
ವಾಷಿಂಗ್ಟನ್(ಜ.18): ಇರಾನ್-ಅಮೆರಿಕ ನಡುವಿನ ಯುದ್ಧೋನ್ಮಾದ ತಣ್ಣಗಾಗಿದೆ ಎಂದು ನಿಟ್ಟುಸಿರು ಬಿಡಬೇಕು ಎನ್ನುವಷ್ಟರಲ್ಲೇ, ಇರಾನ್-ಅಮೆರಿಕದ ಪರಮೋಚ್ಛ ನಾಯಕರ ನಡುವೆ ಮತ್ತೆ ಮಾತಿನ ಸಮರ ಶುರುವಾಗಿರುವುದು ಆತಂಕ ಮೂಡಿಸಿದೆ.
ಬ್ರಿಟನ್, ಫ್ರಾನ್ಸ್ ಹಾಗೂ ಜರ್ಮನಿ ರಾಷ್ಟ್ರಗಳು ಅಮೆರಿಕದ ದಾಸರಾಗಿರುವುದು ದುರಂತ ಎಂದು ಇರಾನ್ ಪರಮೋಚ್ಛ ನಾಯಕ ಅಯುತೊಲ್ಲಾ ಅಲಿ ಕಮೇನಿ ಗುಡುಗಿದ್ದಾರೆ.
ಇರಾನ್-ಅಮೆರಿಕ ನಡುವಿನ ಬಿಗುವಿನ ವಾತಾವರಣದ ಸಮಯದಲ್ಲಿ ಈ ಮೂರು ಯುರೋಪಿಯನ್ ರಾಷ್ಟ್ರಗಳು ಅಮೆರಿಕದ ಪರವಾಗಿ ನಿಂತಿದ್ದನ್ನು ಖಂಡಿಸಿರುವ ಕಮೇನಿ, ದುಷ್ಟ ರಾಷ್ಟ್ರದ ದಾಸರಾಗಬೇಡಿ ಎಂದು ಹರಿಯಾಯ್ದಿದ್ದಾರೆ.
ಇನ್ನು ಇರಾನ್ ಪರಮೋಚ್ಛ ನಾಯಕರ ಹೇಳಿಕೆಗೆ ಕೆಂಡಾಮಂಡಲವಾಗಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಆಡುವ ಮಾತಿನ ಮೇಲೆ ಹಿಡಿತವಿರಲಿ ಎಂದು ಎಚ್ಚರಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡೋನಾಲ್ಡ್ ಟ್ರಂಪ್, ಅಮೆರಿಕ ಮತ್ತು ಯುರೋಪ್ ಕುರಿತು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಕಮೇನಿ ಅವರನ್ನು ಒತ್ತಾಯಿಸಿದ್ದಾರೆ.
ಅಮೆರಿಕ, ಇರಾನ್ ನಡುವಿನ ಯುದ್ಧೋನ್ಮಾದ ಥಂಡಾ
ಇರಾನ್ ಆರ್ಥಿಕತೆ ಕುಸಿಯುತ್ತಿದ್ದು, ಆ ದೇಶದ ಜನ ಸಂಕಷ್ಟದಲ್ಲಿದ್ದಾರೆ. ಇವುಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಇರಾನ್ ನಾಯಕರು ನಾಟಕವಾಡುತ್ತಿದ್ದಾರೆ ಎಂದು ಟ್ರಂಪ್ ಹರಿಹಾಯ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ