Saudi Arabia: ಹೌತಿ ಉಗ್ರರ ಭೀಕರ ದಾಳಿಗೆ ಸೌದಿ ದೊರೆಯೇ ಪ್ರಾಣಭೀತಿಯಿಂದ ನಾಪತ್ತೆ!

Kannadaprabha News   | Kannada Prabha
Published : Oct 15, 2026, 06:03 AM IST
houthi missile attack on saudi prince mbs stay safe

ಸಾರಾಂಶ

ಇರಾನ್‌ ಬೆಂಬಲಿತ ಹೌತಿ ಬಂಡುಕೋರರು ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಮತ್ತು ಆರ್ಮ್‌ಕೋ ತೈಲ ಘಟಕದ ಮೇಲೆ ಭೀಕರ ದಾಳಿ ನಡೆಸಿದ್ದಾರೆ. ಈ ದಾಳಿಯ ಹಿನ್ನೆಲೆಯಲ್ಲಿ ಪ್ರಾಣಭೀತಿಗೆ ತುತ್ತಾಗಿರುವ ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅ.6ರ ನಂತರ ದಿಢೀರ್ ನಾಪತ್ತೆಯಾಗಿದ್ದಾರೆ.

ರಿಯಾದ್‌ (ಅ.15): ಇರಾನ್‌ ಬೆಂಬಲಿತ ಹೌತಿ ಬಂಡುಕೋರರಿಂದ ಸೌದಿ ಅರೇಬಿಯಾ ಮೇಲೆ ದಾಳಿ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಾಣಭೀತಿಗೆ ತುತ್ತಾಗಿರುವ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಭೂಗತರಾಗಿದ್ದಾರೆ ಎಂದು ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಸೌದಿ ಮೇಲೆ ಹೌತಿಗಳ ಸಮರ ತೀವ್ರ

ಕಳೆದ ಒಂದು ವಾರದಿಂದ ಸೌದಿ ಮೇಲೆ ಹೌತಿಗಳ ಸಮರ ತೀವ್ರವಾಗಿದ್ದು, ಈಗಾಗಲೇ 2 ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಈ ದಾಳಿಗಳಲ್ಲಿ ವಿವಿಧ ದೇಶಗಳ ಹತ್ತಾರು ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಬಂಡುಕೋರರು ಬೆದರಿಕೆ ಹಾಕಿದ್ದಾರೆ. ಜೊತೆಗೆ ವಿಶ್ವದ ಅತಿದೊಡ್ಡ ತೈಲ ಸಂಸ್ಥೆಯಾಗಿರುವ ಆರ್ಮ್‌ಕೋ ಮೇಲೆ ಬುಧವಾರ ಭೀಕರ ದಾಳಿ ನಡೆಸಿದ್ದಾರೆ.

ಸೌದಿ ದೊರೆ ಸಲ್ಮಾನ್ ಅಲ್ ಸೌದ್ ಭೂಗತ

ಈ ಹಿನ್ನೆಲೆಯಲ್ಲಿ ಜೀವಭಯಕ್ಕೆ ತುತ್ತಾಗಿರುವ ದೊರೆ ಸಲ್ಮಾನ್ ಅಲ್ ಸೌದ್ ಭೂಗತರಾಗಿದ್ದಾರೆ. ಭಾರಿ ಭದ್ರತೆಯುಳ್ಳ ಅರಮನೆಯ ಬಂಕರ್‌ನಲ್ಲಿ ಅಡಗಿ ಕುಳಿತಿರುವ ಅವರನ್ನು ವಿಶೇಷವಾಗಿ ಆಯ್ಕೆ ಮಾಡಲಾದ ಭದ್ರತಾ ಸಿಬ್ಬಂದಿ ಸರ್ಪಗಾವಲು ಹಾಕಿ ರಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ರಾಜಧಾನಿ ರಿಯಾದ್‌ ಮತ್ತು ಜೆಡ್ಡಾದಲ್ಲಿರುವ ಎರಡೂ ಅರಮನೆಗಳಲ್ಲಿ ಎಲ್ಲಾ ಸೌಕರ್ಯಗಳು ಇರುವ ಬಂಕರ್‌ಗಳಿದ್ದು ಈ ಪೈಕಿ ದೊರೆ ಎಲ್ಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿಲ್ಲ. ಅ.6ರಂದು ನಡೆದ ರಕ್ತದಾನ ಶಿಬಿರದಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ಆ ಬಳಿಕ ಎಲ್ಲಿಯೂ ದೊರೆ ಕಾಣಿಸಿಕೊಂಡಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಾಕಿಸ್ತಾನ ಐಷಾರಾಮಿ ರೈಲಿಗೆ ಹತ್ತಿದ ಭಾರತೀಯ ಯೂಟ್ಯೂಬರ್‌; ಪ್ರಯಾಣದ ವೇಳೆ ಅನುಭವಿಸಿದ ಗೋಳು ನೀವೂ ಕೇಳಿ!
ಕಾಡಲ್ಲಿ ಅಡಗುವುದಿಲ್ಲ, ವಿಷಕಾರಿ ಹಾವುಗಳ ಗಾಢ ಬಣ್ಣಗಳ ರಹಸ್ಯ ಬಯಲು! ಪ್ರಕೃತಿಯ 'ವಾರ್ನಿಂಗ್ ಸಿಗ್ನಲ್' ನಿಯಮವೇ ಬೇರೆ!