ ಭದ್ರತಾ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ. ನಿಯಮ ಉಲ್ಲಂಘಿಸಿದರೆ ಕಾನೂನಾತ್ಮಕ ಹಾಗೂ ಸಂಸ್ಥೆಯ ಮಟ್ಟದ ಶಿಸ್ತುಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

31 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಗೆ ಅನ್ವಯಿಸುವ ನಿರ್ಬಂಧ

ಫ್ರೆಂಚ್ ತನಿಖಾ ವೆಬ್‌ಸೈಟ್ ಒಂದು ವರದಿ ಮಾಡಿರುವಂತೆ, ಇಸ್ರೇಲ್‌ನ ಈ ಹೊಸ ನಿಯಮಾವಳಿಗಳು ಮುಖ್ಯವಾಗಿ 31 ಮುಸ್ಲಿಂ ಬಹುಸಂಖ್ಯಾತ ದೇಶಗಳಿಗೆ ಅನ್ವಯಿಸುತ್ತವೆ. ಈ ಪಟ್ಟಿಯಲ್ಲಿ ಪಾಕಿಸ್ತಾನ, ಇರಾನ್, ಓಮನ್, ಸೌದಿ ಅರೇಬಿಯಾ, ಆಲ್ಜೀರಿಯಾ ಮತ್ತು ಟುನೀಶಿಯಾ ಸೇರಿದಂತೆ ಹಲವು ರಾಷ್ಟ್ರಗಳು ಸೇರಿವೆ. ಈ ದೇಶಗಳ ಪೌರತ್ವವನ್ನು ಹೊಂದಿರುವವರು ಮಾತ್ರವಲ್ಲದೆ, ಈ ರಾಷ್ಟ್ರಗಳ ದ್ವಿ-ರಾಷ್ಟ್ರೀಯತೆ ಹೊಂದಿರುವ ಜಾಗತಿಕ ಸಿಬ್ಬಂದಿಯನ್ನು ಸಹ ಟೆಲ್ ಅವೀವ್‌ಗೆ ತೆರಳುವ ವಿಮಾನಗಳ ಕಾರ್ಯಾಚರಣೆಯಿಂದ ಹೊರಗಿಡಲಾಗುತ್ತಿದೆ.

ಸ್ಮಿತ್‌ ಮಚ್ಛರ್ ಮೇಲಿನ ದಾಳಿ: ಭಾರತದ ಎನ್‌ಐಎನಿಂದಲೂ ತನಿಖೆ

ಫ್ಲೈದುಬೈ ವಿಮಾನವನ್ನು ಹಾರಿಸುತ್ತಿದ್ದ ಭಾರತೀಯ ರಾಷ್ಟ್ರೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಮೇಲಿನ ದಾಳಿಯ ತನಿಖೆಗಾಗಿ ಭಾರತದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪ್ರಕರಣ ದಾಖಲಿಸಿದೆ. ಎಫ್‌ಐಆರ್‌ನಲ್ಲಿ ಅಪಹರಣ ವಿರೋಧಿ ಮತ್ತು ಯುಎಪಿಎ ಕಾಯ್ದೆಗಳನ್ನು ಅನ್ವಯಿಸಲಾಗಿದೆ. ‘ಕ್ಯಾ। ಸ್ಮಿತ್ ಮಚ್ಛರ್ ಮೇಲೆ ‘ಫ್ಲೈದುಬೈ ವಿಮಾನವನ್ನು ಅಪಹರಿಸುವ ಅಥವಾ ಅಪಘಾತಕ್ಕೀಡುಮಾಡುವ ಸ್ಪಷ್ಟ ಪ್ರಯತ್ನ’ದೊಂದಿಗೆ ದಾಳಿ ಮಾಡಲಾಗಿದೆ’ ಎಂದು ಎನ್‌ಐಎ ಆರೋಪಿಸಿದೆ. ಒಮಾನಿ ಪೈಲಟ್‌ನನ್ನು ಇದರಲ್ಲಿ ಮೊದಲ ಆರೋಪಿ ಎಂದು ಹೆಸರಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking: ಪಾಕಿಸ್ತಾನದಲ್ಲಿ ಭೀಕರ ದುರಂತ: 27 ಶಾಲಾ ವಿದ್ಯಾರ್ಥಿಗಳು ದುರ್ಮರಣ! ಆಗಿದ್ದೇನು?
ಸಮುದ್ರದಾಳದಲ್ಲಿ 2,300 ವರ್ಷಗಳಷ್ಟು ಹಳೆಯ ಹಡಗು ಪತ್ತೆ, ಪ್ರಾಚೀನ ನಾವಿಕರ ವಸ್ತುಗಳು, ನಾಣ್ಯ ಹಾಗೂ ಅಪರೂಪದ ಶಾಸನ ಪತ್ತೆ